ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಕರೋನಾ ವೈರಸ್‌ನಿಂದಾಗಿ ಕೆಳದ ಕೆಲ ದಿನಗಳಿಂದ ತೀವ್ರ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳಿಗೆ ದಸರಾ ಸಂಭ್ರಮವು ಭರ್ಜರಿ ಆದಾಯ ತಂದುಕೊಟ್ಟಿದ್ದು, ಟೊಯೊಟಾ ಸೇರಿದಂತೆ ಬಹುತೇಕ ಆಟೋ ಕಂಪನಿಗಳು ವಿವಿಧ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿವೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಲಾಕ್‌ಡೌನ್‌ ವಿಧಿಸಲಾದ ಅವಧಿಯಿಂದ ಕಳೆದ ತಿಂಗಳಿನ ತವಕವು ಹೊಸ ವಾಹನಗಳ ಮಾರಾಟದಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ದಸರಾ ಸಂಭ್ರಮವು ನೀರಿಕ್ಷೆಗೂ ಮೀರಿ ಆದಾಯ ತಂದುಕೊಟ್ಟಿದ್ದು, ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಟೊಯೊಟಾ ಕಂಪನಿಯು ಕೂಡಾ ಅಕ್ಟೋಬರ್ ಅವಧಿಯಲ್ಲಿ ಭಾರೀ ಪ್ರಮಾಣದ ವಾಹನ ಮಾರಾಟ ಮಾಡಿದ್ದು, ತಿಂಗಳ ಕಾರು ಮಾರಾಟದಲ್ಲಿ ಶೇ.52ರಷ್ಟು ಹೆಚ್ಚಿನ ಪ್ರಮಾಣದ ಕಾರು ಮಾರಾಟ ಮಾಡಿದೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಅಕ್ಟೋಬರ್ ಅವಧಿಯಲ್ಲಿ ಒಟ್ಟು 11,866 ಯುನಿಟ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ 744 ಯನಿಟ್‌ಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತುಗೊಳಿಸುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಕರೋನಾ ವೈರಸ್ ಪರಿಣಾಮ ಕಳೆದ ಮೇ ಅವಧಿಯಲ್ಲಿ 1,639 ಯುನಿಟ್, ಜೂನ್‌ನಲ್ಲಿ 3,866 ಯನಿಟ್, ಜುಲೈನಲ್ಲಿ 5,386 ಯನಿಟ್, ಅಗಸ್ಟ್‌ನಲ್ಲಿ 5,555 ಯನಿಟ್, ಸೆಪ್ಟೆಂಬರ್‌ನಲ್ಲಿ 8,116 ಯನಿಟ್ ಮತ್ತು ಅಕ್ಟೋಬರ್‌ನಲ್ಲಿ 12,373 ಯನಿಟ್ ಮಾರಾಟಗೊಳಿಸುವ ಮೂಲಕ ಭಾರೀ ಪ್ರಮಾಣದ ಆದಾಯ ಗಳಿಕೆ ಮಾಡಿದೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಟೊಯೊಟಾ ಕಾರುಗಳ ಮಾರಾಟದಲ್ಲಿ ರೀಬ್ಯಾಡ್ಜ್ ಕಾರು ಮಾದರಿಗಳಾದ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರುಗಳ ಸಂಖ್ಯೆಯು ಅಧಿಕವಾಗಿದ್ದು, ತದನಂತರದಲ್ಲಿ ಇನೋವಾ ಕ್ರಿಸ್ಟಾ ಎಂಪಿವಿ ಕಾರು ಮಾದರಿಯು ದುಬಾರಿ ಬೆಲೆ ನಡುವೆಯೂ ಅತ್ಯಧಿಕ ಗ್ರಾಹಕರನ್ನು ಪಡೆದುಕೊಂಡಿದೆ. ದಸರಾ ಮತ್ತು ದೀಪಾವಳಿ ಪ್ರಯುಕ್ತ ಘೋಷಣೆ ಮಾಡಲಾಗಿದ್ದ ವಿವಿಧ ಡಿಸ್ಕೌಂಟ್‌ಗಳು ಮತ್ತು ಸರಳ ಸಾಲಸೌಲಭ್ಯಗಳು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದ್ದು, ಟೊಯೊಟಾ ಕೂಡಾ ಹಲವಾರು ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ದಸರಾ ನಂತರ ದೀಪಾವಳಿಗೆ ಗರಿಷ್ಠ ವಾಹನ ಮಾರಾಟ ಗುರಿಹೊಂದಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಗರಿಷ್ಠ ಮಟ್ಟದ ಆಫರ್ ನೀಡುತ್ತಿದ್ದು, ಟೊಯೊಟಾ ಕಂಪನಿಯು ಸಹ ವಿವಿಧ ಕಾರು ಮಾದರಿಗಳ ಮೇಲೆ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಗ್ಲಾಂಝಾ, ಯಾರಿಸ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಇನ್ನುಳಿದ ಕಾರು ಮಾದರಿಗಳ ಮೇಲೂ ಹಲವಾರು ಆಫರ್‌ಗಳನ್ನು ನೀಡುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಗ್ಲಾಂಝಾ, ಯಾರಿಸ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳ ಖರೀದಿ ಮೇಲೆ ರೂ. 30 ಸಾವಿರದಿಂದ ರೂ.65 ಸಾವಿರದಷ್ಟು ಆಫರ್ ಘೋಷಣೆ ಮಾಡಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ ಒಳಗೊಂಡಿದೆ.

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಗ್ಲಾಂಝಾ ಕಾರು ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5 ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಲಭ್ಯವಿದ್ದಲ್ಲಿ ಯಾರಿಸ್ ಕಾರು ಖರೀದಿ ಮೇಲೆ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್‌ ಲಭ್ಯವಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದಸರಾ ವೇಳೆ ಭರ್ಜರಿ ಕಾರು ಮಾರಾಟ- ಶೇ.52ರಷ್ಟು ಬೆಳವಣಿಗೆ ಸಾಧಿಸಿದ ಟೊಯೊಟಾ

ಇನ್ನು ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.30 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಇನ್ನುಳಿದ ಯಾವುದೇ ಕಾರು ಮಾದರಿಯ ಮೇಲೆ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿಲ್ಲ. ಡಿಸ್ಕೌಂಟ್ ಬದಲಾಗಿ ವಿಶೇಷವಾಗಿ ಉದ್ಯೋಗಸ್ಥ ಗ್ರಾಹಕರಿಗಾಗಿಯೇ ಆಕರ್ಷಕ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

Most Read Articles

Kannada
Read more on ಟೊಯೊಟಾ toyota
English summary
Toyota India has released its car sales report for the month of October 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X