ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಅನಾವರಣಗೊಳಿಸಿತ್ತು. ಟೊಯೊಟಾ ಕಂಪನಿಯ ಎಸ್‍ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ.

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್‍ಯುವಿಯಾಗಿದೆ. ಈ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ತನ್ನ ಉತ್ತಮ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಇದೀಗ ಈ ಹೊಸ ಎಸ್‍ಯುವಿಯ ಅಕ್ಸೆಸರೀಸ್ ಬಗ್ಗೆ ಮಾಹಿತಿಯನ್ನು ಟೊಯೊಟಾ ಕಂಪನಿಯು ಬಹಿರಂಗಪಡಿಸಿದೆ. ಇದರಲ್ಲಿ ಫಾರ್ಚೂನರ್ ಬಾನೆಟ್ ಬ್ಯಾಡ್ಜ್ / ಲೋಗೋ, ಫಾಕ್ಸ್ ಫ್ರಂಟ್ ಸ್ಕಿಡ್ ಪ್ಲೇಟ್ ಮತ್ತು ಫಾಕ್ಸ್ ರಿಯರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಇದರೊಂದಿಗೆ ಡೋರ್ ಪ್ರೊಟೆಕ್ಟರ್ ಕಿಟ್ ಬಾನೆಟ್, ಹೈಡ್ರಾಲಿಕ್ ಸ್ಟ್ರಟ್‌ಗಳು ಫ್ಯಾನ್‌ಸಿ ಕ್ರೋಮಿಯಂ ಟ್ಯಾಂಕ್, ಕಿಕ್-ಟು-ಓಪನ್ ಸೆನ್ಸಾರ್ ಟೈಲ್‌ಗೇಟ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ರೇರ್ ವ್ಯೂ ಕ್ಯಾಮೆರಾ, ಫ್ರಂಟ್ ಅಂಡ್ ರೇರ್ ಡ್ಯಾಶ್ ಕ್ಯಾಮೆರಾ, ಸ್ಪೇರ್ ವೀಲ್ ಕವರ್, ಮಡ್ ಗಾರ್ಡ್ ಸೆಟ್ ಮತ್ತು ಏರ್ಲುಂಬಾ ಪ್ರೊ ಎಲೆಕ್ಟ್ರಿಕ್ ಸಪೂರ್ಟ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಹೊಸ ಫಾರ್ಚೂನರ್ ಫೇಸ್‌ಲಿಫ್ಟ್‌ ಮುಂಭಾಗ ಹೊಸ ವಿನ್ಯಾಸವನ್ನು ಹೊಂದಿದೆ. ಡೇ ಟೈಮ್ ರನ್ನಿಂಗ್ ಲೈಟ್ ಹೊಂದಿರುವ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಹೆಡ್‌ಲೈಟ್, ಮೆಶ್ ಮಾದರಿಯ ದೊಡ್ಡದಾದ ಗ್ರಿಲ್, ಮರುರೂಪಿಸಿದ ಮುಂಭಾಗದ ಬಂಪರ್ ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಹೊಸ ಎಸ್‍ಯುವಿಯ ಹಿಂಭಾಗದಲ್ಲಿ ಸ್ಲಿಮ್ಮರ್-ಕಾಣುವ ಎಲ್ಇಡಿ ಟೈಲ್-ಲೈಟ್ ಗಳನ್ನು ಅಳವಡಿಸಲಾಗಿದೆ.

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಇದರೊಂದಿಗೆ ಎಲ್ಇಡಿ ಡಿಆರ್‌ಎಲ್‌ಗಳಿಗೆ ವಿಶಿಷ್ಟ ಮಾದರಿಯನ್ನು ಹೊಂದಿರುವ ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಕ್ರೋಮ್ ಅಪ್ ಫ್ರಂಟ್ ಅನ್ನು ಬದಲಿಸುವ ಗ್ಲೋಸ್ ಬ್ಲ್ಯಾಕ್ ಫಿನಿಶ್, 20 ಇಂಚಿನ ಅಲಾಯ್ ವ್ಹೀಲ್ಸ್, ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಮತ್ತು ಹಿಂದಿನ ಬಂಪರ್ ಬೂಟ್ ಲೀಡ್ ನಲ್ಲಿ ಸಂಯೋಜಿಸಲ್ಪಟ್ಟಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ನಲ್ಲಿ ಎಲ್ಇಡಿ ಆಂಬಿಯೆಂಟ್ ಲೈಟಿಂಗ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು 360 ಡಿಗ್ರಿ ಕ್ಯಾಮೆರಾ. ಲೆಜೆಂಡರ್ ರೂಪಾಂತರವು ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲ್ಕೇ ಮತ್ತು 7 ಏರ್‌ಬ್ಯಾಗ್‌ಗಳು ಮತ್ತು ಸಾಮಾನ್ಯ ಸುರಕ್ಷತಾ ಫೀಚರ್‌ಗಳ ಜೊತೆಗೆ 'ಟೊಯೋಟಾ ಸೇಫ್ಟಿ ಸೆನ್ಸ್' ಅನ್ನು ಸಹ ಹೊಂದಿದೆ.

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ನಲ್ಲಿ 2.4-ಲೀಟರ್, ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಮುಂದುವರೆಸಿದೆ. ಈ ಎಂಜಿನ್ 150 ಎಚ್‌ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಭಾರತದಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್ ಏಕೈಕ ಡೀಸೆಲ್ ಎಂಜಿನ್ ಆಯ್ಕೆಯಾಗಿದೆ .ಈ ಎಂಜಿನ್ ಅಪ್‌ಗ್ರೇಡ್ ಮಾಡಲಾಗಿದ್ದು, ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ನೀಡುತ್ತದೆ.

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಅಕ್ಸೆಸರೀಸ್ ಮಾಹಿತಿ ಬಹಿರಂಗ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ನಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮುಂದುವರೆಸಬಹುದು. ಟೊಯೊಟಾ ಕಂಪನಿಯು ಈ ಫಾರ್ಚೂನರ್ ಫೇಸ್‌ಲಿಫ್ಟ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

Article Published On: Wednesday, June 10, 2020, 13:06 [IST]
English summary
Toyota Fortuner Facelift Official Accessories List Revealed. Read In Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+