ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಐಷಾರಾಮಿ ಎಂಪಿವಿ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಟೊಯೊಟಾ ವೆಲ್‌ಫೈರ್ ಕಾರು ಚಿತ್ರ ನಟರು ಮತ್ತು ಉದ್ಯಮಿಗಳಿಂದ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಲಯಾಳಂ ಸಿನಿಮಾ ರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ ಮೋಹನ್‌ಲಾಲ್ ಅವರು ವೆಲ್‌ಫೈರ್ ಕಾರಿನ ಮೊದಲ ಯುನಿಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ವೆಲ್‌ಫೈರ್ ಕಾರು ಸದ್ಯಕ್ಕೆ 'ಎಕ್ಸಿಕ್ಯೂಟಿವ್ ಲೌಂಜ್' ಎನ್ನುವ ಸಿಂಗಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.79.50 ಲಕ್ಷ ಬೆಲೆ ಪಡೆದುಕೊಂಡಿದೆ. ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ವೆಲ್‌ಫೈರ್ ಎಂಪಿವಿ ಕಾರು ಟೊಯೊಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದ್ದು, ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಈ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಹೊಸ ವೆಲ್‌ಫೈರ್ ಕಾರು 4,935-ಎಂಎಂ ಉದ್ದ, 1,850-ಎಂಎಂ ಅಗಲ, 1,895-ಎಂಎಂ ಎತ್ತರ ಮತ್ತು 3,000-ಎಂಎಂ ವೀಲ್ಹ್ ಬೆಸ್‌ನೊಂದಿಗೆ 2,815 ಕೆಜಿ ತೂಕ ಹೊಂದಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ ಬರ್ನಿಂಗ್ ಬ್ಲ್ಯಾಕ್, ವೈಟ್ ಪರ್ಲ್, ಗ್ರಾಫೈಟ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಹೊಸ ಕಾರಿನ ಮುಂಭಾಗದಲ್ಲಿ ಕ್ರೋಮ್ ಪಟ್ಟಿಗಳು, ಬಲಿಷ್ಠವಾದ ಬಂಪರ್, ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಹಗಲಿನಲ್ಲಿ ಬೆಳಕು ಹೊರಸೂಸುವ ಗ್ರಿಲ್ ಸಿಸ್ಟಂ ನೀಡಲಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ಎಲೆಕ್ಟ್ರಿಕ್ ಕಂಟ್ರೊಲ್ ಸ್ಲೈಡಿಂಗ್ ಬಾಗಿಲುಗಳು, ದೊಡ್ಡದಾದ ಟೈಲ್ ಲೈಟ್ ಕ್ಲಸ್ಟರ್‌ಗಳು ಬಹಳ ಆಕರ್ಷಕವಾಗಿವೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಹಾಗೆಯೇ ಕಾರಿನ ಒಳಭಾಗವು ಕೂಡಾ ಸಾಕಷ್ಟು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, 7 ಸೀಟರ್ ಸೌಲಭ್ಯದೊಂದಿಗೆ 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಚ್‌ಡಿಎಂಐನೊಂದಿಗ ವೈ-ಪೈ ಸೌಲಭ್ಯವನ್ನು ಹೊಂದಿರುವ 13-ಇಂಚಿನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ರೂಫ್ ಲೈಟ್ ಸಿಸ್ಟಂ ಮತ್ತು 17-ಸ್ಪೀಕರ್ಸ್ ಹೊಂದಿರುವ ಜೆಬಿಎಲ್ ಆಡಿಯೋ ಸಿಸ್ಟಂ ಹೊಂದಿದೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಇದರಲ್ಲಿ ಕ್ಯಾಪ್ಟನ್ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ಪುಷ್‌ಬ್ಯಾಕ್ ಸೌಲಭ್ಯವಲ್ಲದೆ ಆರ್ಮ್‌ರೆಸ್ಟ್ ಮತ್ತು ಲೆಗ್ ರೆಸ್ಟ್ ಒದಗಿಸುತ್ತದೆ. ಜೊತೆಗೆ ಕ್ಯಾಪ್ಟನ್ ಸೀಟುಗಳ ಮತ್ತೊಂದು ವೈಶಿಷ್ಟ್ಯತೆ ಅಂದರೆ ಚಳಿಗಾಲದಲ್ಲಿ ಬಿಸಿಯಾಗುತ್ತವೆ ಮತ್ತು ಬಿಸಿಯಾದ ವಾತಾವರಣವಿದ್ದಲ್ಲಿ ತಂಪು ಹೊರಸೂಸುವ ತಂತ್ರಜ್ಞಾನವನ್ನು ಹೊಂದಿವೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಸುರಕ್ಷತಾ ವೈಶಿಷ್ಟ್ಯತೆಗಳು

ಐಷಾರಾಮಿ ವೆಲ್‌ಫೈರ್ ಕಾರಿನಲ್ಲಿ ವೆಹಿಕಲ್ ಡೈನಾಮಿಕ್ ಇಂಟೆಗ್ರೆಟೆಡ್ ಮ್ಯಾನೆಜ್‌ಮೆಂಟ್ ತಂತ್ರಜ್ಞಾನವನ್ನು(ವಿಡಿಐಎಂ) ಬಳಕೆ ಮಾಡಲಾಗಿದ್ದು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, 7 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೇರಿದಂತೆ ಹಲವು ಭದ್ರತಾ ವೈಶಿಷ್ಟ್ಯತೆಗಳಿವೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರಿನಲ್ಲಿ ಸದ್ಯಕ್ಕೆ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗಿದೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಹೊಸ ಎಂಜಿನ್ ಮಾದರಿಯು 115-ಬಿಎಚ್‌ಪಿ ಮತ್ತು 198-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಭಾಗ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರ್ ಒದಗಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 16.35 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಇನ್ನು ವೆಲ್‌ಫೈರ್ ಎಂಪಿವಿ ಕಾರು ಈಗಾಗಲೇ ಮುಂದಿನ ಮೂರು ತಿಂಗಳ ಅವಧಿಗೆ ಮಾರಾಟಗೊಂಡಿರುವ ಬಗ್ಗೆ ಟೊಯೊಟಾ ಸಂಸ್ಥೆಯು ಖಚಿತಪಡಿಸಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ಬಿಡುಗಡೆಗೊಳಿಸಿರುವ ಟೊಯೊಟಾ ಸಂಸ್ಥೆಯು ಮುಂದಿನ ಮೂರು ತಿಂಗಳ ಅವಧಿಗೆ 180 ಯುನಿಟ್ ಬೇಡಿಕೆ ಪಡೆದುಕೊಂಡಿದೆ.

ಟೊಯೊಟೊ ವೆಲ್‌ಫೈರ್ ಮೊದಲ ಯುನಿಟ್ ಖರೀದಿಸಿದ ಮಲಯಾಳಂ ನಟ

ಜಪಾನ್‌ ಮಾರುಕಟ್ಟೆಯಿಂದ ಸಿಬಿಯು ಆಮದು ನೀತಿಯಡಿ ಭಾರತದಲ್ಲಿ ಮಾರಾಟವಾಗುವ ವೆಲ್‌ಫೈರ್ ಕಾರು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ 180 ಯುನಿಟ್ ಆಮದುಗೊಳ್ಳಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಕಾರುಗಳನ್ನು ಮಾರಾಟ ಮಾಡಲಿದೆ.

More from DriveSpark

Article Published On: Monday, March 2, 2020, 12:26 [IST]
English summary
Toyota Vellfire deliveries begin Malayalam actor Mohanlal among first customers of luxury MPV details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+