ಕರೋನಾ ವೈರಸ್ ಎಫೆಕ್ಟ್: ಭಾರೀ ಕುಸಿತ ಕಂಡ ವಾಹನ ಮಾರಾಟ
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ವಾಹನಗಳ ಮಾರಾಟಕ್ಕೆ ಅನುಮತಿ ನೀಡಲಾಯಿತು. ಆದರೆ ಮೇ ತಿಂಗಳ ಮಾರಾಟವು ಯಾವುದೇ ಕಂಪನಿಗೆ ಆಶಾದಾಯಕವಾಗಿರಲಿಲ್ಲ. ಮೇ ತಿಂಗಳಿನಲ್ಲಿ ದೇಶಾದ್ಯಂತ ಹೊಸ ವಾಹನ ಮಾರಾಟದಲ್ಲಿ 88.87%ನಷ್ಟು ಕುಸಿತ ಉಂಟಾಗಿದೆ.

ಈ ವರ್ಷದ ಮೇ ತಿಂಗಳಿನಲ್ಲಿ ದೇಶಾದ್ಯಂತ ಒಟ್ಟು 2,02,697 ಯುನಿಟ್‌ಗಳು ಮಾರಾಟವಾಗಿವೆ. 2019ರ ಮೇ ತಿಂಗಳಿನಲ್ಲಿ 18,21,650 ಯುನಿಟ್‌ಗಳು ಮಾರಾಟವಾಗಿದ್ದವು. ಎಲ್ಲಾ ಸೆಗ್‌ಮೆಂಟಿನ ವಾಹನ ಮಾರಾಟದಲ್ಲಿ ಕುಸಿತ ಉಂಟಾಗಿದೆ.

ದ್ವಿಚಕ್ರ ವಾಹನಗಳ ಸೆಗ್‌ಮೆಂಟಿನಲ್ಲಿ 88.80%ನಷ್ಟು ಕುಸಿತ ಉಂಟಾಗಿದೆ. ಮೇ ತಿಂಗಳಿನಲ್ಲಿ 1,59,039 ಯುನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. 2019ರ ಮೇ ತಿಂಗಳಿನಲ್ಲಿ 14,19,842 ವಾಹನಗಳನ್ನು ಮಾರಾಟ ಮಾಡಲಾಗಿತ್ತು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ತ್ರಿಚಕ್ರ ವಾಹನಗಳ ಸೆಗ್‌ಮೆಂಟಿನಲ್ಲಿ 96.34%ನಷ್ಟು ಇಳಿಕೆ ಕಂಡುಬಂದಿದೆ. ಮೇ ತಿಂಗಳಿನಲ್ಲಿ ಒಟ್ಟು 1881 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದರೆ, 2019ರ ಮೇ ತಿಂಗಳಿನಲ್ಲಿ 51,430 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಉಳಿದ ಸೆಗ್‌ಮೆಂಟ್‌ಗಳ ಮಾರಾಟಕ್ಕಿಂತ ಪ್ಯಾಸೆಂಜರ್ ವೆಹಿಕಲ್ ಸೆಗ್‌ಮೆಂಟ್ ಮಾರಾಟವು ಉತ್ತಮವಾಗಿದೆ. ಈ ಸೆಗ್‌ಮೆಂಟಿನಲ್ಲಿ ಕಳೆದ ತಿಂಗಳು 86.97%ನಷ್ಟು ಕುಸಿತ ಉಂಟಾಗಿದೆ. ಮೇ ತಿಂಗಳಿನಲ್ಲಿ 30,749 ಯುನಿಟ್‌ಗಳು ಮಾರಾಟವಾಗಿದ್ದರೆ, 2019ರ ಮೇ ತಿಂಗಳಿನಲ್ಲಿ 2,35,933 ಯುನಿಟ್‌ಗಳು ಮಾರಾಟವಾಗಿದ್ದವು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಮರ್ಷಿಯಲ್ ವಾಹನಗಳು ದೊಡ್ಡ ಪ್ರಮಾಣದಲ್ಲಿ ಕುಸಿತವನ್ನು ದಾಖಲಿಸಿವೆ. ಈ ಸೆಗ್‌ಮೆಂಟಿನಲ್ಲಿ 96.63%ನಷ್ಟು ಕಡಿಮೆ ವಾಹನಗಳು ಮಾರಾಟವಾಗಿವೆ. ಮೇ ತಿಂಗಳಿನಲ್ಲಿ 2,711 ಯುನಿಟ್‌ಗಳುಮಾರಾಟವಾಗಿದ್ದರೆ, ಕಳೆದ ವರ್ಷ ಮೇ ತಿಂಗಳಿನಲ್ಲಿ 80,392 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಇತರ ವಾಹನಗಳಿಗೆ ಹೊಲಿಸಿದರೆ ಟ್ರಾಕ್ಟರ್ ಮಾರಾಟವು ಸುಧಾರಣೆಯನ್ನು ಕಂಡಿದೆ. ಟ್ರಾಕ್ಟರ್ ಮಾರಾಟದಲ್ಲಿ ಈ ವರ್ಷ 75.58%ನಷ್ಟು ಕುಸಿತ ಉಂಟಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ 8,317 ಯುನಿಟ್‌ಗಳು ಮಾರಾಟವಾಗಿದ್ದರೆ, ಕಳೆದ ವರ್ಷದ ಮೇ ತಿಂಗಳಿನಲ್ಲಿ 34053 ಯುನಿಟ್‌ಗಳು ಮಾರಾಟವಾಗಿದ್ದವು.


Click it and Unblock the Notifications