ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಕೇಂದ್ರದ ಸಾರಿಗೆ ಇಲಾಖೆಯು ವಾಹನ ಮಾಲೀಕರ ಹೆಸರನ್ನು ತನ್ನ ವಾಹನ್ ಡೇಟಾಬೇಸ್‍‍‍ನಿಂದ ಮರೆಮಾಡಲು ಮುಂದಾಗಿದೆ. ಡೇಟಾಬೇಸ್‌ ದುರುಪಯೋಗವಾಗದಂತೆ ತಡೆಯಲು ಹಾಗೂ ಜನರ ಖಾಸಗಿ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಸದ್ಯಕ್ಕೆ ದೆಹಲಿಯಲ್ಲಿ ಹಿಂಸಾಚಾರವು ಭುಗಿಲೆದ್ದಿದೆ. ಕೆಲವು ವರದಿಗಳ ಪ್ರಕಾರ ವಾಹನ್ ಡೇಟಾಬೇಸ್‍‍‍ನಿಂದ ಮಾಹಿತಿಯನ್ನು ಪಡೆದು, ವಾಹನ ಮಾಲೀಕರ ವಿರುದ್ಧ ದಾಳಿ ನಡೆಸಲಾಗಿದೆ. ಈ ಕಾರಣಕ್ಕೆ ಸಾರಿಗೆ ಇಲಾಖೆಯು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ದೆಹಲಿ ಮೂಲದ ಇಂಟರ್‍‍ನೆಟ್ ಫ್ರೀಡಂ ಫೌಂಡೇಷನ್ ಆದ ಡಿಜಿಟಲ್ ರೈಟ್ಸ್ ಅಡ್ವೊಕೆಸಿ ಗ್ರೂಪ್ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರನ್ನು ಭೇಟಿಯಾಗಿ ವಾಹನ್ ಡೇಟಾಬೇಸ್‍ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಸಲ್ಲಿಸಿದೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಈ ಗ್ರೂಪ್ ವಾಹನ್ ಹಾಗೂ ಸಾರಥಿ ವೆಬ್‍‍ಸೈಟ್‍‍ಗಳಲ್ಲಿರುವ ಮಾಹಿತಿಯನ್ನು ಸಾರ್ವಜನಿಕರು ಪಡೆಯದಂತೆ ತಡೆಯಬೇಕೆಂದು ಸಹ ಮನವಿಯನ್ನು ಸಲ್ಲಿಸಿತ್ತು. ಈ ಸಂಬಂಧ ಸಾರಿಗೆ ಇಲಾಖೆಗೆ ಇಂಟರ್‍‍ನೆಟ್ ಫ್ರೀಡಂ ಫೌಂಡೇಶನ್‌ನ ಪಾಲಿಸಿ ಹಾಗೂ ಪಾರ್ಲಿಮೆಂಟರಿ ಸಲಹೆಗಾರರಾದ ಸಿದ್ಧಾರ್ಥ್ ದೇಬ್ ಪತ್ರ ಬರೆದಿದ್ದಾರೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಈ ರೀತಿಯ ಹಿಂಸಾಚಾರಗಳು ಸಾರ್ವಜನಿಕವಾಗಿ ವಾಹನಕ್ಕೆ ಸಂಬಂಧಪಟ್ಟ ಡೇಟಾವನ್ನು ಪ್ರಕಟಿಸುವುದರಿಂದ ಸಂಭವಿಸಿವೆ. ಯಾವುದೇ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಆತನಿಗೆ ಸಂಬಂಧಪಟ್ಟ ಮಾಹಿತಿಯನ್ನು ಈ ರೀತಿ ಸಾರ್ವಜನಿಕವಾಗಿ ಪ್ರಕಟಿಸುವುದು ಸರಿಯಲ್ಲ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಸಾರ್ವಜನಿಕವಾಗಿ ವಾಹನ ಮಾಲೀಕರ ಮಾಹಿತಿಯನ್ನು ನೀಡುವುದರಿಂದ ವ್ಯಕ್ತಿಗಳ ಸುರಕ್ಷತೆಗೆ ಅಪಾಯ ಉಂಟಾಗಲಿದೆ ಎಂಬುದಕ್ಕೆ ದೆಹಲಿಯ ಈ ಘಟನೆಯೇ ಸಾಕ್ಷಿ ಎಂಬುದಾಗಿ ಈ ಪತ್ರದಲ್ಲಿ ಹೇಳಲಾಗಿದೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಹೆಸರು ಹೇಳಲು ಬಯಸದ ಸಾರಿಗೆ ಇಲಾಖೆಯೆ ಅಧಿಕಾರಿಯೊಬ್ಬರು, ವಾಹನಗಳ ಗುರುತನ್ನು ರಕ್ಷಿಸುವ ಸಲುವಾಗಿ ವಾಹನ ಮಾಲೀಕರ ಹೆಸರಿನ ಕೆಲವು ಅಕ್ಷರಗಳನ್ನು ಮರೆಮಾಡಲು ಇಲಾಖೆಯು ಬಯಸಿದೆ ಎಂದು ಹೇಳಿದರು. ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿಯ ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆ ಅಧಿಕಾರಿ ಹೇಳಿದರು.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ವಾಹನ್ ಡೇಟಾಬೇಸ್ ದುರುಪಯೋಗವಾಗುತ್ತಿರುವ ಬಗ್ಗೆ ಆತಂಕಗಳಿದ್ದರೂ, ಸಾರ್ವಜನಿಕರು ಈ ವೆಬ್‌ಸೈಟ್‌ನಲ್ಲಿ ವಾಹನ ಮಾಲೀಕರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಇನ್ನು ಮುಂದೆ ವಾಹನದ ಮಾಲೀಕರ ಹೆಸರು, ವಾಹನದ ಮಾದರಿ ಹಾಗೂ ಅದರ ಬಣ್ಣದ ಬಗೆಗಿನ ಮಾಹಿತಿಯನ್ನು ಮಾತ್ರ ಪಡೆಯಬಹುದಾಗಿದೆ. ಆದರೆ, ವಾಹನ ಮಾಲೀಕರ ವೈಯಕ್ತಿಕ ಮಾಹಿತಿಯನ್ನು ದೇಶಾದ್ಯಂತವಿರುವ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಸಾರಿಗೆ ಇಲಾಖೆಯ ಬಳಿಯಿರುವ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಡ್ರೈವರ್ ಲೈಸೆನ್ಸ್ ಡೇಟಾ ಮುಂತಾದವುಗಳನ್ನು ಆಟೋ ಮೊಬೈಲ್ ಉದ್ಯಮ, ಬ್ಯಾಂಕ್ ಹಾಗೂ ಹಣಕಾಸು ಕಂಪನಿಗಳಿಗೆ ನಿರ್ದಿಷ್ಟ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಇನ್ಮುಂದೆ ವಾಹನ್ ವೆಬ್‍ಸೈಟ್‍‍‍ನಿಂದ ಮರೆಯಾಗಲಿವೆ ಈ ಮಾಹಿತಿಗಳು..!

ಈ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಸಾರಿಗೆ ಹಾಗೂ ಆಟೋಮೊಬೈಲ್ ಉದ್ಯಮಕ್ಕೆ ಸಹಕಾರಿಯಾಗಲಿದೆ. ಇದರಿಂದಾಗಿ ಸೇವೆಯು ಸುಧಾರಿಸಲಿದ್ದು ನಾಗರಿಕರಿಗೆ ಹಾಗೂ ಸರ್ಕಾರಕ್ಕೆ ಹಲವು ಪ್ರಯೋಜನಗಳಾಗಲಿವೆ ಎಂಬುದು ಸಾರಿಗೆ ಇಲಾಖೆಯ ನೀತಿಯಾಗಿದೆ.

Most Read Articles

Kannada
English summary
Vahan Database To Display Partially Concealed Names Of Vehicle Owners. Read in Kannada.
Story first published: Friday, February 28, 2020, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X