ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ದೇಶದ ಅತಿದೊಡ್ಡ ಕ್ಯಾಬ್ ಕಂಪನಿಯಾದ ಉಬರ್ ಈಗ ಇ-ರಿಕ್ಷಾಗಳನ್ನು ಆರಂಭಿಸಿದೆ. ದೆಹಲಿಯಲ್ಲಿ ವಾಯುಮಾಲಿನ್ಯವು ವಿಪರೀತವಾಗಿ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ, ದೆಹಲಿ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುತ್ತಿವೆ.

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ಈ ಹಿನ್ನೆಲೆಯಲ್ಲಿ ಉಬರ್ ಕಂಪನಿಯು ಇ-ರಿಕ್ಷಾಗಳಿಗೆ ದೆಹಲಿಯಲ್ಲಿ ಚಾಲನೆ ನೀಡಿದೆ. ಈಗ ದೆಹಲಿಯ ನಿವಾಸಿಗಳು ಉಬರ್ ಆ್ಯಪ್ ಮೂಲಕ ಇ-ರಿಕ್ಷಾಗಳನ್ನು ಬುಕ್ ಮಾಡಬಹುದು ಎಂದು ಉಬರ್ ಕಂಪನಿ ಹೇಳಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಇ-ರಿಕ್ಷಾಗಳನ್ನು ದೆಹಲಿ ಮೆಟ್ರೊದ ಬ್ಲೂ ಲೈನ್‌ನ 26 ಮೆಟ್ರೋ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ.

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ಉಬರ್ ಇ-ರಿಕ್ಷಾಗಳನ್ನು ಅಶೋಕ್ ಪಾರ್ಕ್ ಮೇನ್, ದಾಬ್ರಿ ಮೊರ್, ಇಎಸ್ಐ ಬಸೈದಾರ್ಪುರ್, ಇಂದರ್ಲೋಕ್, ಜನಕ್ಪುರಿ ಪೂರ್ವ, ಜನಕ್ಪುರಿ ಪಶ್ಚಿಮ, ಕನ್ಹಯ್ಯ ನಗರ, ಕೇಶವಪುರಂ, ಮಡಿಪುರ, ಮಾಯಾಪುರಿ, ಮೋತಿ ನಗರ, ಪಾಸ್ಚಿಮ್ ವಿಹಾರ್ ಪೂರ್ವ, ಪಂಜಾಬಿ ಬಾಗ್ ವೆಸ್ಟ್, ರಾಜೌರ್ ರಾಜ ರಾಜ್ ಶಾದಿಪುರಗಳಲ್ಲಿ ನಿಯೋಜಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ಇವುಗಳ ಜೊತೆಗೆ ಶಕುರ್ಪುರ್, ಶಾಸ್ತ್ರಿ ನಗರ, ಶಿವಾಜಿ ಪಾರ್ಕ್, ಸುಭಾಷ್ ನಗರ, ಟ್ಯಾಗೋರ್ ಗಾರ್ಡನ್, ತಿಲಕ್ ನಗರ, ಉತ್ತಮ್ ನಗರ ಪೂರ್ವ, ಉತ್ತಮ್ ನಗರ ಪಶ್ಚಿಮ, ಕೀರ್ತಿ ನಗರ ಮೆಟ್ರೋ ನಿಲ್ದಾಣಗಳಲ್ಲಿಯೂ ಇ-ರಿಕ್ಷಾಗಳನ್ನು ನಿಯೋಜಿಸಲಾಗಿದೆ.

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಳಗಳಲ್ಲಿ ಇ-ರಿಕ್ಷಾಗಳನ್ನು ನಿಯೋಜಿಸಲಾಗುವುದೆಂದು ಉಬರ್ ಕಂಪನಿಯು ತಿಳಿಸಿದೆ. ಈ ಇ-ರಿಕ್ಷಾಗಳು ನಗರದೊಳಗಿನ ಪ್ರಯಾಣಕ್ಕೆ ಸೂಕ್ತವಾಗಿದ್ದು, ಸುಸ್ಥಿರ ಚಲನಶೀಲತೆ ನೀಡುತ್ತವೆ ಎಂದು ಕಂಪನಿ ತಿಳಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

2040ರ ವೇಳೆಗೆ ತನ್ನ ಪ್ಲಾಟ್‌ಫಾರಂನಲ್ಲಿರುವ ಎಲ್ಲಾ ವಾಹನಗಳನ್ನು 100%ನಷ್ಟು ಪರಿಸರ ಸ್ನೇಹಿಯಾಗಿಸಲಾಗುವುದು ಎಂದು ಉಬರ್ ಕಂಪನಿ ಹೇಳಿದೆ. ಉಬರ್ ಕಂಪನಿಯು ಹಂತ ಹಂತವಾಗಿ ತನ್ನ ಪ್ಲಾಟ್‌ಫಾರಂನಲ್ಲಿರುವ ಡೀಸೆಲ್, ಪೆಟ್ರೋಲ್ ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸಲಿದೆ.

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ಇದರ ಮೊದಲ ಹೆಜ್ಜೆಯಾಗಿ ದೆಹಲಿಯಲ್ಲಿ ಇ-ರಿಕ್ಷಾಗಳಿಗೆ ಚಾಲನೆ ನೀಡಲಾಗಿದೆ. ಈ ಇ-ರಿಕ್ಷಾಗಳನ್ನು ಮುಂಬರುವ ದಿನಗಳಲ್ಲಿ ದೇಶದ ಇತರ ನಗರಗಳಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

2019ರ ಐಕ್ಯೂಎಐಆರ್ ರ‍್ಯಾಂಕಿಂಗ್ ಪ್ರಕಾರ ದೆಹಲಿಯು ವಿಶ್ವದ ಐದನೇ ಅತಿ ಹೆಚ್ಚು ಕಲುಷಿತ ನಗರವಾಗಿದೆ. ಈ ಕಾರಣಕ್ಕೆ ದೆಹಲಿಯಲ್ಲಿ ಪರಿಸರ ಸ್ನೇಹಿ ಸಾರಿಗೆಯ ಅಗತ್ಯವನ್ನು ಗಮನಿಸಿರುವ ಉಬರ್ ಇ-ರಿಕ್ಷಾ ಸೇವೆಗೆ ಚಾಲನೆ ನೀಡಿದೆ.

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ಸುಪ್ರೀಂ ಕೋರ್ಟ್ ಸಹ ದೆಹಲಿಯ ವಾತಾವರಣವು ಹೆಚ್ಚು ಕಲುಷಿತಗೊಂಡಿದ್ದು, ಅದನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದೆಹಲಿಯೂ ಇದರಿಂದ ಹೊರತಾಗಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪರಿಸರ ಸ್ನೇಹಿ ಇ-ರಿಕ್ಷಾ ಸೇವೆಗಳಿಗೆ ಚಾಲನೆ ನೀಡಿದ ಉಬರ್

ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿದೆ. ಈ ನೀತಿ ಜಾರಿಯಾದ ಮೂರೇ ವಾರಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ.

Most Read Articles

Kannada
English summary
Uber launches eco friendly e rickshaws in Delhi. Read in Kannada.
Story first published: Saturday, November 7, 2020, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X