ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಫೋರ್ಡ್ ತನ್ನ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿತ್ತು. ಕೆಲವು ವರದಿಗಳ ಪ್ರಕಾರ, ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಮುಂದಿನ ವಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು ಟೈಟಾನಿಯಂ ಮತ್ತು ಸ್ಪೋರ್ಟ್ ಟ್ರಿಮ್‌ಗಳ ಕೆಳಗಿನ ಸ್ಥಾನದಲ್ಲಿರುತ್ತದೆ. ಇನ್ನು ಈ ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ.

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 123 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಆದರೆ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ನಲ್ಲಿ ನೀಡುವ ಎಂಜಿನ್ ಆಯ್ಕೆಯ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ. ಎಸ್ಇ

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್ಇ ಎಸ್‌ಯುವಿಯು ಗ್ಲೋಬಲ್-ಸ್ಪೆಕ್ ಮಾದರಿಯಿಂದ ಸ್ಫೂರ್ತಿ ಪಡೆದ ಹಿಂದಿನ ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಿರುತ್ತದೆ. ಹೊಸ ವೆರಿಯೆಂಟ್ ಟೈಲ್‌ಗೇಟ್ ಮೌಂಟಡ್ ಸ್ಪೇರ್ ಟೈರ್ ಅನ್ನು ಹೊಂದಿರುವುದಿಲ್ಲ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಹೊಸದಾಗಿ ವಿನ್ಯಾಸಗೊಳಿಸಲಾದ ಹಿಂಭಾಗದ ಸ್ಕಿಡ್ ಪ್ಲೇಟ್ ಮತ್ತು ದಪ್ಪ ಕ್ರೋಮ್‌ ನೊಂದಿಗೆ ಟೈಲ್‌ಗೇಟ್ ಅದರ ಪೋರ್ಟ್ಫೋಲಿಯೊಗೆ ಮತ್ತಷ್ಟು ವ್ಯತ್ಯಾಸವನ್ನು ಸೂಚಿಸುತ್ತದೆ. ಹೊಸ ಮಾದರಿಯು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಪಂಕ್ಚರ್ ರಿಪೇರಿ ಕಿಟ್‌ನೊಂದಿಗೆ ಬರಬಹುದು.

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಫೋರ್ಡ್ ಮೋಟಾರ್ ಕಂಪನಿ ಮತ್ತು ಮಹೀಂದ್ರಾ ಇತ್ತೀಚೆಗೆ ತಮ್ಮ ಜಂಟಿ ಉದ್ಯಮವನ್ನು ರದ್ದುಗೊಳಿಸಿದ್ದು, ಇದನ್ನು ಅಕ್ಟೋಬರ್ 2019 ರಲ್ಲಿ ಘೋಷಿಸಲಾಯಿತು. ಈ ಸಹಭಾಗಿತ್ವದಲ್ಲಿ ಹಲವಾರು ಕಾರು ತಯಾರಕರು ಹೊಸ ಫೋರ್ಡ್ ಸಿ-ಎಸ್‌ಯುವಿ ಮತ್ತು ಇಕೋಸ್ಪೋರ್ಟ್ ಟರ್ಬೊ ಪೆಟ್ರೋಲ್ ಅನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಐದು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಆಂಬಿಡೆಂಟ್, ಟ್ರೆಂಡ್, ಟೈಟಾನಿಯಂ, ಟೈಟಾನಿಯಂ ಪ್ಲಸ್ ಮತ್ತು ಸ್ಪೋರ್ಟ್ಸ್ ಆಗಿದೆ. ಟಿಟಾನಿಯಂ ಪ್ಲಸ್ ರೂಪಾಂತರವನ್ನು ಹೊರತುಪಡಿಸಿ ಉಳಿದವೆಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಬಿಡುಗಡೆ

ಫೋರ್ಡ್ ಇಕೋಸ್ಪೋರ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಮುಂದಿನ ವಾರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Tuesday, March 2, 2021, 12:37 [IST]
English summary
2021 Ford EcoSport SE Officially Teased, Launch Likely On 3rd March. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+