ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತದಲ್ಲೇ ಹೊಸ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡಲು ಹಲವಾರು ಹೊಸ ಯೋಜನೆಗಳನ್ನು ರೂಪಿಸಿರುವ ಕೇಂದ್ರ ಸರ್ಕಾರವು ಆಮದು ಕಾರುಗಳ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಲು ಮುಂದಾಗಿದ್ದು, ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಆಮದು ಸುಂಕ ವಿಧಿಸಲು ಮುಂದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತ ಮತ್ತು ಚೀನಾ ಗಡಿ ತಗಾದೆ ನಂತರ ಚೀನಿ ಆಟೋ ಉತ್ಪಾದನಾ ಬಿಡಿಭಾಗಗಳ ಮೇಲೆ ಅವಲಂಬನೆಯನ್ನು ತಗ್ಗಿಸುತ್ತಿರುವ ಬಹುತೇಕ ಆಟೋ ಕಂಪನಿಗಳು ಭಾರತದಲ್ಲೇ ಅಭಿವೃದ್ದಿಗೊಂಡ ವಾಹನ ಬಿಡಿಭಾಗಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಮುಂಬರುವ 4 ನಾಲ್ಕು ವರ್ಷಗಳಲ್ಲಿ ಸಂಪೂರ್ಣವಾಗಿ ಭಾರತದಲ್ಲೇ ಉತ್ಪಾದನೆಯಾದ ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಂಡ ವಾಹನ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಮಹತ್ವದ ನಿರ್ಧಾರ ತಗೆದುಕೊಳ್ಳಲಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಇದಕ್ಕಾಗಿ ಈಗಿನಿಂದಲೇ ಆಮದು ವಾಹನ ಮಾದರಿಗಳ ಮಾರಾಟವನ್ನು ತಗ್ಗಿಸುವ ನಿಟ್ಟಿನಲ್ಲಿ ಆಮದು ಸುಂಕ ಹೆಚ್ಚಿಸುವುದು ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ವಾಹನ ಬಿಡಿಭಾಗಗಳನ್ನು ಭಾರತದಲ್ಲೇ ಅಭಿವೃದ್ದಿಗೊಳಿಸುವುದು ಹೊಸ ಯೋಜನೆಯ ಪ್ರಮುಖ ಭಾಗವಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಈ ಕುರಿತಂತೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್ ಸಂಘದ 60ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿರುನ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯುಷ್ ಗೋಯಲ್ ಅವರು ದೇಶಿಯ ಮಾರುಕಟ್ಟೆಯಲ್ಲಿನ ಆಟೋ ಉತ್ಪಾದನೆಯು ಹೆಚ್ಚಿಸುವುದರ ಜೊತೆಗೆ ರಫ್ತು ಪ್ರಮಾಣವನ್ನು ಹೆಚ್ಚಿಸಲು ಹಲವು ಕ್ರಮಗಳು ಅಗತ್ಯವಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಇದರಲ್ಲಿ ಆಮದು ವಾಹನ ಮೇಲೆ ಸುಂಕ ಹೆಚ್ಚಿಸುವುದು ಮತ್ತು ಬಿಡಿಭಾಗಗಳನ್ನು ಪೂರ್ಣಪ್ರಮಾಣದಲ್ಲಿ ಭಾರತದಲ್ಲೇ ಅಭಿವೃದ್ದಿಗೊಳಿಸಿ ಬಳಕೆಗೆ ಆದ್ಯತೆ ನೀಡುವಂತೆ ಆಟೋ ಕಂಪನಿಗಳಿಗೆ ಸಲಹೆ ನೀಡಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಆಟೋ ಉತ್ಪಾದನಾ ಪ್ರಕ್ರಿಯೆಯು ಸಹಜ ಸ್ಥಿತಿಯತ್ತ ಮರಳಲಿದೆ ಎಂದಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಇನ್ನು ಕೇಂದ್ರ ಸರ್ಕಾರವು ಕರೋನಾ ವೈರಸ್ ಪರಿಣಾಮ ಭಾರೀ ಪ್ರಮಾಣದ ತೆರಿಗೆ ಆದಾಯದ ನಷ್ಟ ಅನುಭವಿಸುತ್ತಿದ್ದು, ಆದಾಯ ಕ್ರೂಢೀಕರಣಕ್ಕಾಗಿ ವಿವಿಧ ಆದಾಯ ಮೂಲಗಳನ್ನು ಉತ್ತೇಜಿಸಲು ಹೊಸ ವಾಹನಗಳ ಖರೀದಿ ಮೇಲೆ ಜಿಎಸ್‌ಟಿ ವಿನಾಯ್ತಿ ನೀಡುವುದು ಬಹುತೇಕ ಖಚಿತವಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಸದ್ಯ ತೀವ್ರ ಕುಸಿತ ಕಂಡಿರುವ ಹೊಸ ವಾಹನಗಳ ಮಾರಾಟವು ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳಲು ತುಸು ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ತಜ್ಞರ ಪ್ರಕಾರ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಬರಲು ಕನಿಷ್ಠ 2 ವರ್ಷ ಬೇಕಾಗಬಹುದೆಂದು ಅಂದಾಜಿಸಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಆಟೋ ಮೊಬೈಲ್ ಉದ್ಯಮ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್) ಸಂಘವು ಕೂಡಾ ಇದೇ ಅಂಶದ ಮೇಲೆ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಹೆಚ್ಚಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಕೇಂದ್ರದ ಭಾರೀ ಕೈಗಾರಿಕಾ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ವಾಹನ ಉದ್ಯಮಕ್ಕೆ ತಾತ್ಕಲಿಕವಾಗಿ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸರುವುದಾಗಿ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್ ಸಂಘದ ಸಭೆಯಲ್ಲಿಯೇ ಮಾತನಾಡಿ ದ್ವಿಚಕ್ರ ವಾಹನ ಮಾತ್ರವಲ್ಲ ಎಲ್ಲಾ ಬಗೆಯ ವಾಹನಗಳ ಮೇಲೂ ಶೇ.10 ರಷ್ಟು ಜಿಎಸ್‌ಟಿ ವಿನಾಯ್ತಿ ನೀಡಬಹುದಾಗಿದೆ ಎಂಬ ಹೇಳಿಕೆ ನೀಡಿದ್ದಾರೆ.

Most Read Articles

Kannada
English summary
Govt. May Hike Import Duty On Cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X