ಕಾರು ಚಾಲನೆ ವೇಳೆ ಟಚ್‌ಸ್ಕ್ರೀನ್ ಬಳಕೆಯು ಕುಡಿದು ವಾಹನ ಚಾಲನೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿ?

ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಬೇರೆ ಕಂಪನಿಯ ಕಾರುಗಳಿಗಿಂತ ಭಿನ್ನವಾಗಿಸಲು ಹಲವಾರು ಫೀಚರ್ ಗಳನ್ನು ನೀಡುತ್ತವೆ. ಹೀಗೆ ನೀಡುವ ಫೀಚರ್ ಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಹ ಸೇರಿರುತ್ತದೆ. ಹೊಸದಾಗಿ ಬಿಡುಗಡೆಯಾಗುವ ಹ್ಯಾಚ್‌ಬ್ಯಾಕ್‌ಗಳಲ್ಲೂ ಈ ಫೀಚರ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಅಪಾಯಕ್ಕೆ ದೂಡಲಿದೆ ಡ್ರೈವ್ ಮಾಡುವಾಗಿನ ಟಚ್‌ಸ್ಕ್ರೀನ್ ಬಳಕೆ

ಮೊದಲು ಪ್ರೀಮಿಯಂ ಫೀಚರ್ ಆಗಿ ಪಾದಾರ್ಪಣೆ ಮಾಡಿದ ಈ ಫೀಚರ್ ಈಗ ಬಹುತೇಕ ಎಲ್ಲಾ ಕಾರುಗಳಲ್ಲಿ ಕಂಡು ಬರುತ್ತದೆ. ನಾವೆಲ್ಲರೂ ನಮ್ಮ ಕಾರುಗಳಲ್ಲಿ ದಿನನಿತ್ಯ ಬಳಸುವ ಈ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನಿಜಕ್ಕೂ ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಸಂಶೋಧನೆಯ ಪ್ರಕಾರ ಕುಡಿದು ವಾಹನ ಚಾಲನೆ ಮಾಡುವುದಕ್ಕಿಂತ ಟಚ್‌ಸ್ಕ್ರೀನ್ ಬಳಸುತ್ತಾ ಚಾಲನೆ ಮಾಡುವುದು ಹೆಚ್ಚು ಅಪಾಯಕಾರಿಯಾಗಿದೆ.

ಅಪಾಯಕ್ಕೆ ದೂಡಲಿದೆ ಡ್ರೈವ್ ಮಾಡುವಾಗಿನ ಟಚ್‌ಸ್ಕ್ರೀನ್ ಬಳಕೆ

ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಕುರಿತು ಸಂಶೋಧನೆ ನಡೆಸುವ ಬ್ರಿಟನ್ ನ ಚಾರಿಟಿ ಆಧಾರಿತ ಗುಂಪು ನಡೆಸಿರುವ ಸಂಶೋಧನೆಯ ಪ್ರಕಾರ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬರುವ ಕಾರುಗಳು ಚಾಲಕನ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ಇದರಿಂದಾಗಿ ಚಾಲಕನು ತನ್ನ ಗಮನವನ್ನು ರಸ್ತೆ ಕಡೆಗೆ ಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಅಪಾಯಕ್ಕೆ ದೂಡಲಿದೆ ಡ್ರೈವ್ ಮಾಡುವಾಗಿನ ಟಚ್‌ಸ್ಕ್ರೀನ್ ಬಳಕೆ

ಈ ಸಂಶೋಧನೆಯ ಪ್ರಕಾರ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಬಳಸುವ ಚಾಲಕನ ರೆಸ್ಪಾನ್ಸ್ ಅವಧಿಯು, ಚಾಲಕನು ಆಲ್ಕೋಹಾಲ್ ಅಥವಾ ಗಾಂಜಾ ಸೇವಿಸಿ ಕಾರು ಚಾಲನೆ ಮಾಡುವ ಅವಧಿಗಿಂತ 2-3 ಪಟ್ಟು ನಿಧಾನವಾಗಿರುತ್ತದೆ.

ಅಪಾಯಕ್ಕೆ ದೂಡಲಿದೆ ಡ್ರೈವ್ ಮಾಡುವಾಗಿನ ಟಚ್‌ಸ್ಕ್ರೀನ್ ಬಳಕೆ

ಈ ಸಂಶೋಧನೆಯಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಕಾರ್ ಕಂಟ್ರೋಲರ್, ಮುಂಭಾಗದ ವಾಹನದಿಂದ ಸುರಕ್ಷಿತ ದೂರ ಹಾಗೂ ಜಾಗರೂಕತೆಯ ಮಾಪಕಗಳನ್ನು ಪರಿಶೀಲಿಸಲಾಗಿತ್ತು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಬಳಸುವ ಚಾಲಕರು ಚಾಲನೆ ಮಾಡುವಾಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜಾಗರೂಕರಾಗಿರುವುದು ಕಂಡುಬಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅಪಾಯಕ್ಕೆ ದೂಡಲಿದೆ ಡ್ರೈವ್ ಮಾಡುವಾಗಿನ ಟಚ್‌ಸ್ಕ್ರೀನ್ ಬಳಕೆ

ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಚಾಲಕನ ಗಮನವನ್ನು ಪದೇ ಪದೇ ರಸ್ತೆಯಿಂದ ತಿರುಗಿಸುತ್ತದೆ. ಈ ವೇಳೆ ಚಾಲಕನಿಗೆ ಯಾವುದೇ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಅಪಾಯಕ್ಕೆ ದೂಡಲಿದೆ ಡ್ರೈವ್ ಮಾಡುವಾಗಿನ ಟಚ್‌ಸ್ಕ್ರೀನ್ ಬಳಕೆ

ಐಷಾರಾಮಿ ಕಾರುಗಳಲ್ಲಿ ಕಂಡುಬರುವ ವಾಯ್ಸ್ ಕಮಾಂಡ್ ಫೀಚರ್ ಗಳು ಚಾಲಕರ ಗಮನವನ್ನು 36%ನಷ್ಟು ವಿಚಲಿತಗೊಳಿಸುತ್ತವೆ. ಇದೇ ವೇಳೆ ಕಾರಿನಲ್ಲಿ ಹ್ಯಾಂಡ್ಸ್-ಫ್ರೀ ಬಳಸಿ ಫೋನ್‌ನಲ್ಲಿ ಮಾತನಾಡುವುದರಿಂದ ಅಪಘಾತದ ಅಪಾಯವು 27%ನಷ್ಟು ಹಾಗೂ ಮೆಸೇಜ್ ಗಳನ್ನು ಓದುವುದರಿಂದ ಅಪಘಾತದ ಅಪಾಯವು 35%ನಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Most Read Articles

Kannada
English summary
Using touchscreen while driving creates more accident risk. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X