ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ತನ್ನ ಹೊಸ ರೀಬ್ಯಾಡ್ಜ್ ಕಾರು ಮಾದರಿಯಾದ ಅರ್ಬನ್ ಕ್ರೂಸರ್ ಆವೃತ್ತಿಯನ್ನು ಶೀಘ್ರದಲ್ಲೇ ವಿತರಣೆ ಆರಂಭಿಸಲು ಸಜ್ಜಾಗಿದ್ದು, ಹೊಸ ಕಾರಿನ ಮೊದಲ ಬ್ಯಾಚ್ ಈಗಾಗಲೇ ಪ್ರಮುಖ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗಿದೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ದಸರಾ ಮತ್ತು ದೀಪಾವಳಿ ಎರಡು ಹಬ್ಬಗಳ ಸಂಭ್ರಮಕ್ಕೂ ಗರಿಷ್ಠ ವಿತರಣೆ ಮಾಡುವ ಗುರಿಹೊಂದಿರುವ ಟೊಯೊಟಾ ಕಂಪನಿಯು ಗರಿಷ್ಠ ಪ್ರಮಾಣದ ಉತ್ಪಾದನೆ ಕೈಗೊಳ್ಳುತ್ತಿದ್ದು, ಮುಂದಿನ ವಾರದ ಆರಂಭದಲ್ಲಿ ವಿತರಣೆಯನ್ನು ಅಧಿಕೃತವಾಗಿ ಆರಂಭಿಸುವ ಸುಳಿವು ನೀಡಿದೆ. ಕಾರು ಬಿಡುಗಡೆಗೂ ಮುನ್ನವೇ ಗ್ರಾಹಕರಿಗೆ ಮೂರು ವರ್ಷಗಳ ಹೆಚ್ಚುವರಿ ವಾರಂಟಿ ಘೋಷಣೆ ಮಾಡಿದ್ದರಿಂದ ಅಧಿಕ ಮಟ್ಟದ ಬೇಡಿಕೆ ಪಡೆದುಕೊಂಡಿರುವ ಟೊಯೊಟಾ ಕಂಪನಿಯು ಕಾರಿನ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸುವ ಯೋಜನೆಯಲ್ಲಿದ್ದು, ಗ್ಲಾಂಝಾ ಮಾದರಿಯೆಂತೆ ಅರ್ಬನ್ ಕ್ರೂಸರ್ ಕೂಡಾ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಲ್ಲಿದೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ಮೂರು ರೂಪಾಂತರ ಹೊಂದಿರುವ ಅರ್ಬನ್ ಕ್ರೂಸರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.40 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.30 ಲಕ್ಷ ಬೆಲೆ ಹೊಂದಿದೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆ ಹೊಂದಿರುವ ಹೊಸ ಅರ್ಬನ್ ಕ್ರೂಸರ್ ಕಾರು ಮಾದರಿಯು ಎರಡು ಸ್ಲಾಟ್ ಹೊಂದಿರುವ ಫ್ರಂಟ್ ಗ್ರಿಲ್, ಎರಡು ತುದಿಗಳಲ್ಲೂ ದಪ್ಪದಾದ ಕ್ರೊಮ್ ಮೂಲಕ ಆವೃತ್ತವಾಗಿದೆ. ಹೆಡ್‌ಲ್ಯಾಂಪ್‌ಗಳು ಗ್ರಿಲ್‌ನ ಎರಡೂ ಬದಿಯಲ್ಲಿವೆ ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಘಟಕಗಳನ್ನು ಹೊಂದಿದ್ದು, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಮುಂಭಾಗದ ಬಂಪರ್ ಕೆಳಭಾಗದಲ್ಲಿ ಬ್ಲ್ಯಾಕ್ ಕ್ಲ್ಯಾಡಿಂಗ್‌ನೊಂದಿಗೆ ವಿನ್ಯಾಸಗೊಂಡಿದ್ದು, ಏರ್ ಇನ್‌ಕೆಟ್ ಮತ್ತು ಫಾಗ್ ಲ್ಯಾಂಪ್‌ಗಳು ಎರಡೂ ತುದಿಯಲ್ಲಿರುತ್ತವೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಅರ್ಬನ್ ಕ್ರೂಸರ್ ಕಾರಿನ ಸೈಡ್ ಪ್ರೊಫೈಲ್ ಮತ್ತು ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಕನಿಷ್ಠ ಮಟ್ಟದ ವಿನ್ಯಾಸ ಗುಣಲಕ್ಷಣಗಳಿದ್ದರೂ ಅಚ್ಚುಕಟ್ಟಾದ ವಿನ್ಯಾಸ ಹೊಂದಿದೆ. ಹಾಗೆಯೇ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳೊಂದಿಗೆ ಸ್ಟೈಲಿಶ್ ಆಗಿರುವ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್ ಮತ್ತು ಬಾಡಿ ಕಲರ್ ಒಳಗೊಂಡಿರುವ ಒಆರ್‌ವಿಎಂಗಳು ಪ್ರಮುಖ ತಾಂತ್ರಿಕ ಅಂಶಗಳಾಗಿವೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಕಾರಿನ ಹಿಂಭಾಗದಲ್ಲಿ ಎಲ್‌ಇಡಿ ಟೈಲ್ ಲೈಟ್‌ಗಳು, ಅದರ ಮೇಲೆ ಆಕರ್ಷಕವಾಗಿರುವ ‘ಅರ್ಬನ್ ಕ್ರೂಸರ್' ಹೆಸರಿನ ಬೋಲ್ಡ್ ಕ್ರೋಮ್ ಸ್ಟ್ರಿಪ್, ಸ್ಟಾಪ್ ಲ್ಯಾಂಪ್ ಹೊಂದಿರುವ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಪ್ರತಿಫಲಕಗಳೊಂದಿಗೆ ಬರುತ್ತದೆ. ಕೆಳಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ ಇದ್ದು, ಇದು ಎಸ್‌ಯುವಿ ಹೊರ ನೋಟದ ಬಲಿಷ್ಠತೆಯನ್ನು ಹೆಚ್ಚಿಸುತ್ತದೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಇನ್ನು ಟೊಯೊಟಾ ಅರ್ಬನ್ ಕ್ರೂಸರ್ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್ ವಿನ್ಯಾಸವು ಗಮನಸೆಳೆಯುತ್ತದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೋಲ್‌ನಲ್ಲಿರುವ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಇತರ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿರುವಂತೆಯೆ ಮುಂದುವರಿಸಲಾಗಿದೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಟೊಯೊಟಾ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಂತೆ ಎಂಜಿನ್ ಆಯ್ಕೆ ಹೊಂದಿದೆ. ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಆರಂಭಿಕ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಅರ್ಬನ್ ಕ್ರೂಸರ್ 1.5-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 17.3ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.76 ಕಿ.ಮೀ ಮೈಲೇಜ್ ನೀಡಲಿದ್ದು, ಮೈಲೇಜ್ ಅಂಕಿ-ಅಂಶಗಳು ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯಿಂದ ಪ್ರಮಾಣೀಕರಿಸಲಾಗಿದೆ.

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಅರ್ಬನ್ ಕ್ರೂಸರ್ ಕಾರು ಮಾದರಿಯಲ್ಲಿ ಟೊಯೊಟಾ ಕಂಪನಿಯು ಹಲವಾರು ಬೆಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್ ನೀಡಿದ್ದು, ಹೊಸ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್ಸ್, 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್-ಟೋನ್ ಇಂಟಿರಿಯರ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೋಲ್, ಕೀ ಲೆಸ್ ಇಗ್ನಿಷನ್, ಹಿಂಬದಿಯ ಆಸನದಲ್ಲಿ 60:40 ಅನುಪಾತದ ಸ್ಪ್ಲಿಟ್ ಸೀಟ್, ಆಟೋ ರೈನ್ ಸೆನ್ಸಿಂಗ್ ವೈಪರ್, ವಿದ್ಯುಮಾನ ಪ್ರೇರಿತ ರಿಯಲ್ ವ್ಯೂ ಮಿರರ್ ಮತ್ತು ಇಂಟ್ರಾಗ್ರೆಟೆಡ್ ಟರ್ನ್ ಸಿಗ್ನಲ್ಸ್ ಸೌಲಭ್ಯವಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಅರ್ಬನ್ ಕ್ರೂಸರ್ ಮೊದಲ ಬ್ಯಾಚ್ ವಿತರಣೆಗೆ ಸಜ್ಜಾದ ಟೊಯೊಟಾ

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್-ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಮಿರರ್ ಜೊತೆ ಪಾರ್ಕಿಂಗ್ ಗೈಡ್‌ಲೆನ್ಸ್, ಸೀಟ್-ಬೆಲ್ಟ್ ಪ್ರಿಟೆನ್ಷನರ್‌ಗಳು ಮತ್ತು ಹೈ-ಸ್ಪೀಡ್ ವಾರ್ನಿಂಗ್ ಸೇರಿ ಹಲವಾರು ಸುರಕ್ಷಾ ಸೌಲಭ್ಯಗಳಿವೆ.

Article Published On: Saturday, October 17, 2020, 8:45 [IST]
English summary
Toyota Kirloskar Motor dispatches the first batch of the all-new Urban Cruiser. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+