ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಭಾರತದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರಗಳಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯಕ್ಕೆ ರಾತ್ರಿ ವೇಳೆಯಲ್ಲಿ ನಗರಗಳಲ್ಲಿ ಸಂಚರಿಸುತ್ತಿರುವ ಟ್ರಕ್‌ಗಳೇ ಪ್ರಮುಖ ಕಾರಣವೆಂದು ಹೇಳಲಾಗಿದೆ.

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಎನ್‌ಇಆರ್‌ಐ) ವರದಿಯ ಪ್ರಕಾರ ಪಾರ್ಟಿಕುಲೇಟ್ ಮ್ಯಾಟರ್ 10ರ 49% ಹಾಗೂ ಪಾರ್ಟಿಕುಲೇಟ್ ಮ್ಯಾಟರ್ 10ರ 49.5% ರಾತ್ರಿ ವೇಳೆ ಸಂಚರಿಸುವ ಟ್ರಕ್‌ಗಳಿಂದ ಉಂಟಾಗಿದೆ. ರಾತ್ರಿಯಲ್ಲಿ ಟ್ರಕ್‌ಗಳಿಂದ ಹೊರಹೊಮ್ಮುವ ಹೊಗೆ ವಾತಾವರಣಕ್ಕೆ ಹರಡಿ ಚಳಿಗಾಲದಲ್ಲಿ ವಾತಾವರಣವನ್ನು ಅಸ್ತವ್ಯಸ್ತಗೊಳಿಸುವುದರ ಜೊತೆಗೆ ಸೂರ್ಯನ ಬೆಳಕಿಗೆ ಅಡ್ಡಿಪಡಿಸುತ್ತದೆ.

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಟ್ರಕ್‌ಗಳ ಹೊಗೆಯಲ್ಲಿ ಕಂಡುಬರುವ ಅತ್ಯಂತ ಅಪಾಯಕಾರಿ ಪಾರ್ಟಿಕುಲೇಟ್ ಮ್ಯಾಟರ್ 2.5 ಹಾಗೂ ಪಾರ್ಟಿಕುಲೇಟ್ ಮ್ಯಾಟರ್ 10 ಎಂದು ಎನ್‌ಇಆರ್‌ಐ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಪರಿಸರದಲ್ಲಿ ಈ ಪಾರ್ಟಿಕುಲೇಟ್ ಮ್ಯಾಟರ್ ಹೆಚ್ಚಳವು ಅಕಾಲಿಕ ಮರಣದ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಹುತೇಕ ನಗರಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಟ್ರಕ್'ಗಳ ಓಡಾಟಕ್ಕೆ ಅನುಮತಿ ನೀಡಲಾಗಿರುತ್ತದೆ.

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಈ ಸಮಯದಲ್ಲಿ ನಗರದ ಗಾಳಿಯು ಹೆಚ್ಚು ಕಲುಷಿತಗೊಳ್ಳುತ್ತದೆ. ರಾತ್ರಿಯಲ್ಲಿ ಟ್ರಕ್‌ಗಳಿಂದ ಹೊರಹೊಮ್ಮುವ ಹೊಗೆ ಮುಂಜಾನೆಯ ವೇಳೆಗೆ ಗಾಳಿಯ ಗುಣಮಟ್ಟವನ್ನು ಕಲುಷಿತಗೊಳಿಸುತ್ತದೆ. ಎನ್‌ಇಆರ್‌ಐ ಈ ಸಮಯದ ಗಾಳಿಯ ಗುಣಮಟ್ಟವನ್ನು ಕೆಟ್ಟ ಹಾಗೂ ಅಪಾಯಕಾರಿ ಎಂದು ವಿಂಗಡಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಟ್ರಕ್‌ಗಳು ಉಂಟು ಮಾಡುವ ಮಾಲಿನ್ಯ ಪ್ರಮಾಣವನ್ನು ನಿಯಮಿತವಾಗಿ ಪರಿಶೀಲಿಸದ ಕಾರಣ ನಗರಗಳನ್ನು ಪ್ರವೇಶಿಸುವ ಟ್ರಕ್‌ಗಳು ಮಾಲಿನ್ಯವನ್ನುಂಟು ಮಾಡುತ್ತವೆ. ಚಳಿಗಾಲದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣವು ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮುತ್ತದೆ ಎಂದು ಎನ್‌ಇಆರ್‌ಐ ತನ್ನ ವರದಿಯಲ್ಲಿ ತಿಳಿಸಿದೆ.

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಪ್ರತಿ ವರ್ಷ ದೆಹಲಿಯ ವಾಯುಮಾಲಿನ್ಯವು ಚಳಿಗಾಲದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪುತ್ತದೆ. ದೆಹಲಿಯಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ರಾಜ್ಯ ಸರ್ಕಾರವು ಬೆಸ-ಸಮ ನಿಯಮವನ್ನು ಜಾರಿಗೊಳಿಸುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಈ ವರ್ಷ ಚಳಿಗಾಲಕ್ಕೂ ಮುನ್ನವೇ ದೆಹಲಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಜೊತೆಗೆ ಮಾಲಿನ್ಯವನ್ನು ಹರಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಬೆಸ-ಸಮ ನಿಯಮವನ್ನು ದೆಹಲಿಯಲ್ಲಿ ಮೊದಲ ಬಾರಿಗೆ 2016ರಲ್ಲಿ ಜಾರಿಗೆ ತರಲಾಯಿತು. ನಂತರ ಈ ನಿಯಮವನ್ನು ಮೂರು ಬಾರಿ ಜಾರಿಗೆ ತರಲಾಗಿದೆ. ಕಳೆದ ವರ್ಷವೂ ಮಾಲಿನ್ಯ ಹೆಚ್ಚಳವಾದ ಕಾರಣಕ್ಕೆ ಬೆಸ-ಸಮ ನಿಯಮವನ್ನು ಜಾರಿಗೊಳಿಸಲಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ದೆಹಲಿಯಲ್ಲಿ 1 ಕೋಟಿಗೂ ವಾಹನಗಳಿದ್ದು, ಈ ಪೈಕಿ 30-40 ಲಕ್ಷ ವಾಹನಗಳು ಪ್ರತಿದಿನ ರಸ್ತೆಗಳಲ್ಲಿ ಸಂಚರಿಸುತ್ತವೆ. ಈ ವಾಹನಗಳು ಸಿಗ್ನಲ್'ನಲ್ಲಿ ಹೆಚ್ಚು ಹೊತ್ತು ನಿಂತಿರುತ್ತವೆ. ಹೀಗೆ ನಿಂತಿರುವಾಗ ಅವುಗಳ ಎಂಜಿನ್'ಗಳನ್ನು ಆಫ್ ಮಾಡದ ಕಾರಣ ವಾಯುಮಾಲಿನ್ಯ ಹೆಚ್ಚಾಗುತ್ತದೆ.

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ದೆಹಲಿ ಹಾಗೂ ಸುತ್ತಮುತ್ತಲಿರುವ ರಾಜ್ಯಗಳಲ್ಲಿ ರೈತರು ಭತ್ತವನ್ನು ಕಟಾವು ಮಾಡಿದ ನಂತರ ಒಣಹುಲ್ಲಿಗೆ ಬೆಂಕಿ ಇಡುವುದರಿಂದ ಪರಿಸರವು ಹದಗೆಡುತ್ತಿದೆ. ರೈತರು ಒಣಹುಲ್ಲಿಗೆ ಬೆಂಕಿ ಇಡುವುದನ್ನು ತಡೆಯಲು, ಸರ್ಕಾರವು ಆಂಟಿ ಡಸ್ಟ್ ಅಭಿಯಾನವನ್ನು ಆರಂಭಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಯು ಮಾಲಿನ್ಯಕ್ಕೆ ಟ್ರಕ್‌ಗಳೇ ಪ್ರಮುಖ ಕಾರಣವೆಂದು ತಿಳಿಸಿದ ಸಂಶೋಧನಾ ವರದಿ

ಈ ಅಭಿಯಾನದಲ್ಲಿ ಒಣಹುಲ್ಲಿನ ನಾಶಕ್ಕಾಗಿ ರೈತರಿಗೆ ಸಾವಯವ ವಿಭಜಕಗಳನ್ನು ನೀಡಲಾಗುತ್ತದೆ. ಇವುಗಳನ್ನು ಸಿಂಪಡಿಸುವುದರಿಂದ ಒಣಹುಲ್ಲು ಕೊಳೆತು ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.

Most Read Articles

Kannada
English summary
Trucks are the main reason for air pollution says research report. Read in Kannada.
Story first published: Monday, December 28, 2020, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X