ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಕರೋನಾ ವೈರಸ್ ಪರಿಣಾಮ ಭಾರತೀಯ ಆಟೋ ಉದ್ಯಮವು ಲಾಕ್‌ಡೌನ್ ವಿನಾಯ್ತಿ ನಂತರವೂ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಹೊಸ ಸುರಕ್ಷಾ ಮಾರ್ಗಸೂಚಿಯಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ವಾಹನ ಉತ್ಪಾದನಾ ಕಂಪನಿಗಳು ಪರದಾಡುತ್ತಿವೆ. ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರವೂ ಹೊಸ ವಾಹನಗಳ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಸದ್ಯಕ್ಕೆ ಹೊಸ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ತೆರವು ನಂತರ ವಾಹನ ಮಾರಾಟ ಹೆಚ್ಚಿಸುವ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಶಾಕ್ ನೀಡುತ್ತಿದ್ದಾರೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಬುಕ್ಕಿಂಗ್ ಹಣ ವಾಪಸ್‌ ನೀಡುವಂತೆ ಬೇಡಿಕೆ ಸಲ್ಲಿಸುತ್ತಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಹೀಗಾಗಿ ಕರೋನಾ ವೈರಸ್ ಅಬ್ಬರ ತಗ್ಗುವ ತನಕ ವಾಹನ ಖರೀದಿ ಯೋಜನೆಯನ್ನು ಮುಂದೂಡುವುದೇ ಉತ್ತಮ ಎನ್ನುವ ಯೋಜನೆಯಲ್ಲಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದಾರೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಇನ್ನು ಕೆಲವು ಗ್ರಾಹಕರು ಹೊಸ ವಾಹನಗಳ ಖರೀದಿಯ ಬದಲಾಗಿ ಲೀಸ್‌ಗೆ ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿವೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಪೋಕ್ಸ್‌ವ್ಯಾಗನ್ ಕೂಡಾ ಇದೀಗ ಲೀಸ್ ಕಾರುಗಳ ಆಯ್ಕೆಯನ್ನು ಹೆಚ್ಚಿಸಿದ್ದು, ಆಕರ್ಷಕ ದರಗಳಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಕಾರುಗಳನ್ನು ಒದಗಿಸಲು ಮುಂದಾಗಿದೆ. ಲೀಸ್ ಆಯ್ಕೆ ಗ್ರಾಹಕರಿಗೆ ವಿವಿಧ ಮಾದರಿಯ ಕಾರುಗಳನ್ನು ಮಾಸಿಕವಾಗಿ ಅಥವಾ ವಾರ್ಷಿಕ ಅವಧಿಯ ಲೆಕ್ಕಾಚಾರದಲ್ಲಿ ಮಾಲೀಕ್ವ ಹೊಂದಬಹುದಾಗಿದೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಲೀಸ್ ವೇಳೆ ಕಾರಿನ ನೋಂದಣಿ, ತಾಂತ್ರಿಕ ಅಂಶಗಳ ರೀಪೇರಿಯ ಖರ್ಚು ಮತ್ತು ಇನ್ಸುರೆನ್ಸ್ ಪಾವತಿ ಸೇರಿದಂತೆ ಪ್ರತಿಯೊಂದು ಅಂಶಗಳನ್ನು ಕಾರು ಕಂಪನಿಗಳೇ ನಿರ್ವಹಣೆ ಮಾಡಲಿದ್ದು, ಪ್ರತಿ ತಿಂಗಳು ಇಂತಿಷ್ಟು ದರ ನಿಗದಿ ಮಾಡಲಾಗುತ್ತದೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಲೀಸ್ ದರಗಳು ಮಾಲೀಕ್ವ ಪಡೆದುಕೊಳ್ಳುವ ಅವಧಿಯ ಮೇಲೆ ನಿರ್ಧಾರವಾಗಲಿದ್ದು, ಲೀಸ್ ಅವಧಿಯ ಬಳಿಕ ನೀವು ಅದೇ ಕಾರನ್ನು ಮಾಲೀಕ್ವ ಪಡೆದುಕೊಳ್ಳಲು ಬಯಸಿದ್ದಲ್ಲಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶವಿರುತ್ತದೆ.

ಕಾರು ಮಾರಾಟ ಸುಧಾರಿಸಲು ಲೀಸ್ ಆಯ್ಕೆ ನೀಡಿದ ಫೋಕ್ಸ್‌ವ್ಯಾಗನ್

ಹಾಗೆಯೇ ಕಾರು ಖರೀದಿಯು ಸುಲಭವಾಗಿಸಲು ಹಲವಾರು ಲೋನ್ ಸೌಲಭ್ಯಗಳನ್ನು ಆಫರ್ ಮಾಡುತ್ತಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಇಎಂಐ ಹೊರೆ ತಗ್ಗಿಸಲು ಧೀರ್ಘಾವಧಿಯ ಸಾಲ ಸೌಲಭ್ಯ ಸೇರಿದಂತೆ ಫ್ಲೆಕ್ಸಿ ಲೋನ್ ಮೂಲಕ ಶೇ.100ರಷ್ಟು ಆನ್‌ರೋಡ್ ದರದ ಮೇಲೆ ಸಾಲ ಒದಗಿಸುತ್ತಿದೆ.

More from DriveSpark

Article Published On: Saturday, May 30, 2020, 19:17 [IST]
English summary
Volkswagen Introduces Leasing, Flexible Financing Options. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+