ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ಉಬರ್ ಕಂಪನಿಯು ತನ್ನ ಉಬರ್ ಮೆಡಿಕ್ ಸರ್ವಿಸ್ ಮೂಲಕ ತುರ್ತು ಸೇವೆಯನ್ನು ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ರೂ.1 ಕೋಟಿಗಳ ಉಚಿತ ಸೇವೆಯನ್ನು ನೀಡಿದೆ. ಕರೋನಾ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಉಬರ್ ಈ ಉಚಿತ ಸೇವೆಯನ್ನು ನೀಡಲಿದೆ.

ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ಇದರ ಜೊತೆಗೆ ಇತರ ಅಗತ್ಯ ವಸ್ತುಗಳನ್ನು ಪೂರೈಸಲಿದೆ. ಆರೋಗ್ಯ ಸೇವೆಗಳಲ್ಲಿ ಬಳಸಲಾಗುವ ಉಬರ್ ವಾಹನಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಚಾಲಕ ಹಾಗೂ ಪ್ರಯಾಣಿಕರ ನಡುವೆ ಅಂತರ ಕಾಪಾಡಲು ಉಬರ್ ಮೆಡಿಕ್ ಟ್ಯಾಕ್ಸಿಗಳ ಕಾರಿನೊಳಗೆ ರೂಫ್‌ನಿಂದ ಫ್ಲೋರ್‌ವರೆಗೂ ಪ್ಲಾಸ್ಟಿಕ್ ಶೀಟ್‌ಗಳನ್ನು ಅಳವಡಿಸಲಾಗಿದೆ.

ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ಈ ಬಗ್ಗೆ ಊಬರ್ ಕಂಪನಿಯ ಸಿಇಒ ದಾರಾ ಖೋಸ್ರೋಶಾಹಿರವರು ಮಾತನಾಡಿ, ಜಾಗತಿಕ ಅಭಿಯಾನದಡಿಯಲ್ಲಿ ಉಬರ್ ಕಂಪನಿಯು ವಿಶ್ವಾದ್ಯಂತ 10 ಮಿಲಿಯನ್ ಉಚಿತ ಸವಾರಿ ಹಾಗೂ ಆಹಾರ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ಇದರ ಜೊತೆಗೆ ಸುರಕ್ಷತೆಯನ್ನು ಕಾಪಾಡಲು ಎಲ್ಲಾ ಚಾಲಕರಿಗೆ ಸುರಕ್ಷತಾ ಕಾರ್ಯವಿಧಾನಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಪ್ರತಿ ಟ್ರಿಪ್‌ಗಳ ನಡುವೆ ಕಾರುಗಳನ್ನು ಸ್ವಚ್ವಗೊಳಿಸಲು ಚಾಲಕರಿಗೆ ಸ್ಯಾನಿಟೈಜರ್‌ಗಳು ಹಾಗೂ ಸೋಂಕುನಿವಾರಕಗಳನ್ನು ಒದಗಿಸಲಾಗುತ್ತದೆ.

ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ಲಾಕ್‌ಡೌನ್ ಸಮಯದಲ್ಲಿ ಉಬರ್ ತನ್ನ ಚಾಲಕರು ಹಾಗೂ ಕ್ಯಾಬ್ ಪಾಲುದಾರರಿಗೆ ನೆರವಾಗುವ ಉದ್ದೇಶದಿಂದ ಡ್ರೈವರ್ ಕೇರ್ ಫಂಡ್ ಅನ್ನು ರಚಿಸಿದೆ. ಈ ಫಂಡ್ ಮೂಲಕ ಕಂಪನಿಯು ದೇಶದಲ್ಲಿರುವ 55,000 ಉಬರ್ ಚಾಲಕರಿಗೆ ರೂ.20 ಕೋಟಿಯನ್ನು ಹಂಚಿಕೆ ಮಾಡಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ಉಬರ್ ಈ ಫಂಡ್ ಅನ್ನು ರೂ.50 ಕೋಟಿಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉಬರ್‌ನ ಸೆಂಟ್ರಲ್ ಆಪರೇಷನ್ ಮುಖ್ಯಸ್ಥರಾದ ಪವನ್ ವೈಶ್‌ರವರು ಮಾತನಾಡಿ ಈ ವಾರದ ಕೊನೆಗೆ ರೂ.20 ಕೋಟಿ ಸಂಗ್ರಹಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಆರೋಗ್ಯ ಕಾರ್ಯಕರ್ತರಿಗೆ ಹೊಸ ಸೇವೆ ನೀಡಲಿದೆ ಉಬರ್

ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನಲ್ಲಿ ಆರೋಗ್ಯ, ಬ್ಯಾಂಕಿಂಗ್ ಹಾಗೂ ಮೀಡಿಯಾಗಳಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಓಲಾ ಹಾಗೂ ಉಬರ್‌ ಕಂಪನಿಗಳು ಸೇವೆಯನ್ನು ರದ್ದುಪಡಿಸಿರುವುದರಿಂದ ಈ ಕಂಪನಿಗಳ ಚಾಲಕರ ಆದಾಯವೂ ಸ್ಥಗಿತಗೊಂಡಿದೆ.

Most Read Articles

Kannada
English summary
Uber provides free rides worth Rs1 crore to Maharashtra health workers. Read in Kannada.
Story first published: Monday, April 27, 2020, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X