ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ಬಣ್ಣವನ್ನು ಗುರುತಿಸಲಾಗದ ಲಕ್ಷಾಂತರ ಜನರಿಗೆ ಕೇಂದ್ರ ಸಾರಿಗೆ ಇಲಾಖೆಯು ಸಿಹಿ ಸುದ್ದಿ ನೀಡಿದ್ದು, ಅವರಿಗೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಬಣ್ಣ ಕುರುಡುತನದಿಂದಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಾಗದವರಿಗೆ ಪರವಾನಗಿ ಪಡೆಯಲು ಸಾಧ್ಯವಾಗಲಿದೆ.

ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ಸಣ್ಣ ಹಾಗೂ ಮಧ್ಯಮ ಪ್ರಮಾಣದ ಬಣ್ಣ ಕುರುಡುತನವನ್ನು ಹೊಂದಿರುವವರು ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಕೇಂದ್ರ ಮೋಟಾರು ವಾಹನ ನಿಯಮ 1989ರ ಫಾರಂ 1 ಹಾಗೂ ಫಾರಂ 1 ಎಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ಇತ್ತೀಚಿನ ದಿನಗಳಲ್ಲಿ, ಬಣ್ಣ ಕುರುಡು ಹೊಂದಿರುವವರು ಡ್ರೈವಿಂಗ್ ಲೈಸೆನ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ ನಿಯಮಗಳನ್ನು ಬದಲಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ವೈದ್ಯಕೀಯ ತಜ್ಞರ ​​ಶಿಫಾರಸುಗಳ ಆಧಾರದ ಮೇಲೆ ಹೆಚ್ಚಿನ ಪ್ರಮಾಣದ ಬಣ್ಣ ಕುರುಡುತನವನ್ನು ಹೊಂದಿರುವವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡದೇ ಇರಲು ನಿರ್ಧರಿಸಲಾಗಿದೆ.

ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ಕರೋನಾ ವೈರಸ್ ನಿಂದ ಉಂಟಾಗಿರುವ ಬಿಕ್ಕಟ್ಟಿನ ಸಮಯದಲ್ಲಿ, ಖಾಸಗಿ ವಾಹನಗಳನ್ನು ಬಳಸುವ ಬಣ್ಣ ಕುರುಡು ಹೊಂದಿರುವವರಿಗೆ ಸಾರಿಗೆ ಇಲಾಖೆಯ ಈ ನಿರ್ಧಾರದಿಂದ ಅನುಕೂಲವಾಗಲಿದೆ. ಸಾಮಾಜಿಕ ಅಂತರವನ್ನು ಅನುಸರಿಸಲು ಬಯಸುವವರಿಗೂ ಇದರಿಂದ ಸಹಾಯವಾಗಲಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ಸರ್ಕಾರವು ವಿಕಲಚೇತನರಿಗೆ ಇನ್ನೂ ಹೆಚ್ಚಿನ ಸಂಖ್ಯೆಯ ಸೇವೆಗಳನ್ನು ನೀಡಲು ಸಂಬಂಧ ಪಟ್ಟ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ವಿಕಲ ಚೇತನರಿಗೆ ಡ್ರೈವಿಂಗ್ ಲೈಸೆನ್ಸ್ ಸೌಲಭ್ಯ ನೀಡಲು ಚಿಂತನೆ ನಡೆಸಲಾಗಿದೆ. ವಿಶ್ವದ ಹಲವು ದೇಶಗಳು ಈಗಾಗಲೇ ಈ ರೀತಿಯ ಸೌಲಭ್ಯವನ್ನು ನೀಡಿವೆ.

ಬಣ್ಣ ಗುರುತಿಸಲಾಗದವರಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಇಲಾಖೆ

ಇದರ ಜೊತೆಗೆ ಸಾರಿಗೆ ಇಲಾಖೆಯು ಬಸ್ ಹಾಗೂ ಟ್ರಕ್‌ಗಳಂತಹ ಭಾರೀ ವಾಹನಗಳ ಎತ್ತರ ಹಾಗೂ ಉದ್ದವನ್ನು ಹೆಚ್ಚಿಸಲು ಅಧಿಸೂಚನೆ ಹೊರಡಿಸಿದೆ. ಹೊಸ ಆದೇಶದ ಪ್ರಕಾರ ಟ್ರಕ್‌ ಹಾಗೂ ಬಸ್‌ಗಳ ಸಾಮರ್ಥ್ಯವನ್ನು 15%ನಷ್ಟು ಹೆಚ್ಚಿಸಲಾಗುವುದು.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Transport Ministry relief for color blind people can get driving licence. Read in Kannada.
Story first published: Tuesday, June 30, 2020, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X