ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಯ ಸಿಬ್ಬಂದಿಗಳಿಗೆ ಕರೋನಾ ಸೋಂಕು ತಗುಲಿರುವುದು ಪತ್ತೆಯಾದ ನಂತರ ಟೊಯೊಟಾ ಮೋಟಾರ್ಸ್‌ನ ಇಬ್ಬರು ಸಿಬ್ಬಂದಿಗಳು ಕರೋನಾ ವೈರಸ್‌ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಬಿಡದಿಯ ಉತ್ಪಾದನಾ ಘಟಕದಲ್ಲಿರುವ ಇಬ್ಬರು ಸಿಬ್ಬಂದಿಗಳಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರೂ ಸಿಬ್ಬಂದಿಗಳು ಜೂನ್ 7 ಹಾಗೂ ಜೂನ್ 16ರಂದು ಕೊನೆಯ ಬಾರಿಗೆ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸಿದ್ದರು.

ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಲಾಕ್‌ಡೌನ್‌ನಲ್ಲಿ ವಿನಾಯಿತಿ ದೊರೆತ ನಂತರ ಟೊಯೊಟಾ ಕಂಪನಿಯು ಮೇ 26ರಿಂದ ಬಿಡದಿಯಲ್ಲಿರುವ ತನ್ನ ಘಟಕದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿತು. ಟೊಯೊಟಾ ಕಂಪನಿಯು ಸೀಮಿತ ಸಂಖ್ಯೆಯ ಸಿಬ್ಬಂದಿಗಳೊಂದಿಗೆ ಬಿಡದಿ ಘಟಕದಲ್ಲಿ ಉತ್ಪಾದನೆ ಹಾಗೂ ಪೂರೈಕೆ ಪ್ರಕ್ರಿಯೆಯನ್ನು ಪುನರಾರಂಭಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಇನ್ನುಳಿದ ಸಿಬ್ಬಂದಿಗಳು ವರ್ಕ್ ಫ್ರಮ್ ಹೋಮ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾ ನಗರಗಳಲ್ಲಿರುವ ಸಿಬ್ಬಂದಿ ವರ್ಕ್ ಫ್ರಮ್ ಹೋಮ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಕಂಪನಿಯು ತನ್ನ ಎಲ್ಲಾ ಸಿಬ್ಬಂದಿಗಳಿಗೆ ಸ್ಯಾನಿಟೈಜರ್‌, ಪಿಪಿಇ ಕಿಟ್‌‌ಗಳನ್ನು ಒದಗಿಸಿದೆ. ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಟೊಯೊಟಾ ಕಂಪನಿಯು ಹೇಳಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಇಷ್ಟೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಇಬ್ಬರು ಸಿಬ್ಬಂದಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಕಂಪನಿಯು ತನ್ನ ಘಟಕವನ್ನು ಮುಚ್ಚಿ, ಇತರ ಉದ್ಯೋಗಿಗಳಿಗೆ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ. ಸೋಂಕಿತ ಸಿಬ್ಬಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಉಳಿದ ಸಿಬ್ಬಂದಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಯು ಸ್ಥಳೀಯ ಆಡಳಿತದ ಸಹಾಯವನ್ನೂ ತೆಗೆದುಕೊಳ್ಳುತ್ತಿದೆ.

ಟೊಯೊಟಾ ಸಿಬ್ಬಂದಿಗಳಿಗೂ ತಗುಲಿದ ಕರೋನಾ ವೈರಸ್ ಸೋಂಕು

ಘಟಕವನ್ನು ಮುಚ್ಚಿದ ನಂತರ ಇಡೀ ಘಟಕವನ್ನು ಸ್ಯಾನಿಟೈಜ್ ಮಾಡಲಾಗುತ್ತಿದೆ. ಸೋಂಕಿತ ಉದ್ಯೋಗಿಗಳ ಚಿಕಿತ್ಸಾ ವೆಚ್ಚ ಹಾಗೂ ಕ್ವಾರಂಟೈನ್‌ಗೆ ಒಳಗಾಗುವವರ ವೆಚ್ಚವನ್ನುಭರಿಸುವುದಾಗಿ ಟೊಯೊಟಾ ಕಂಪನಿಯು ಭರವಸೆ ನೀಡಿದೆ. ಕಳೆದ ತಿಂಗಳು, ಹ್ಯುಂಡೈ ಮೋಟಾರ್ಸ್‌ನ ಚೆನ್ನೈ ಘಟಕದಲ್ಲಿ ಮೂವರು ಹಾಗು ಮಾರುತಿ ಸುಜುಕಿಯ ಮಾನೇಸರ್ ಘಟಕದಲ್ಲಿ ಒಬ್ಬರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು.

Most Read Articles

Kannada
English summary
Two Toyota employees in Bidadi plant tested positive for Covid 19. Read in Kannada.
Story first published: Thursday, June 18, 2020, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X