Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್
ಟೊಯೊಟಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಕಾರು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗುವ ಮಾಹಿತಿ ದೊರೆತಿದೆ.

ಮಾಹಿತಿಗಳ ಪ್ರಕಾರ, ಹೊಸ ಅರ್ಬನ್ ಕ್ರೂಸರ್ ಕಾರು ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಎಡ್ಎಕ್ಸ್ಐ ಪ್ಲಸ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 1.5 ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಹೊಂದಿರುವ ಹೊಸ ಕಾರು ಮೂಲ ಕಾರಿನ ಬೆಲೆಗಿಂತಲೂ ತುಸು ದುಬಾರಿಯಾಗಲಿದೆ. ಮೂಲ ಕಾರು ಮಾದರಿಯಾದ ವಿಟಾರಾ ಬ್ರೆಝಾಗಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಕಾರು ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿ ನೀಡುವ ತವಕದಲ್ಲಿವೆ.

ಟೊಯೊಟಾ ಹೊಸ ಕಾರು ಮಾದರಿಯು ಇತ್ತೀಚೆಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾದ ರೈಜ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಿಂದಲೂ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆದುಕೊಂಡಿದ್ದು, ವಿಟಾರಾ ಬ್ರೆಝಾಗಿಂತಲೂ ತುಸು ವಿಭಿನ್ನವಾದ ಹೋಲಿಕೆಯನ್ನು ಪಡೆದುಕೊಳ್ಳಲಿದೆ.

ಹೊಸ ರೀಬ್ಯಾಡ್ಜ್ ಕಾರಿನಲ್ಲಿ ಟೊಯೊಟಾ ಬ್ಯಾಡ್ಜ್‌ನೊಂದಿಗೆ ಟ್ವಿನ್ ಸ್ಲಾಟ್ ಬೋಲ್ಡ್ ಡೈನಾಮಿಕ್ ಗ್ರೀಲ್, ಆಕರ್ಷಕ ಫ್ರಂಟ್ ಬಂಪರ್, ಇನ್ ಬಿಲ್ಟ್ ಫ್ಲಕ್ಸ್ ಬುಲ್ ಬಾರ್, ಫ್ಲಕ್ಸ್ ಸ್ಕೀಡ್ ಪ್ಲೇಟ್ ಜೋಡಣೆ ಮಾಡಲಾಗಿದ್ದು, ಕಾರಿನ ಒಳಭಾಗದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಹಾಗೆಯೇ ಎಲ್ಇಡಿ ಪ್ರೋಜೆಕ್ಟರ್ ಯನಿಟ್‌ನಲ್ಲಿ ಎಲ್ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ರೂಫ್ ಸ್ಪಾಯ್ಲರ್, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್ ನೀಡಲಾಗಿದ್ದು, ಒಳಭಾಗದಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಟೋನ್ ಇಂಟಿರಿಯರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ರೈನ್ ಸೆನ್ಸಿಂಗ್ ವೈಪರ್, ಕೀ ಲೆಸ್ ಎಂಟ್ರಿ ನೀಡಲಾಗಿದೆ.

ಪ್ರಯಾಣಿಕ ಸುರಕ್ಷತೆಗಾಗಿ ವಿಟಾರಾ ಬ್ರೆಝಾ ಮಾದರಿಯಲ್ಲೇ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಲೋಡ್ ಲಿಮಿಟ್ ಅಲರ್ಟ್, ಓವರ್ ಸ್ಪೀಡ್ ವಾರ್ನಿಂಗ್ ಸಿಸ್ಟಂ ನೀಡಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಒಟ್ಟು ಒಂಬತ್ತು ಬಣ್ಣಗಳ ಆಯ್ಕೆ(6 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್) ನೀಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಜಿನ್ ವೈಶಿಷ್ಟ್ಯತೆ ಮತ್ತು ವಾರಂಟಿ
ಹೊಸ ಅರ್ಬನ್ ಕ್ರೂಸರ್ ಕಾರು ವಿಟಾರಾ ಬ್ರೆಝಾದಲ್ಲಿ ಜೋಡಣೆ ಮಾಡಲಾಗಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಟೊಯೊಟಾ ಕಂಪನಿಯು ಹೊಸ ಅರ್ಬನ್ ಕ್ರೂಸರ್ ಕಾರಿನ ಮೇಲೆ ಗರಿಷ್ಠ ಮೂರು ವರ್ಷಗಳ ವಾರಂಟಿ ನೀಡಲಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ವಾರಂಟಿ ಆಯ್ಕೆ ಮಾಡಬಹುದಾಗಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇನ್ನು ಜಾರಿಗೆ ಬಂದಿರುವ ಹೊಸ ಬಿಎಸ್-6 ನಿಯಮದಿಂದಾಗಿ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆ ತಂದಿರುವ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್‌ಗಿಂತಲೂ ಕೆಳಗಿನ ಬಹುತೇಕ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕಾರುಗಳನ್ನೇ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿದೆ.