ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ನಿವಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಕೂಪ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ನಿವಸ್ ಎಸ್‍ಯುವಿಯುನ್ನು ಮುಂದಿನ ವರ್ಷ ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಇದರ ನಡುವೆಹೊಸ ಡಿಜಿಟಲ್ ರೆಂಡರಿಂಗ್ ನಿವಸ್ ಕ್ರಾಸ್ಒವರ್ ಕೂಪೆ ಆಧಾರಿತ ಸೆಡಾನ್‌ನ ಚಿತ್ರಗಳು ಬಹಿರಂಗವಾಗಿದೆ. ಹೊಸ ನಿವಸ್ ಅನ್ನು ಸೆಡಾನ್ ಮಾದರಿಯಲ್ಲಿ ಬಿಡುಗಡೆಗೊಳಿಸಬಹುದು ಎಂದು ವರದಿಗಳು ಪ್ರಕಟವಾಗಿದೆ. ಫೋಕ್ಸ್‌ವ್ಯಾಗನ್ ನಿವಸ್ ಅನ್ನು ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯ ಟಿ-ಕ್ರಾಸ್, ಹೊಸ ಪೊಲೊ ಮತ್ತು ಮಿಡ್ ಸೆಡಾನ್ ವರ್ಟಸ್ ಕೂಡ ಇದೆ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ.

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಈ ಚಿತ್ರದಲ್ಲಿ ನಿವಸ್ ಹೆಚ್ಚು ಕೂಪ್ ಸೆಡಾನ್ ಮಾದರಿಯಲ್ಲಿ ಕಾಣುತ್ತದೆ. ಈ ಕೂಪ್ ಸೆಡಾನ್ ಹೆಚ್ಚಾಗಿ ಯುವ ಖರೀದಿದಾರರನ್ನು ಗುರಿಯಾಗಿಸಿಕೊಂಡು ಅಭಿವೃದ್ದಿಪಡಿಸಲಾಗುತ್ತದೆ. ಈ ಹೊಸ ಸೆಡಾನ್ ಡಿಜಿಟಲ್ ರೆಂಡರಿಂಗ್ ಚಿತ್ರದಲ್ಲಿ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಈ ಹೊಸ ನಿವಸ್ ಸೆಡಾನ್ ಮುಂಭಾಗದಲ್ಲಿ ಹೊಸ ಗ್ರಿಲ್, ಸ್ಕಾಲಪೇಟಡ್ ಬಾನೆಟ್, ಎಲ್ಇಡಿ ಡಿಆರ್ಎಲ್ ಮತ್ತು ವಿಶಾಲವಾದ ಏರ್-ಡ್ಯಾಮ್ ಗಳನ್ನು ಹೊಂದಿದೆ. ಈ ಹೊಸ ಸೆಡಾನ್ ನಲ್ಲಿ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಈ ಹೊಸ ನಿವಸ್ ಸೆಡಾನ್ ಫೋಕ್ಸ್‌ವ್ಯಾಗನ್ ವರ್ಟಸ್ ಮಾದರಿಗೆ ಹೋಲುತ್ತದೆ. ಅದೆ ರೀತಿಯ ಎಲ್ಇಡಿ ಟೈಲ್ ಲ್ಯಾಂಪ್, ಬೂಟ್ ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ರ್ಯಾಕ್ಡ್ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಇನ್ನು ದಕ್ಷಿಣ ಅಮೆರಿಕಾದ ನಂತರ ನಿವಸ್ ಎಸ್‍ಯುವಿಯನ್ನು ಇತರ ಯುರೋಪಿನ ಮಾರುಕಟ್ಟೆಯಲ್ಲಿ ಪ್ರದರ್ಶಿಸಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಸ್‌ಒವರ್ ಅಥವಾ ‘ಅರ್ಬನ್ ಎಸ್‌ಯುವಿಗಳಿಗೆ' ಬೇಡಿಕೆ ಹೆಚ್ಚಾಗುತ್ತಿದೆ.

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ 1.0-ಲೀಟರ್ ಟಿಎಸ್‌ಐ ಟರ್ಬೊ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 126 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂಭಾಗದ ಚಕ್ರಗಳಿಗೆ 6-ಸ್ಪೀಡ್ ಟಾರ್ಕ್-ಕರ್ನವಾಟರ್ ಮೂಲಕ ಪವರ್ ಅನ್ನು ಕಳುಹಿಸಲಾಗುತದೆ.

MOST READ: ಹೊಸ ಫೀಚರ್ಸ್‍‍ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ 2021ರ ಮಹೀಂದ್ರಾ ಸ್ಕಾರ್ಪಿಯೋ

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಬಿಎಸ್-6 ಮಾದರಿಯಲ್ಲಿ ಅದೇ ಮಾದರಿ ಸಿಸ್ಟಂ ಅನ್ನು ಅಳವಡಿಸಲಾಗಿತ್ತು. ಭವಿಷ್ಯದಲ್ಲಿ ಹೆಚ್ಚುವರಿಯಾಗಿ ಈ ಹೊಸ ನಿವಸ್ ಎಸ್‍ಯುವಿಯಲ್ಲಿ 1.5-ಲೀಟರ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಬಹುದು.

ಸೆಡಾನ್ ಮಾದರಿಯಲ್ಲಿಯೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ನಿವಸ್

ಪ್ರೀಮಿಯಂ ಕ್ರಾಸ್‌ಒವರ್ ಆದ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಆಡಿ ಕ್ಯೂ3 ಸ್ಪೋರ್ಟ್‌ಬ್ಯಾಕ್, ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Monday, June 8, 2020, 11:58 [IST]
English summary
Volkswagen Nivus Based Sedan: What It Could Look Like. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+