ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಉಬರ್ ಕಂಪನಿಯು ಭಾರತದಲ್ಲಿ ಆಟೋ ರೆಂಟಲ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರು, ದೆಹಲಿ ಎನ್‌ಸಿಆರ್, ಹೈದರಾಬಾದ್, ಚೆನ್ನೈ, ಪುಣೆಯಲ್ಲಿ ಈ ಆಟೋ ರೆಂಟಲ್ ಸೇವೆಯನ್ನು ಆರಂಭಿಸಲಾಗಿದೆ. ಆಟೋ ರೆಂಟಲ್ ಸೇವೆಯಲ್ಲಿ ಗ್ರಾಹಕರು ಉಬರ್‌ ಕಾರನ್ನು ಚಾಲಕನೊಂದಿಗೆ ಕೆಲವು ಗಂಟೆಗಳ ಅವಧಿಗೆ ಕಾಯ್ದಿರಿಸಬಹುದು.

ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಉಬರ್ ಈ ಸೇವೆಗೆ ಪ್ರತಿ ಗಂಟೆಗೆ ರೂ.169 ಅಥವಾ 10 ಕಿ.ಮೀಗಳಿಗೆ ರೂ.169 ನಿಗದಿಪಡಿಸಿದೆ. ಆಟೋ ರೆಂಟಲ್ ಅಡಿಯಲ್ಲಿ ಗ್ರಾಹಕರು ಕೆಲ ಗಂಟೆಗಳವರೆಗೆ ಉಬರ್ ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು. ಗ್ರಾಹಕರು ಗರಿಷ್ಠ 8 ಗಂಟೆಗಳ ಕಾಲ ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು. ಹೊರ ಊರುಗಳಿಗೆ ತೆರಳಿ ಅಲ್ಲಿಯೇ ತಂಗುವ ಕ್ಯಾಬ್ ಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ.

ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಇದರಲ್ಲಿ ಇಂಟರ್ ಸಿಟಿ ಸೇವೆಗಳನ್ನು ಮಾತ್ರ ನೀಡಲಾಗುವುದು. ಈ ಸೇವೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದೆ ಎಂದು ಉಬರ್ ಇಂಡಿಯಾ ಮಾರ್ಕೆಟಿಂಗ್ ಮುಖ್ಯಸ್ಥರಾದ ನಿತೀಶ್ ಭೂಷಣ್ ತಿಳಿಸಿದ್ದಾರೆ. ಈ ಸೇವೆಯು ಗ್ರಾಹಕರಿಗೆ ಫ್ಲೆಕ್ಸಿಬಲ್ ರೈಡ್ ಗಳ ಅನುಭವವನ್ನು ನೀಡುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಸ್ನೇಹಿತರೊಂದಿಗೆ ಶಾಪಿಂಗ್, ಪಾರ್ಟಿ ಅಥವಾ ಪಿಕ್ ನಿಕ್ ಗಳಿಗೆ ಹೋಗುವವರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ. ಈ ಸೇವೆಯಲ್ಲಿ ಕ್ಯಾಬ್‌ಗಳನ್ನು ಅನೇಕ ಸ್ಥಳಗಳಲ್ಲಿ ನಿಲ್ಲಿಸಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕಗಳು ಅನ್ವಯಿಸುವುದಿಲ್ಲ.

ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಕರೋನಾ ವೈರಸ್ ನಿಂದ ಉಂಟಾದ ನಷ್ಟದ ಕಾರಣಕ್ಕೆ ಉಬರ್ ಕಂಪನಿಯು 600 ತಾತ್ಕಾಲಿಕ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದೆ. ವಜಾಗೊಂಡವರಲ್ಲಿ ಚಾಲಕರು, ಹಾಗೂ ಇನ್ನಿತರ ಸಿಬ್ಬಂದಿಗಳು ಸೇರಿದ್ದಾರೆ ಎಂದು ಕಂಪನಿ ಹೇಳಿದೆ. ಭಾರತ ಸೇರಿದಂತೆ ಬೇರೆ ದೇಶಗಳಲ್ಲಿಯೂ ನೌಕರರನ್ನು ವಜಾಗೊಳಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಮುಂದಿನ ಆರು ತಿಂಗಳವರೆಗೆ ನೌಕರರಿಗೆ ವೈದ್ಯಕೀಯ ವಿಮಾ ರಕ್ಷಣೆಯೊಂದಿಗೆ 70 ದಿನಗಳ ಸಂಬಳ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಉಬರ್ ಕಂಪನಿಯು ವಿಶ್ವಾದ್ಯಂತ 6,700 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ

ಕರೋನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಕ್ಯಾಬ್ ಸೇವೆಗೆ ತೊಂದರೆಯುಂಟಾಗಿದೆ. ದೇಶದ ಹಲವು ನಗರಗಳಲ್ಲಿ ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತಿದ್ದರೂ ಪ್ರಯಾಣಿಕರು ಕ್ಯಾಬ್ ಗಳಲ್ಲಿ ಸಂಚರಿಸುತ್ತಿಲ್ಲ. ವೈರಸ್ ಸೋಂಕಿನ ಭೀತಿಯಿಂದ ಜನರು ಕ್ಯಾಬ್‌ ಹಾಗೂ ಬಸ್‌ಗಳಲ್ಲಿ ಸಂಚರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

Most Read Articles

Kannada
English summary
Uber India launches new service for inter city ride. Read in Kannada.
Story first published: Wednesday, August 26, 2020, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X