ಜಾರಿಯಾಯ್ತು ಹೊಸ ಫಿಟ್‍ನೆಸ್ ಸರ್ಟಿಫಿಕೇಟ್ ನಿಯಮ
ಭಾರತದಲ್ಲಿರುವ ಪ್ರಮುಖ ಸಮಸ್ಯೆಗಳಲ್ಲಿ ವಾಯು ಮಾಲಿನ್ಯವು ಒಂದು. ಈ ಮಾಲಿನ್ಯವು ವಾಹನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾಯು ಮಾಲಿನ್ಯವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಇದರ ಜೊತೆಗೆ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿರಲಿವೆ. ಇದೇ ವೇಳೆ ಸರ್ಕಾರವು ಕಡಿಮೆ ಮಾಲಿನ್ಯವನ್ನುಂಟು ಮಾಡುವ ಸಿಎನ್‍ಜಿ, ಎಲ್‍ಪಿಜಿ ಹಾಗೂ ಹೈಬ್ರಿಡ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ.

ಪೆಟ್ರೋಲ್ ಬಂಕ್‍ಗಳ ಜೊತೆಗೆ ಸಿಎನ್‍ಜಿ ಹಾಗೂ ಎಲ್‍ಪಿಜಿ ಬಂಕ್‍ಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುತ್ತಿದೆ. ಇವುಗಳ ಜೊತೆಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸಹ ತೆರೆಯಲಾಗುತ್ತಿದೆ. ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತಿರುವ ಬಿಎಸ್ 4 ಎಂಜಿನ್‍ಗಳ ಬದಲಿಗೆ ಹೊಸ ಬಿಎಸ್ 6 ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರುತ್ತಿವೆ.

ಸರ್ಕಾರವು ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ವಾಹನಗಳ ವಿರುದ್ಧ ಸದ್ದಿಲ್ಲದೇ ಯುದ್ದ ಸಾರಿದೆ. ಹಳೆಯ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳನ್ನು ಸ್ಕ್ರಾಪ್ ಮಾಡುವ ನಿಯಮವನ್ನು ಸಹ ಜಾರಿಗೊಳಿಸಲಾಗುತ್ತಿದೆ.

10 ವರ್ಷಗಳಿಗಿಂತ ಹಳೆಯದಾದ ವಾಹನಗಳಿಗೆ ಫಿಟ್‍ನೆಸ್ ಸರ್ಟಿಫಿಕೇಟ್ ನೀಡದಿರುವ ನಿಯಮವನ್ನು ಈಗ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.

ತಮಿಳುನಾಡು ಸರ್ಕಾರವು ಹೊಸ ನಿಯಮವನ್ನು ಜಾರಿಗೊಳಿಸಿದೆ. ಈ ನಿಯಮದನ್ವಯ ಇನ್ನು ಮುಂದೆ ಹಳೆಯ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗುವುದಿಲ್ಲ. ಈ ವಾಹನಗಳನ್ನು ಸ್ಕ್ರಾಪ್ ಮಾಡಲಾಗುವುದು.

ತಮಿಳುನಾಡು ಸರ್ಕಾರದ ಹೊಸ ನಿರ್ಧಾರದಿಂದಾಗಿ ಈ ಮೊದಲು ವರ್ಷಕ್ಕೊಮ್ಮೆ ನೀಡಲಾಗುತ್ತಿದ್ದ ಫಿಟ್‍ನೆಸ್ ಸರ್ಟಿಫಿಕೇಟ್ ನಿಯಮವನ್ನು ಬದಲಿಸಲಾಗಿದೆ. ಈ ನಿಯಮವು 8 ವರ್ಷಕ್ಕಿಂತ ಹಳೆಯದಾದ ಕಮರ್ಷಿಯಲ್ ವಾಹನಗಳಿಗೆ ಅನ್ವಯಿಸುತ್ತದೆ.

8 ವರ್ಷ ಹಳೆಯದಾದ ವಾಹನಗಳು ವರ್ಷಕ್ಕೊಮ್ಮೆ ಎಫ್‍ಸಿ ಪಡೆಯಬೇಕಾಗುತ್ತದೆ. ತಮಿಳುನಾಡು ಸರ್ಕಾರವು ಈ ಸಂಬಂಧ ಫೆಬ್ರವರಿ 13ರಂದು ಅಧಿಸೂಚನೆ ಹೊರಡಿಸಿದೆ. ಅಲ್ಲಿನ ಸಾರಿಗೆ ಇಲಾಖೆಯ ಕಮೀಷನರ್ ಎನ್‍ಐಸಿ ಪತ್ರ ಬರೆದು ವಾಹನ ವೆಬ್‍ಸೈಟ್‍ನಲ್ಲಿ ಅಪ್‍ಡೇಟ್ ಮಾಡುವಂತೆ ಹೇಳಿದ್ದಾರೆ.

ಸರ್ಕಾರದ ಈ ನಡೆಯನ್ನು ಅಲ್ಲಿನ ಟ್ಯಾಕ್ಸಿ ಚಾಲಕರು ಸ್ವಾಗತಿಸಿದ್ದಾರೆ. ಆದರೆ ಆಟೋಮೊಬೈಲ್ ಉದ್ಯಮದವರು ಇದೊಂದು ಹೆಚ್ಚು ಸಮಯ ಹಿಡಿಯುವ ಪ್ರಕ್ರಿಯೆಯಾಗಿದ್ದು, ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿರುವ ಭಾರೀ ಗಾತ್ರದ ವಾಹನಗಳು ಪ್ರತಿ ವರ್ಷ 75,000ದಿಂದ 1 ಲಕ್ಷ ಕಿ.ಮೀಗಳವರೆಗೆ ಚಲಿಸುತ್ತವೆ. ಈ ವಾಹನಗಳ ಮಾಲೀಕರು ಪ್ರತಿ ಎರಡು ವರ್ಷಕ್ಕೊಮ್ಮೆ ಪಡೆಯಬೇಕಿರುವ ದಾಖಲೆಗಳನ್ನು ಪಡೆಯದೇ ನಿರ್ಲಕ್ಷ್ಯ ವಹಿಸುವ ಸಾಧ್ಯತೆಗಳಿರುತ್ತವೆ.

ಪ್ರತಿ ವರ್ಷ ಎಫ್‍ಸಿ ಮಾಡಿಸುವುದರಿಂದ ಮತ್ತಷ್ಟು ಖರ್ಚು ಹೆಚ್ಚುವ ಸಾಧ್ಯತೆಗಳಿವೆ. ತಮಿಳುನಾಡು ಸರ್ಕಾರದ ಹೊಸ ನಿರ್ಧಾರದಿಂದಾಗಿ ಟ್ಯಾಕ್ಸಿ ಡ್ರೈವರ್‍ಗಳು ಹೆಚ್ಚು ಸಂತಸದಿದ್ದಾರೆ. ಬೇರೆ ರಾಜ್ಯಗಳು ಈ ನಿಯಮವನ್ನು ಈಗಾಗಲೇ ಅಳವಡಿಸಿಕೊಂಡಿವೆ. ಈಗ ತಮಿಳುನಾಡು ಅಳವಡಿಸಿಕೊಂಡಿದೆ.


Click it and Unblock the Notifications