ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಟೊಯೊಟಾ ಯಾರೀಸ್ ಕ್ರಾಸ್
ಟೊಯೊಟಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍ಯುವಿಯಾದ ಯಾರೀಸ್ ಕ್ರಾಸ್ ಅನ್ನು ಯುರೋಪಿನ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಟೊಯೊಟಾ ಕಂಪನಿಯ ಸರಣಿಯಲ್ಲಿ ಬಹುನಿರೀಕ್ಷಿತ ಕಾರುಗಳಲ್ಲಿ ಯಾರೀಸ್ ಕ್ರಾಸ್ ಒಂದಾಗಿದೆ.

ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2020ರ ಜಿನೀವಾ ಮೋಟಾರು ಶೋನಲ್ಲಿ ಪ್ರದರ್ಶನ ಪಡಿಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ 2020ರ ಜಿನೀವಾ ಮೋಟಾರು ಶೋ ರದ್ದುಗೊಂಡಿತ್ತು. ಇದರಿಂದಾಗಿ ಈ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಪ್ರತ್ಯೇಕವಾಗಿ ಅನಾವರಣಗೊಳಿಸಲಾಗಿದೆ. ಯಾರೀಸ್ ಕ್ರಾಸ್ ಯೂರೋಪಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾರೀಸ್ ಹ್ಯಾಚ್‍ಬ್ಯಾಕ್ ಅನ್ನು ಆಧರಿಸಿದೆ. ಹೊಸ ಕಾಂಪ್ಯಾಕ್ಟ್ ಎಸ್‍ಯುವಿ ಕಂಪನಿಯ ಟಿಎನ್‌ಜಿಎ-ಬಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಯಾರೀಸ್ ಕ್ರಾಸ್ 4,180 ಎಂಎಂ ಉದ್ದ, 1765 ಎಂಎಂ ಅಗಲ, 1560 ಎಂಎಂ ಎತ್ತರ ಮತ್ತು 2560 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಯಾರೀಸ್ ಕ್ರಾಸ್ ಜಾಗತಿಕವಾಗಿ ಜನಪ್ರಿಯ ಸಿ-ಎಚ್‌ಆರ್ ಕಾಂಪ್ಯಾಕ್ಟ್ ಎಸ್‍ಯುವಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟೊಯೊಟಾ ಎಸ್‍ಯಿವಿಗಳಿಗಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗ ಟೊ-ಟೈರ್ ಗ್ರಿಲ್ ಅನ್ನು ಹೊಂದಿದೆ.

ಈ ಹೊಸ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗೆ ಹೆಡ್ ಲ್ಯಾಂಪ್ ಮತ್ತು ಬಂಪರ್ ಕೆಳಭಾಗದಲ್ಲಿ ವೃತ್ತಾಕಾರದ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಸ್ಕ್ವೇರ್ ಆಫ್ ವ್ಹೀಲ್ ಕಮಾನುಗಳು ಮತ್ತು ಬ್ಲ್ಯಾಕ್ ಪ್ಲೋಟಿಂಗ್ ರೂಪ್ ಅನ್ನು ಹೊಂದಿದೆ.
MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಸ್ಲೀಕ್ ಟೇಲ್ ಲ್ಯಾಂಪ್ ಅನ್ನು ಹೊಂದಿದೆ, ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 18 ಇಂಚಿನ ವ್ಹೀಲ್ ಅನ್ನು ಅಳವಡಿಸಲಾಗಿದೆ. ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಂಬಿಯೆಂಟ್ ಲೈಟಿಂಗ್, ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಡಿಸ್ ಪ್ಲೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೊಂದಿಗೆ ಆಕರ್ಷಕ ಇಂಟಿರಿಯರ್ ಅನ್ನು ಒಳಗೊಂಡಿದೆ.

ಇಂಟಿರಿಯರ್ ನಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆರಾಮದಾಯಕವಾಗಿ ದೂರ ಪ್ರಯಾಣ ಮಾಡಬಹುದು. ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿನ್ಯಾಸವು ಆಕರ್ಷಕವಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ. ಒಂದು ವೇಳೆ ಭಾರತೀಯ ಮಾರುಕಟ್ಟೆಯಲ್ಲಿ ಯಾರೀಸ್ ಕ್ರಾಸ್ ಬಿಡುಗಡೆಯಾದರೆ ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ 300 ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








