ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಫೋಕ್ಸ್‌ವ್ಯಾಗನ್ ಕಾರು ಮುಂದಿನ ತಿಂಗಳು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಕೋಡಾ ಜೊತೆಗೂಡಿ ಕಾರು ಉತ್ಪಾದನೆ ಮಹತ್ವದ ಬದಲಾವಣೆ ತರುತ್ತಿರುವುದಲ್ಲದೇ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿ ಹಲವು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ. ಇದರಲ್ಲಿ ಐಷಾರಾಮಿ ಫೀಚರ್ಸ್ ಹೊಂದಿರುವ ಟಿ-ರಾಕ್ ಕೂಡಾ ಒಂದಾಗಿದ್ದು, ಹೊಸ ಕಾರು ಇದೇ ವರ್ಷ ಮಾರ್ಚ್ ಅಂತ್ಯದೊಳಗೆ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಟಿ-ರಾಕ್ ಕಾರು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟಗೊಳ್ಳಲಿದ್ದು, ಟಾಪ್ ಎಂಡ್ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಗಳಿಗೆ ಹೊಸ ಕಾರು ಪ್ರಬಲ ಪೈಪೋಟಿಯಾಗಲಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿವೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಎಂಜಿನ್ ಸಾಮರ್ಥ್ಯ

ಹೊಸ ಟಿ-ರಾಕ್ ಕಾರು 1.5-ಲೀಟರ್ ಫೋರ್ ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 150-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಇನ್ನು ಹೊಸ ಟಿ-ರಾಕ್ ಕಾರು ಫೋಕ್ಸ್‌ವ್ಯಾಗನ್ ಸಂಸ್ಥೆಯ ಎಂಕ್ಯೂಬಿ ಕಾರು ಉತ್ಪಾದನಾ ಪ್ಲ್ಯಾ‌ಟ್‌ಫಾರ್ಮ್ ಮೇಲೆ ಅಭಿವೃದ್ದಿಗೊಂಡಿದ್ದು, ಗುಣಮಟ್ಟ ಮತ್ತು ಅತ್ಯಧಿಕ ಪ್ರೀಮಿಯಂ ಫೀಚರ್ಸ್‌ಗಳು ಗ್ರಾಹಕರ ಗಮನಸೆಳೆಯಲಿವೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಟಿ-ರಾಕ್ ಬೆಲೆ(ಅಂದಾಜು)

ಬಿಡುಗಡೆಗೆ ಸಿದ್ದವಾಗಿರುವ ಟಿ-ರಾಕ್ ಕಾರು ಐಷಾರಾಮಿ ಫೀಚರ್ಸ್‌ಗಳಿಂದಾಗಿ ತುಸು ದುಬಾರಿಯಾಗಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.22 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಇದಲ್ಲದೇ ಹೊಸ ಕಾರನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಿಬಿಯು ನೀತಿಯಡಿ ಆಮದು ಮಾಡಿಕೊಂಡು ಮಾರಾಟ ಮಾಡಲಿದ್ದು, ಕೇಂದ್ರ ಸರ್ಕಾರವು ನೀಡಿರುವ ಆಮದು ನೀತಿಯಲ್ಲಿನ ಕೆಲವು ವಿನಾಯ್ತಿಗಳು ಕಾರು ಉತ್ಪಾದನಾ ಸಂಸ್ಥೆಗಳಿಗೆ ಭರ್ಜರಿ ಲಾಭ ತಂದುಕೊಡಲಿದೆ.

ಬಿಡುಗಡೆಗೆ ಸಿದ್ದವಾಗಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಮಾಹಿತಿ ಬಹಿರಂಗ

ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಕಾರು ಉತ್ಪಾದನಾ ಸಂಸ್ಥೆಗಳು ಭಾರತಕ್ಕೆ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೇ 2,500 ಯನಿಟ್ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಬಹುದಾಗಿದ್ದು, ಫೋಕ್ಸ್‌ವ್ಯಾಗನ್ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕಾರು ಮಾದರಿಗಳನ್ನು ಭಾರತದಲ್ಲೂ ಮಾರಾಟಕ್ಕೆ ಸಿದ್ದವಾಗುತ್ತಿವೆ.

More from DriveSpark

Article Published On: Monday, February 10, 2020, 19:24 [IST]
English summary
Volkswagen T-Roc india spec model details revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+