ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿರ್ಮಾಣದ ಮೊದಲ ಇವಿ ಕಾರು

ಜರ್ಮನ್ ಕಾರು ಉತ್ಪಾದನಾ ಕಂಪನಿಯಾದ ಫೋರ್ಕ್ಸ್‌ವ್ಯಾಗನ್ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿ ಕಾರಗಳ ಉತ್ಪಾದನೆಗೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಿದ್ದು, ಕಳೆದ ವರ್ಷ ಅನಾವರಣಗೊಳಿಸಲಾಗಿದ್ದ ಐಡಿ.4 ಇವಿ ಮಾದರಿಯ ಉತ್ಪಾದನಾ ಆವೃತ್ತಿಯನ್ನು ಇದೇ ತಿಂಗಳು 23ಕ್ಕೆ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಜರ್ಮನಿಯ ಜ್ವಿಕೌದಲ್ಲಿರುವ ತನ್ನ ಕೇಂದ್ರ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಐಡಿ.4 ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯ ಉತ್ಪಾದನೆಗೆ ಚಾಲನೆ ನೀಡಲಾಗಿದ್ದು, ಹೊಸ ಕಾರನ್ನು ಫೋರ್ಕ್ಸ್‌ವ್ಯಾಗನ್ ಕಂಪನಿಯ ಹೊಸ ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಪಡಿಸುತ್ತಿದೆ. ಹೊಸ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿಯು ಸೆಪ್ಟೆಂಬರ್ 23ಕ್ಕೆ ಬಿಡುಗಡೆ ಮಾಡಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಮೊದಲ ಹಂತವಾಗಿ ಯುರೋಪ್ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ.

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಸದ್ಯ ಯುರೋಪಿನಲ್ಲಿ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಹಲವಾರು ಕಠಿಣಕ್ರಮಗಳನ್ನು ಜಾರಿಗೆ ತರುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ಉತ್ಪಾದನೆಯತ್ತ ಹೆಚ್ಚು ಗಮಹರಿಸುತ್ತಿವೆ.

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಫೋಕ್ಸ್‌ವ್ಯಾಗನ್ ಕೂಡಾ ಡೀಸೆಲ್ ಎಂಜಿನ್ ಹಗರಣದಲ್ಲಿ ಸಿಲುಕಿ ಭಾರೀ ಪ್ರಮಾಣದ ದಂಡ ಪಾವತಿ ಮಾಡಿದ್ದು, ಇದೇ ಕಾರಣಕ್ಕೆ ಹಲವಾರು ಕಾರು ಮಾದರಿಗಳಲ್ಲಿ ಈಗಾಗಲೇ ಡೀಸೆಲ್ ಎಂಜಿನ್ ಮಾರಾಟವನ್ನೇ ಸ್ಥಗಿತಗೊಳಿಸಿ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಮುಂಬರುವ ದಿನಗಳಲ್ಲಿ ಪೆಟ್ರೋಲ್ ಕಾರುಗಳ ಮಾರಾಟವನ್ನು ಸಹ ಹಂತ-ಹಂತವಾಗಿ ಸ್ಥಗಿತ ಮಾಡಲಿರುವ ಆಟೋ ಕಂಪನಿಗಳು ಹೈಬ್ರಿಡ್ ಅಥವಾ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮಾದರಿಗಳ ಬಿಡುಗಡೆಯತ್ತ ಗಮನಹರಿಸಿದ್ದು, ಫೋಕ್ಸ್‌ವ್ಯಾಗನ್ ಕೂಡಾ ಇದಕ್ಕಾಗಿಯೇ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಚಾಲನೆ ನೀಡಿದೆ.

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಐಡಿ.4 ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಅಧಿಕ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆ ಹೊಂದಿದೆ. ಜೊತೆಗೆ ಹೊಸ ಕಾರಿನಲ್ಲಿ ಸಾಮಾನ್ಯ ಕಾರುಗಳಂತೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯರ್ ವೀಲ್ಹ್ ಡ್ರೈವ್ ಸಿಸ್ಟಂ ಪಡೆದುಕೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಆರಂಭಿಕ ಹಂತವಾಗಿ ಐಡಿ.4 ಎಲೆಕ್ಟ್ರಿಕ್ ಕಾರಿನಲ್ಲಿ ರಿಯರ್ ಡ್ರೈವ್ ಸಿಸ್ಟಂ ನೀಡಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಮುಂದಿನ ದಿನಗಳಲ್ಲಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ನೀಡಲಿದ್ದು, ರಿಯರ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಯು 200-ಬಿಎಚ್‌ಪಿ ಮಾಡಿದ್ದಲ್ಲಿ ಆಲ್ ವೀಲ್ಹ್ ಡ್ರೈವ್ ಮಾದರಿಯು 310-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಇನ್ನು 4,592-ಎಂಎಂ ಉದ್ದ, 1,852-ಎಂಎಂ ಅಗಲ ಮತ್ತು 1,629-ಎಂಎಂ ಎತ್ತರ ಹೊಂದಿರುವ ಹೊಸ ಕಾರು ಅತ್ಯುತ್ತಮ ಆಸನ ಸೌಲಭ್ಯದೊಂದಿಗೆ ಹಲವಾರು ತಾಂತ್ರಿಕ ಅಂಶಗಳನ್ನು ಧ್ವನಿ ಗ್ರಹಿಕೆಯ ಮೂಲಕ ನಿಯಂತ್ರಣ ಮಾಡಬಹುದಾದ ಸೌಲಭ್ಯಗಳ ಜೋಡಣೆಯನ್ನು ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇದೇ ತಿಂಗಳು 23ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಇವಿ ಕಾರು

ಹಾಗೆಯೇ ಹೊಸ ಕಾರಿನಲ್ಲಿ 30 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜ್ ಆಗಬಲ್ಲ 83ಕೆಡಬ್ಲ್ಯುಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಹೊಸ ಕಾರು ಭಾರತದಲ್ಲಿ 2021ರ ಮಧ್ಯಂತರದಲ್ಲಿ ಬಿಡುಗಡೆಯಾಗಬಹುದಾದ ಸಾಧ್ಯತೆಗಳಿವೆ.

More from DriveSpark

Article Published On: Saturday, September 19, 2020, 16:53 [IST]
English summary
Volkswagen ID.4 electric SUV To Launch On 2020 September 23. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+