ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ ಮೋಟಾರ್ಸ್

ದೇಶಾದ್ಯಂತ ಎಲೆಕ್ಟ್ರಿಕ್ ಬಳಕೆಯು ಹೆಚ್ಚುತ್ತಿದ್ದು, ವಿವಿಧ ಆಟೋ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ವಾಹನಗಳ ಮೂಲಕ ಹೊಸ ಬದಲಾವಣೆಗೆ ಕಾರಣವಾಗಿವೆ. ಜೊತೆಗೆ ಪ್ರಯಾಣಿಕ ಸೇವೆಗಳಿಗೆ ಮಾತ್ರ ವಾಣಿಜ್ಯ ಚಟುವಟಿಕೆಗಳಲ್ಲೂ ಇವಿ ವಾಹನಗಳ ಪ್ರವೇಶ ಸಾಮಾನ್ಯವಾಗುತ್ತಿದ್ದು, ಇದಕ್ಕಾಗಿ ಜೂಮ್‌ಕಾರ್ ಹೊಸ ಯೋಜನೆಗೆ ಚಾಲನೆ ನೀಡಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ರೆಂಟಲ್ ಕಾರು ನಿರ್ವಹಣಾ ಕಂಪನಿಯಾದ ಜೂಮ್‌ಕಾರ್ ಕಂಪನಿಯು ಹೈದ್ರಾಬಾದ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಇಟಿಓ ಮೋಟಾರ್ಸ್ ಜೊತೆ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಕ್ಲಿನ್ ಮೊಬಿಲಿಟಿಗಾಗಿ ತ್ರಿ ಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದೆ. ಇವು ಪ್ರಯಾಣಿಕ ಸೇವೆಗಳ ಜೊತೆ ಸರಕು ಸಾಗಾಣಿಕೆ ಬಳಕೆ ಮಾಡಬಹುದಾಗಿದ್ದು, ಜೂಮ್‌ಕಾರ್ ಕಂಪನಿಯು ಇವು ಅಗತ್ಯವಿರುವ ಕಂಪನಿಗಳಿಗೆ ಸೇವೆ ಪೂರೈಸುವ ನಿರ್ವಹಣಾ ಜವಾಬ್ದಾರಿ ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ಇದಕ್ಕಾಗಿ ಎರಡು ಕಂಪನಿಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದು, ಮುಂಬರುವ ದಿನಗಳಲ್ಲಿ ಇಟಿಓ ಮೋಟಾರ್ಸ್ ಕಂಪನಿಯು ಜೂಮ್‌ಕಾರ್ ಮೂಲಕ ಹಲವು ಹೊಸ ವಾಣಿಜ್ಯ ಎಲೆಕ್ಟಿಕ್ ವಾಹನಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ದೇಶದಲ್ಲಿ ಈಗಾಗಲೇ ಹಲವಾರು ಆಟೋ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರಗಳ ಮೇಲೆ ಹೆಚ್ಚು ಗಮನಹರಿಸಿದ್ದು, ಇಟಿಓ ಮೋಟಾರ್ಸ್ ಮಾತ್ರ ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸಲು ಪ್ರಯಾಣಿಕ ಬಳಕೆಯ ಇವಿ ವಾಹನಗಳಿಂತಲೂ ಮೊದಲು ವಾಣಿಜ್ಯ ಬಳಕೆಯ ವಾಹನಗಳ ವಿಭಾಗದಲ್ಲಿ ಬದಲಾವಣೆ ಮಾಡಬೇಕೆಂಬ ಧ್ಯೇಯೋದ್ದೇಶ ಹೊಂದಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ಹೀಗಾಗಿ ಮೊದಲ ಹಂತದಲ್ಲಿ ತ್ರಿ ಚಕ್ರ ಎಲೆಕ್ಟ್ರಿಕ್ ವಾಹನಗಳ ಮೂಲಕ ಮಾರುಕಟ್ಟೆ ಪ್ರವೇಶಿಸುವ ಮೂಲಕ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಜೂಮ್‌ಕಾರ್ ಮೂಲಕ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸುವ ಗುರಿಹೊಂದಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ಇನ್ನು ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ಚಾಲಿತ ವಾಹನಗಳಿಂದ ಭಾರೀ ಪ್ರಮಾಣದ ಮಾಲಿನ್ಯ ಉತ್ಪಾದನೆಯಾಗುತ್ತಿದ್ದು, ಮಾಲಿನ್ಯ ತಗ್ಗಿಸಲು ನಿಟ್ಟಿನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ನಿಯಮ ಜಾರಿಗೆ ತರುತ್ತಿವೆ.

MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ಸದ್ಯ ಮಾರುಕಟ್ಟೆಯಲ್ಲಿ ವಿನೂತನ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳು ಖರೀದಿಗೆ ಲಭ್ಯವಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳೇ ಹೆಚ್ಚಿನ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯೂ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಇದೀಗ ಭಾರೀ ಬದಲಾವಣೆಗೆ ಕಾರಣವಾಗಿದ್ದರೂ ನೀರಿಕ್ಷಿತ ಮಟ್ಟದಲ್ಲಿ ಇವಿ ವಾಹನಗಳಿಗೆ ಬೇಡಿಕೆ ಹರಿದುಬರುತ್ತಿಲ್ಲ. ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೂ ಮುಂದಾದರೂ ಇವಿ ವಾಹನಗಳ ಬ್ಯಾಟರಿ ರೇಂಜ್ ಮತ್ತು ಸಾರ್ವಜನಿಕ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯು ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಎಲೆಕ್ಟ್ರಿಕ್ ಮೊಬಿಲಿಟಿ ನಿರ್ವಹಣೆಗಾಗಿ ಜೂಮ್‌ಕಾರ್ ಜೊತೆಗೂಡಿದ ಇಟಿಓ

ಎಲೆಕ್ಟ್ರಿಕ್ ವಾಹನಗಳ ಖರೀದಿಸುವ ಗ್ರಾಹಕರಿಗೆ ಸೂಕ್ತ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಿರುವ ಕರ್ನಾಟಕ ಸರ್ಕಾರವು ನಮ್ಮ ಬೆಂಗಳೂರಿನಲ್ಲಿ ಬರೋಬ್ಬರಿ 112 ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಿದೆ.

Article Published On: Tuesday, July 28, 2020, 21:14 [IST]
English summary
Zoomcar Announces Partnership With ETO Motors To Boost Shared Electric Mobility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+