ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ಹತ್ತಾರು ಸುರಕ್ಷಿತ ಮಾರ್ಗಸೂಚಿಗಳ ನಡುವೆಯೂ ದೇಶಾದ್ಯಂತ ಕರೋನಾ ವೈರಸ್ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಬಿಡದಿಯಲ್ಲಿನ ಟೊಯೊಟಾ ಕೀರ್ಲೋಸ್ಕರ್ ಮೋಟಾರ್ಸ್ ಕಾರು ಉತ್ಪಾದನಾ ಘಟಕದಲ್ಲೂ ನೂರಾರು ಸಿಬ್ಬಂದಿಯಲ್ಲಿ ಸೋಂಕು ದೃಡವಾಗಿದೆ.

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ಕೇಂದ್ರ ಸರ್ಕಾರ ಹೊಸ ಸುರಕ್ಷಾ ಮಾರ್ಗಸೂಚಿಯ ಪಾಲನೆಯ ನಡುವೆಯೂ ವಾಹನ ಉತ್ಪಾದನಾ ಘಟಕಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಿಡದಿಯಲ್ಲಿರುವ ಟೊಯೊಟಾ ಕಾರು ಉತ್ಪಾದನಾ ಘಟಕದಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು 87 ಸಿಬ್ಬಂದಿಯಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ. ಇನ್ನು ಹಲವು ಉದ್ಯೋಗಿಗಳಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆಗಳಿದ್ದು, ಸರ್ಕಾರದ ಮಾರ್ಗಸೂಚಿಯೆಂತೆ ಪ್ರಾಥಮಿಕ ಮತ್ತು ದ್ವಿತಿಯ ಹಂತದ ಸಂಪರ್ಕದಲ್ಲಿರುವ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ವೈರಸ್ ಪತ್ತೆಯಾಗಿರುವ ಸಿಬ್ಬಂದಿಯು ಈ ತಿಂಗಳ 5, 6, 7, 10, 11, 12ರಂದು ಕೆಲಸಕ್ಕೆ ಹಾಜರಾಗಿದ್ದ ಬಗ್ಗೆ ಟೊಯೊಟಾ ಕಂಪನಿಯು ಮಾಹಿತಿ ನೀಡಿದ್ದು, ಪ್ರಾಥಮಿಕ ಹಂತದಲ್ಲೇ ವೈರಸ್ ಪತ್ತೆಯಾಗಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಬರುವ ವಿಶ್ವಾಸ ವ್ಯಕ್ತಪಡಿಸಿದೆ.

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ವೈರಸ್ ಪತ್ತೆಯಾದ ನಂತರ ಸುರಕ್ಷಾ ಮಾರ್ಗಸೂಚಿಯಂತೆ ಕಾರು ಉತ್ಪಾದನಾ ಘಟಕವನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದ್ದು, ವೈರಸ್ ಪತ್ತೆಯಾದ ಸಿಬ್ಬಂದಿಯ ಜೊತೆ ನೇರ ಸಂಪರ್ಕದಲ್ಲಿದ್ದ ಹಲವು ಸಿಬ್ಬಂದಿಯನ್ನ ನಿಯಮಾನುಸಾರವಾಗಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ವೈರಸ್ ಪತ್ತೆಯಾಗಿರುವ ಸಿಬ್ಬಂದಿ ಮತ್ತು ಕ್ವಾರಂಟೈನ್‌ನಲ್ಲಿರುವ ಸಿಬ್ಬಂದಿಗೆ ಧೈರ್ಯ ತುಂಬಿರುವ ಟೊಯೊಟಾ ಕಂಪನಿಯು ಅವರ ಕುಟುಂಬಗಳಿಗೆ ಆರ್ಥಿಕ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವಾಗಿ ಸ್ವಷ್ಟಪಡಿಸಿದ್ದು, ಸೋಂಕು ಭೀತಿ ಹಿನ್ನಲೆಯಲ್ಲಿ ರ‍್ಯಾಂಡಮ್ ಟೆಸ್ಟ್ ನಡೆಸುತ್ತಿರುವುದರಿಂದ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲಾಗಿದೆ ಎಂದು ಹೇಳಿಕೊಂಡಿದೆ.

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ಇನ್ನು ಲಾಕ್‌ಡೌನ್ ಸಂಕಷ್ಟದಲ್ಲೂ ಕರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿರುವ ಟೊಯೊಟಾ ಕಂಪನಿಯು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ ಸಹಾಯದ ಜೊತೆ ವೈದ್ಯಕೀಯ ಉಪಕರಣಗಳ ಸಹಾಯಹಸ್ತ ಚಾಚಿದ್ದು, ತ್ವರಿತ ಗತಿಯಲ್ಲಿ ವೈರಸ್ ಪತ್ತೆಗಾಗಿ ಮೊಬೈಲ್ ಮೆಡಿಕಲ್ ಯುನಿಟ್ ಅನ್ನು ದೇಣಿಯಾಗಿ ನೀಡಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ(ಐಐಎಸ್ಸಿ) ಮೊಬೈಲ್ ಮೆಡಿಕಲ್ ಯುನಿಟ್ ಅನ್ನು ದೇಣಿಯಾಗಿರುವ ನೀಡಿರುವ ಟೊಯೊಟಾ ಕಂಪನಿಯು ಟೆಸ್ಟಿಂಗ್ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗಿದ್ದು, ತ್ವರಿತಗತಿಯಲ್ಲಿ ಟೆಸ್ಟಿಂಗ್ ಮೂಲಕ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿ ತಗ್ಗಿಸಲು ನೆರವಾಗಿದೆ.

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಫೋರ್ಸ್ ಟ್ರಾವೆಲರ್ ಅನ್ನು ಮಾಡಿಫೈಗೊಳಿಸಿರುವ ಟೊಯೊಟಾ ಕಂಪನಿಯು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಜೋಡಣೆ ಮಾಡಿದ್ದು, ವೈರಸ್ ಹೆಚ್ಚಿರುವ ಪ್ರದೇಶಗಳಲ್ಲಿ ನಿಯೋಜನೆ ಮಾಡಲು ಅನುಕೂಲಕರವಾಗಿದೆ.

MOST READ: ಕೋವಿಡ್ 19: ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಟೊಯೊಟಾ ಬಿಡದಿ ಘಟಕದಲ್ಲಿ ಒಂದೇ ವಾರದಲ್ಲಿ 87 ಹೊಸ ಕರೋನಾ ಕೇಸ್ ಪತ್ತೆ

ಇದರೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತುರ್ತು ಪರಿಹಾರ ನಿಧಿಗೂ ದೇಣಿಗೆ ನೀಡಿದ್ದು, ಕರ್ನಾಟಕ ಸರ್ಕಾರಕ್ಕೆ ಪ್ರತ್ಯೇಕವಾಗಿ ರೂ.2 ಕೋಟಿ ಹಣಕಾಸಿನ ನೆರವು ನೀಡಿತ್ತು. ಜೊತೆಗೆ ತನ್ನ ಪಾಲುದಾರ ಕಂಪನಿಗಳ ಜೊತೆಗೂಡಿ ಲಾಕ್‌ಡೌನ್ ವೇಳೆ ಹಸಿದವರಿಗೆ ಊಟ ಮತ್ತು ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಗೊಳಿಸಿ ವಿತರಣೆ ಮಾಡಿದೆ.

Most Read Articles

Kannada
Read more on ಟೊಯೊಟಾ toyota
English summary
Covid-19 Cases In Toyota Kirloskar Plant. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X