ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಕರೋನಾ ವೈರಸ್‌ನಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಕೆಲವು ನಿರ್ಬಂಧಗಳೊಂದಿಗೆ ಗ್ರೀನ್ ಝೋನ್ ಹಾಗೂ ಆರೇಂಜ್ ಝೋನ್‌ಗಳಲ್ಲಿ ಲಾಕ್‌ಡೌನ್‌ಗೆ ವಿನಾಯಿತಿ ನೀಡಲಾಗಿದೆ. ತುರ್ತು ವಾಹನಗಳ ಜೊತೆಗೆ ಖಾಸಗಿ ವಾಹನಗಳ ಓಡಾಟಕ್ಕೂ ಸಹ ಅನುಮತಿ ನೀಡಲಾಗಿದೆ.

ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕಿದ್ದರೂ ಹೆಚ್ಚಿನ ಸಂಖ್ಯೆಯ ಜನರು ಮನೆಯಿಂದ ಹೊರ ಬರುತ್ತಿಲ್ಲ. ಬಹಳಷ್ಟು ಜನರು ತಮ್ಮದೇ ಆದ ವಾಹನಗಳನ್ನು ಬಳಸುತ್ತಿದ್ದಾರೆ. ಉಬರ್ ಸೋಮವಾರದಿಂದ ದೇಶದ 34 ನಗರಗಳಲ್ಲಿ ಕ್ಯಾಬ್ ಸೇವೆಗಳನ್ನು ಆರಂಭಿಸಿದೆ. ಕಂಪನಿಯು ಗ್ರಾಹಕರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮಾಸ್ಕ್ ಧರಿಸುವುದನ್ನು ಹಾಗೂ ಸ್ಯಾನಿಟೈಜರ್‌ ಬಳಕೆಯನ್ನು ಕಡ್ಡಾಯಗೊಳಿಸಿದೆ.

ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಬ್ ಚಾಲಕರು ಒಂದು ಟ್ರಿಪ್ ಮಾತ್ರ ಓಡಿಸುವಂತೆ ಕ್ಯಾಬ್ ಕಂಪನಿಗಳು ಸೂಚನೆ ನೀಡಿವೆ. ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಉಬರ್ ತನ್ನ ಕ್ಯಾಬ್ ಚಾಲಕರ ರಕ್ಷಣೆಗಾಗಿ ಡ್ರೈವರ್ ಕ್ಯಾಬಿನ್‌ನಲ್ಲಿ ಪ್ಲಾಸ್ಟಿಕ್ ಶೀಟ್ ವಾಲ್ ನಿರ್ಮಿಸಿದೆ. ಈ ವಾಲ್‌ನಿಂದ ಚಾಲಕನಿಗೆ ಕಾರಿನೊಳಗಿರುವ ಪ್ರಯಾಣಿಕರೊಂದಿಗೆ ಸಂಪರ್ಕವಿರುವುದಿಲ್ಲ. ಇದು ಪಾರದರ್ಶಕ ಪ್ಲಾಸ್ಟಿಕ್ ಶೀಟ್ ಆಗಿದ್ದು, ನೀರಿನಿಂದ ತೊಳೆಯಬಹುದು, ಕೊಳೆಯಾಗಿದ್ದರೆ ಬದಲಿಸಬಹುದು.

ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಈ ಪ್ಲಾಸ್ಟಿಕ್ ಶೀಟ್ ವಾಲ್ ಪ್ರಯಾಣಿಕರು ಕಾರಿನೊಳಗೆ ಸೀನಿದಾಗ ಅಥವಾ ಕೆಮ್ಮಿದಾಗ ಚಾಲಕನನ್ನು ರಕ್ಷಿಸುತ್ತದೆ ಹಾಗೂ ಪ್ರಯಾಣಿಕರು ಚಾಲಕನ ಸಂಪರ್ಕಕ್ಕೆ ಬರದಂತೆ ತಡೆಯುತ್ತದೆ ಎಂದು ಕಂಪನಿ ಹೇಳಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಕಾರ್ಯಾಚರಣೆಯನ್ನು ಪುನರಾರಂಭಿಸಿರುವ ಕ್ಯಾಬ್ ಕಂಪನಿಗಳು ಈ ಹಿಂದೆ ತಾವು ನೀಡುತ್ತಿದ್ದ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಿವೆ. ಕ್ಯಾಬ್ ಕಂಪನಿಗಳು ಕಾರ್ ಪೂಲಿಂಗ್ ಸೇವೆಯನ್ನು ನಿಲ್ಲಿಸಿವೆ. ಇದರಿಂದ ಸ್ನೇಹಿತರೊಂದಿಗೆ ಮೊದಲಿನಂತೆ ಕ್ಯಾಬ್‌ನಲ್ಲಿ ಹೋಗುವುದು ಸದ್ಯದ ಮಟ್ಟಿಗೆ ಕನಸಿನ ಮಾತು.

ಕರೋನಾ ವೈರಸ್ ಸೋಂಕು ತಡೆಗೆ ಹೊಸ ಐಡಿಯಾ ಮಾಡಿದ ಉಬರ್

ಗ್ರಾಹಕರು ಮಾಸ್ಕ್ ಧರಿಸದಿದ್ದರೇ ಟ್ರಿಪ್ ಅನ್ನು ರದ್ದುಗೊಳಿಸುವ ಅಧಿಕಾರವನ್ನು ಕ್ಯಾಬ್ ಕಂಪನಿಗಳು ಚಾಲಕರಿಗೆ ನೀಡಿವೆ. ಕ್ಯಾಬ್‌ನಲ್ಲಿ ಎಸಿಗಳನ್ನು ಆಫ್ ಮಾಡಿ, ವಿಂಡೋಗಳನ್ನು ತೆರೆಯುವಂತೆ ಎಲ್ಲಾ ಚಾಲಕರಿಗೆ ಸೂಚನೆ ನೀಡಲಾಗಿದೆ.

Most Read Articles

Kannada
English summary
Uber introduces plastic wall in cabs. Read in Kannada.
Story first published: Tuesday, May 19, 2020, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X