ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯ ಕೆಲವು ಡೀಲರ್‌ಗಳು ಪೊಲೊ ಮತ್ತು ವೆಂಟೊ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಈ ಎರಡು ಕಾರುಗಳಿಗೆ ನಗದು ರಿಯಾಯಿತಿ, ಕಾರ್ಪೊರೇಟ್ ಬೋನಸ್, ಎಕ್ಸ್‌ಚೆಂಜ್ ಬೋನಸ್ ಮತ್ತು ಲಾಯಲ್ಟಿ ಬೋನಸ್ ಆಫರ್ ಅನ್ನು ನೀಡುತ್ತಿದೆ.

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳ ರೂ.2.10 ಗಳವರೆಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಈ ವರದಿಯ ಪ್ರಕಾರ ಫೋಕ್ಸ್‌ವ್ಯಾಗನ್ ವೆಂಟೊ ಕಂಫರ್ಟ್‌ಲೈನ್ ರೂಪಾಂತರಕ್ಕೆ ರೂ.1.60 ಲಕ್ಷ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ರೂ.25,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್, ರೂ.15,000 ಗಳವರೆಗೆ ಲಾಯಲ್ಟಿ ಬೋನಸ್ ಮತ್ತು 10,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

ವೆಂಟೊ ಹೈಲೈನ್ ಪ್ಲಸ್ ರೂಪಾಂತರಕ್ಕೆ ರೂ.1 ಲಕ್ಷ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ. ಇನ್ನು ರೂ.25,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್, ರೂ.15,000 ಗಳವರೆಗೆ ಲಾಯಲ್ಟಿ ಬೋನಸ್ ಮತ್ತು 10,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಫೋಕ್ಸ್‌ವ್ಯಾಗನ್ ಪೊಲೊ 1.20ಎಂಪಿಐ ರೂಪಾಂತರಕ್ಕೆ ರೂ.17,500 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತಿದೆ. ಇದರೊಂದಿಗೆ ರೂ.10,000 ಲಾಯಲ್ಟಿ ಬೋನಸ್ ಮತ್ತು ರೂ.5,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಿದೆ.

ಪೊಲೊ 1.0 ಟರ್ಬೊ-ಪೆಟ್ರೋಲ್ ರೂಪಾಂತರಗಳಿಗೆ ರೂ.13,300 ಗಳವರೆಗೆ ನಗದು ರಿಯಾಯಿತಿ ಅನ್ನು ನೀಡಲಾಗುತ್ತಿದೆ. ಇದರೊಂದಿಗೆ ರೂ,20,000 ಎಕ್ಸ್‌ಚೆಂಜ್ ಬೋನಸ್, ರೂ.10,000 ಗಳವರೆಗೆ ಲಾಯಲ್ಟಿ ಬೋನಸ್ ಮತ್ತು ರೂ.5,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ ಮಾದರಿಗಳಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಳೆದ ತಿಂಗಳ ಆರಂಭದಲ್ಲಿ ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಟಿಎಸ್‌ಐ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳ ಹೆಸರನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿತು. ಇದರಿಂದ ಈ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳು ಸ್ಥಗಿತವಾಗಿದೆ ಎಂದು ವರದಿಗಳು ಪ್ರಕಟವಾಗಿತ್ತು.
MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಫೋಕ್ಸ್‌ವ್ಯಾಗನ್ ಕಂಪನಿಯು ಈ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಸ್ಥಗಿತಗೊಳಿಸಿಲ್ಲವೆಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ಮಾದರಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

ಕೆಲವು ಡೀಲರ್ ಗಳು ವೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಮಾದರಿಗಳ ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಪೊಲೊ ಮತ್ತು ವೆಂಟೊ ಜರ್ಮನ್ ಬ್ರಾಂಡ್‌ನ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಾಗಿವೆ.


Click it and Unblock the Notifications








