ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರು
ಮಿನಿ ಕಂಪನಿಯು ತನ್ನ 2022ರ ಜಾನ್ ಕೂಪರ್ ವರ್ಕ್ಸ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಈ 2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರು ವಿನ್ಯಾಸ ಬದಲಾವಣೆಗಳೊಂದಿಗೆ ಹೊಸ ಸಸ್ಪೆಂಕ್ಷನ್ ಸೆಟಪ್ ಅನ್ನು ಪಡೆದುಕೊಂಡಿದೆ.

2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರಿನ ವಿನ್ಯಾಸ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ರೌಂಡ್ ಎಲ್ಇಡಿ ಹೆಡ್‌ಲೈಟ್‌ಗಳು, ರೇಡಿಯೇಟರ್ ಗ್ರಿಲ್ ಮತ್ತು ಬಂಪರ್‌ನಲ್ಲಿ ದೊಡ್ಡ ಏರ್ ಟೆಕ್ ಗಳನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಸೈಡ್ ಪ್ಯಾನೆಲ್ ಗಳು, ಹಿಂಭಾಗದ ಬಂಪರ್ ಜೊತೆಗೆ ಮರುವಿನ್ಯಾಸಗೊಳಿಸಲಾದ ಸೈಡ್ ಸ್ಕಟಲ್ಸ್. ಹಿಂಭಾಗದ ಬಂಪರ್ ಡಿಫ್ಯೂಸರ್ ಅನ್ನು ಸಹ ಹೊಂದಿದೆ.

ಇನ್ನು ಈ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರಿನ ಒಳಬಾಗದಲ್ಲಿಯು ಕೂಡ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಇದರ ಒಳಭಾಗದಲ್ಲಿ ನವೀಕರಿಸಿದ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಸಿಸ್ಟಂ ಉತ್ತಮ ಗ್ರಾಫಿಕ್ಸ್ ಮತ್ತು ಲೈವ್ ವಿಜೆಟ್‌ಗಳೊಂದಿಗೆ ಹೊಸ ಸಾಫ್ಟ್‌ವೇರ್ ಅನ್ನು ಪಡೆಯುತ್ತದೆ, ಇದನ್ನು ಟಚ್‌ಸ್ಕ್ರೀನ್‌ನಲ್ಲಿ ಸ್ವೈಪಿಂಗ್ ಚಲನೆಯ ಮೂಲಕ ಆಯ್ಕೆ ಮಾಡಬಹುದು. ಇನ್ನು ಹಲವು ಬಣ್ಣಗಳನ್ನು ಒಳಗೊಂಡ ಅಂಬೈಡ್ ಲೈಟ್ ಅನ್ನು ಹೊಂದಿದೆ.

ಈ ಕಾರನ್ನು "ಸ್ಪೋರ್ಟ್" ಮೋಡ್‌ಗೆ ಬದಲಾಯಿಸಿದಾಗ ಅದರಂತೆ ಡಿಸ್ ಪ್ಲೇ ಬಣ್ಣಗಳು ಬದಲಾಗುತದೆ. ಇನ್ನು ಈ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರಿನಲ್ಲಿ ಗುಣಮಟ್ಟದ ಡ್ರೈವಿಂಗ್ ಮೋಡ್‌ಗಳಿಗೆ ಲಿಂಕ್ ಮಾಡಬಹುದು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಅಂದರೆ ಸಸ್ಪೆಂಕ್ಷನ್ ಸೆಟಪ್ ಆಗಿದೆ. ಈ ಕಾರು ಇದೀಗ ಹೊಸ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಸೆಟಪ್ ಆಯ್ಕೆಯನ್ನು ಪಡೆಯುತ್ತದೆ.

ಮಿನಿ ಕಂಪನಿಯು ತನ್ನ ಹೊಸ ಕಂಟ್ರಿಮ್ಯಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಬಿಡುಗಡೆಗೊಳಿಸಿತು. ಈ ಮಿಮಿನಿ ಕಂಟ್ರಿಮ್ಯಾನ್ ನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ಎರಡೂ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಈ ಮಿನಿ ಕಂಟ್ರಿಮ್ಯಾನ್ ಒಂದೇ ರೀತಿಯ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಸಾಗಿಸುವುದರ ಜೊತೆಗೆ ಹಲವಾರು ರಿಫ್ರೆಶ್ ಸ್ಟೈಲಿಂಗ್ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಮಿನಿ ಜಾನ್ ಕೂಪರ್ ವರ್ಕ್ಸ್ ಫೇಸ್‌ಲಿಫ್ಟ್ ಕಾರಿನಲ್ಲಿ ದೇ 2.0-ಲೀಟರ್, ನಾಲ್ಕು-ಸಿಲಿಂಡರ್, ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 231 ಬಿಹೆಚ್‍ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಹೊಸದಾಗಿ ಈ ಕಾರಿನಲ್ಲಿ 8-ಸ್ಫೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗುತ್ತದೆ. ಇನ್ನು 2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








