ಹೊಸ ಹ್ಯುಂಡೈ ಕಾರು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ಬ್ರಹ್ಮಗಂಟು ಸೀರಿಯಲ್ ನಟ ಭರತ್ ಬೋಪಣ್ಣ ಅವರು ಹೊಸ ಕಾರನ್ನು ಖರೀದಿಸಿದ್ದಾರೆ. ಬ್ರಹ್ಮಗಂಟು ಸೀರಿಯಲ್‌ನಲ್ಲಿ ಲಕ್ಕಿಯಾಗಿ ಹೆಂಗಳೆಯರ ಮನಗೆದ್ದ ಮಂಜಿನ ನಗರಿಯ ಕುವರ ಭರತ್ ಬೋಪಣ್ಣ ಹೊಸ ಹ್ಯುಂಡೈ ವೆರ್ನಾ ಕಾರಿನ ಒಡೆಯನಾಗಿದ್ದಾರೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ನಟ ಭರತ್ ಬೋಪಣ್ಣ ಅವರು ತಮ್ಮ ಹೊಸ ಕಾರಿನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಕೆಳಗೆ ಹಲವು ಸೆಲಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ ಕಾಮೆಂಟ್ ಮಾಡಿದ್ದಾರೆ. ಅವರು ಖರೀದಿಸಿರುವುದು ಹ್ಯುಂಡೈ ವೆರ್ನಾ ಎಸ್ಎಕ್ಸ್ ವೆರಿಯೆಂಟ್ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ನಟ ಭರತ್ ಬೋಪಣ್ಣ ಅವರು ಆಕರ್ಷಕವಾದ ಬಿಳಿ ಬಣ್ಣದ ಹ್ಯುಂಡೈ ವೆರ್ನಾ ಕಾರನ್ನು ಖರೀದಿಸಿದ್ದಾರೆ. ಈ ಹ್ಯುಂಡೈ ವೆರ್ನಾ ಎಸ್ಎಕ್ಸ್ ವೆರಿಯೆಂಟ್ ಬೆಲೆಯು ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ.10.89 ಲಕ್ಷಗಳಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ನಟ ಭರತ್ ಬೋಪಣ್ಣ ಇಲ್ಲಿಯವರೆಗೂ ಗಿರಿಜಾ ಕಲ್ಯಾಣ, ರಾಧಾ ರಮಣ, ಜ್ಯೋತಿ ಮತ್ತು ಬ್ರಹ್ಮಗಂಟು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಡೆಮೊ ಪೀಸ್‌ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಸದ್ಯಕ್ಕೆ ಅವರು ಬ್ರಹ್ಮಗಂಟು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ಈ 1.5 ಲೀಟರ್ ಲೀಟರ್ ಹೊರತಾಗಿ ಟಾಪ್-ಸ್ಪೆಕ್ ಎಸ್‌ಎಕ್ಸ್ (ಒ) ರೂಪಾಂತರದಲ್ಲಿ ಪ್ರತ್ಯೇಕವಾಗಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಟರ್ಬೊ-ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ಇದರ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‍ ಗಳು ಕ್ರಮವಾಗಿ 115 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್, 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ ಗಳೊಂದಿಗೆ 6-ಸ್ಪೀಡ್ ಮ್ಯಾನುವರ್ ಗೇರ್‌ಬಾಕ್ಸ್‌ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಗಳನ್ನು ಹೊಂದಿವೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ವೆರ್ನಾ ಕಾರಿನಲ್ಲಿ 8.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಇದರೊಂದಿಗೆ ಹೊಸ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಕ್ಸ್ ವುಡ್ ಡ್ಯಾಶ್‌ಬೋರ್ಡ್, ಅಲ್ಯುಮಿನಿಯಂ ಟ್ರಿಮ್ ಮತ್ತು ಹೊಸ ಮಾದರಿಯ ಎಸಿ ವೆಂಟ್ಸ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ಇದರೊಂದಿಗೆ ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಓಪನಿಂಗ್, ವೈರ್‌ಲೆಸ್ ಮೊಬೈಲ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಇದರೊಂದಿಗೆ 45 ಫೀಚರ್ಸ್‍ಗಳೊಂದಿಗೆ ಬ್ರಾಂಡ್‌ನ ಬ್ಲೂ ಲಿಂಕ್ ಕನೆಕ್ಟಿವಿಟಿ ಸೂಟ್‌ ಅನ್ನ್ ಒಳಗೊಂಡಿದೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ಕಾರಿನ ಮುಂಭಾಗ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿದೆ. ಇನ್ನು ಹೊಸ ವೆರ್ನಾ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಮುಂಭಾಗದ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಕಾರನ್ನು ಖರೀದಿಸಿದ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಭರತ್ ಬೋಪಣ್ಣ

ಹೆಚ್ಚಿನ ರೂಪಾಂತರಗಳು ಒಟ್ಟು ಆರು ಏರ್‌ಬ್ಯಾಗ್‌ಗಳು, ಇಎಸ್‍ಸಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್(ಟಾಪ್ ವೆರಿಯೆಂಟ್ ನಲ್ಲಿ ಮಾತ್ರ) ಮತ್ತು ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿದೆ. ಹ್ಯುಂಡೈ ವೆರ್ನಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಸ್ಕೋಡಾ ರ‍್ಯಾಪಿಡ್ ಮತ್ತು ಪೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Kannada
English summary
Actor Bharat Bopanna Buys New Hyundai Verna. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X