ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

Tata Nexon, Hyundai Venue, Kia Seltos, BMW X 3, Mercedes Benz ನಂತಹ ಕಾರುಗಳಲ್ಲಿ ಒಂದು ಸಾಮಾನ್ಯ ಸಂಗತಿಯನ್ನು ಗಮನಿಸಬಹುದು. ಈ ಸಾಮಾನ್ಯ ಸಂಗತಿ ಪ್ಲಾಸ್ಟಿಕ್ ಕ್ಲಾಡಿಂಗ್ ಆಗಿದೆ. ಈ ಕಾರುಗಳು ಮೇಲೆ ಮಾತ್ರವಲ್ಲದೆ ಬಹುತೇಕ ಎಲ್ಲಾ ಎಸ್‌ಯು‌ವಿಗಳಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ನೀಡುವುದು ಈಗ ಸಾಮಾನ್ಯವಾಗಿದೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸಾಮಾನ್ಯವಾಗಿ ಜಗತ್ತಿನ ಪ್ರತಿಯೊಂದು ದೇಶವೂ ಒಂದೊಂದು ರೀತಿಯ ಆಟೋಮೊಬೈಲ್ ಟ್ರೆಂಡ್‌ಗಳನ್ನು ಹೊಂದಿರುತ್ತದೆ. ಯುರೋಪಿನ ಗ್ರಾಹಕರು ಕಾರುಗಳ ಐಷಾರಾಮಿ ಫೀಚರ್ ಗಳಿಗೆ ಹೆಚ್ಚು ಗಮನ ನೀಡುತ್ತಾರೆ. ಇನ್ನು ಭಾರತೀಯ ಗ್ರಾಹಕರು ಮೈಲೇಜ್ ಜೊತೆಗೆ ಕಾರುಗಳ ವಿನ್ಯಾಸ ಹಾಗೂ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಕಾರುಗಳನ್ನು ಆಕರ್ಷಕವಾಗಿಸಲು ಕಾರು ತಯಾರಕ ಕಂಪನಿಗಳು ವಿವಿಧ ತಂತ್ರಗಳನ್ನು ಬಳಸುತ್ತವೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಇವುಗಳಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಸಹ ಒಂದು. ಈ ಪ್ಲಾಸ್ಟಿಕ್ ಕ್ಲಾಡಿಂಗ್ ಗಳನ್ನು ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಎಲ್ಲಾ ಎಸ್‌ಯು‌ವಿಗಳ ಸೈಡ್ ನಲ್ಲಿ ನೀಡಲಾಗುತ್ತದೆ. ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಯಾವ ಕಾರಣಕ್ಕೆ ನೀಡಲಾಗುತ್ತದೆ. ಇವುಗಳಿಂದಾಗುವ ಅನುಕೂಲಗಳೇನು, ಅನಾನುಕೂಲಗಳೇನು ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ವಿವಿಧ ಆಕಾರ ಹಾಗೂ ಗಾತ್ರಗಳನ್ನು ಹೊಂದಿರುತ್ತವೆ. ಕಾರುಗಳನ್ನು ಆಕರ್ಷಕವಾಗಿಸಲು ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ನೀಡಲಾಗುತ್ತದೆ. ಕಾರುಗಳು ನಿಜವಾಗಿಯೂ ಇರುವುದಕ್ಕಿಂತ ಹೆಚ್ಚು ಶಕ್ತಿಯುತವಾಗಿ ಹಾಗೂ ಹೆಚ್ಚು ಬಾಳಿಕೆ ಬರುವಂತೆ ಮಾಡಲು ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಬಳಸಲಾಗುತ್ತದೆ. ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ಕಾರಿನ ಉತ್ಪಾದನಾ ವೆಚ್ಚವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ನೆರವಾಗುತ್ತವೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಪ್ಲಾಸ್ಟಿಕ್ ಕ್ಲಾಡಿಂಗ್‌ಗಳ ಬೆಲೆ ಕಡಿಮೆಯಾದ ಕಾರಣ ಕಾರುಗಳ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. ಇದರಿಂದ ಗ್ರಾಹಕರು ಕಾರು ಖರೀದಿ ವೇಳೆ ಹೆಚ್ಚು ಹಣ ನೀಡುವುದು ತಪ್ಪುತ್ತದೆ. ಹಾಗೆಯೇ ಕಾರು ರಗಡ್ ಆಗಿ ಕಾಣಿಸುತ್ತದೆ. ಕಾರು ತಯಾರಕ ಕಂಪನಿಗಳು ಕಾರುಗಳ ಹೊರಭಾಗದಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಒದಗಿಸುವ ಪ್ರಯೋಜನಗಳನ್ನು ನಿಧಾನವಾಗಿ ಕಂಡು ಕೊಳ್ಳುತ್ತಿವೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸೆಡಾನ್ ಮಾದರಿಯ ಕಾರುಗಳಲ್ಲಿಯೂ ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಗಮನಿಸಬಹುದು. ಪ್ಲಾಸ್ಟಿಕ್ ಕ್ಲಾಡಿಂಗ್ ಅಳವಡಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಮೊದಲ ಅನುಕೂಲವೆಂದರೆ ಕಡಿಮೆ ವೆಚ್ಚದಲ್ಲಿ ಕಾರು ಆಕರ್ಷಕವಾಗಿ ಕಾಣಿಸುತ್ತದೆ. ಹೊರಭಾಗದಲ್ಲಿ ಅಳವಡಿಸಲಾಗಿರುವ ಪ್ಲಾಸ್ಟಿಕ್ ಕ್ಲಾಡಿಂಗ್ ಕಾರಿಗೆ ಒರಟು ಲುಕ್ ನೀಡುವುದರ ಜೊತೆಗೆ ಕಾರುಗಳನ್ನು ಮೌಲ್ಯಯುತವಾಗಿಸುತ್ತದೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಒಂದು ವೇಳೆ ಅಪಘಾತ ಸಂಭವಿಸಿದರೂ ಸಹ ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಸುಲಭವಾಗಿ ಬದಲಿಸಬಹುದು. ಸಾಮಾನ್ಯವಾಗಿ ಬಂಪರ್‌ಗಳೊಂದಿಗೆ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಪದರಗಳಲ್ಲಿ ನೀಡಲಾಗುತ್ತದೆ. ಇದರಿಂದ ಹಾನಿಗೊಳಗಾದ ಪದರವನ್ನು ಮಾತ್ರ ಬದಲಾಯಿಸಬೇಕು. ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ. ಇದರಿಂದ ಇವುಗಳನ್ನು ಬದಲಿಸಲು ಹೆಚ್ಚು ಖರ್ಚು ಮಾಡಬೇಕಾಗಿಲ್ಲ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು, ಫೆಂಡರ್‌ಗಳು ತುಕ್ಕು ಹಿಡಿಯುವುದನ್ನು ತಡೆಯುತ್ತವೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆಯೇ, ಯಾವುದಾದರೂ ವಸ್ತುಗಳಿಂದಅನುಕೂಲಗಳು ಇರುವಂತೆ ಕೆಲವು ಅನಾನುಕೂಲಗಳೂ ಇರುತ್ತವೆ. ಹಾಗೆಯೇ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದ ಕೆಲವು ಅನಾನುಕೂಲಗಳಿವೆ. ಆದರೆ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದ ದೊಡ್ಡ ಪ್ರಮಾಣದ ಅನಾನುಕೂಲಗಳಿಲ್ಲ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸುತ್ತಲೂ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಹೊಂದಿರುವ ಕಾರನ್ನು ಖರೀದಿಸುವವರು ಅವುಗಳ ನಿರ್ವಹಣೆಯ ವಿಷಯದಲ್ಲಿ ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಾರಿನ ಸುತ್ತಲೂ ಒದಗಿಸಲಾದ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ಹೆಚ್ಚು ಬಣ್ಣವನ್ನು ಹೊಂದಿರುವುದಿಲ್ಲ. ಇದರಿಂದ ಈ ಪ್ಲಾಸ್ಟಿಕ್ ಬೇಗ ಮಾಯವಾಗುವುದರಿಂದ ಕಾರು ತ್ವರಿತವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಇದು ಪ್ಲಾಸ್ಟಿಕ್ ಕ್ಲಾಡಿಂಗ್‌ನ ಮುಖ್ಯ ಅನಾನುಕೂಲವಾಗಿದೆ. ಪ್ಲಾಸ್ಟಿಕ್ ಕ್ಲಾಡಿಂಗ್‌ ಹೊಂದಿರುವ ಕಾರನ್ನು ಖರೀದಿಸಬಹುದೇ ಎಂಬ ಪ್ರಶ್ನೆ ಮೂಡುವುದು ಸಹಜ. ಪ್ಲಾಸ್ಟಿಕ್ ಕ್ಲಾಡಿಂಗ್‌ ಹೊಂದಿರುವ ಕಾರ್ ಅನ್ನು ನಿಶ್ಚಿಂತೆಯಿಂದ ಖರೀದಿಸಿ. ಪ್ಲಾಸ್ಟಿಕ್ ಕ್ಲಾಡಿಂಗ್‌ಗಳ ಮೆರುಗು ಬೇಗನೆ ಮಸುಕಾಗುತ್ತದೆ. ಆದರೆ ಇದನ್ನು ಸರಿ ಪಡಿಸಲು ಬೇಕಾದ ಹಲವು ದ್ರವ ಪದಾರ್ಥಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಗೆ ಮರಳಿ ಹೊಳಪು ತರಲು ಇವು ನೆರವಾಗುತ್ತವೆ. ಇದರಿಂದ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ಹೊಸದರಂತೆ ಕಾಣುತ್ತವೆ. ಹಾಗಾಗಿ ಪ್ಲಾಸ್ಟಿಕ್ ಕ್ಲಾಡಿಂಗ್ ಇರುವ ಕಾರುಗಳನ್ನು ಖರೀದಿಸಲು ಹಿಂಜರಿಯಬೇಡಿ. ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ಸಹ ಇತರ ಬಿಡಿ ಭಾಗಗಳಂತೆ ಆಗಿದ್ದು, ಅವುಗಳು ಹಾನಿಗೀಡಾದರೆ ಸರಿ ಪಡಿಸಬಹುದು. ಇಲ್ಲವೇ ಅವುಗಳನ್ನು ಬದಲಿಸಬಹುದು.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಕೆಲವೊಮ್ಮೆ ಕಾರು ಐಡ್ಲಿಂಗ್'ನಲ್ಲಿರುವಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ. ಕಾರು ಐಡ್ಲಿಂಗ್'ನಲ್ಲಿರುವಾಗ ಕಾರುಗಳಲ್ಲಿರುವ ಎಸಿಗಳು ಕಾರ್ಯ ನಿರ್ವಹಿಸದೇ ಇರಲು ಕಾರಣಗಳೇನು ಎಂಬುದನ್ನು ನೋಡುವುದಾದರೆ,ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯನಿರ್ವಹಿಸದೇ ಇದ್ದರೆ ಮೊದಲು ಕಂಡೆನ್ಸರ್‌ನಲ್ಲಿರುವ ಕೂಲಿಂಗ್ ಫ್ಯಾನ್ ಅನ್ನು ಗಮನಿಸಿ. ಈ ಫ್ಯಾನ್ ಹಾನಿಗೊಳಗಾಗಿದ್ದರೆ ಕಂಡೆನ್ಸರ್ ಮೂಲಕ ಫ್ರೀಯಾನ್‌ನಿಂದ ಬರುವ ಶಾಖವನ್ನು ತಣ್ಣಗಾಗಿಸಲು ಸಾಧ್ಯವಾಗುವುದಿಲ್ಲ.ಕಾರು ವೇಗವಾಗಿ ಹೋಗುತ್ತಿರುವಾಗ, ಫ್ರೀಯಾನ್ ಅನ್ನು ತಂಪಾಗಿಸಲು ಕಂಡೆನ್ಸರ್'ಗೆ ಫ್ಯಾನ್ ಅಗತ್ಯವಿಲ್ಲ. ಏಕೆಂದರೆ ಸಾಕಷ್ಟು ಗಾಳಿಯು ಪಾಸ್ ಆಗುತ್ತದೆ. ಆದರೆ ಕಾರು ಐಡ್ಲಿಂಗ್'ನಲ್ಲಿದ್ದಾಗ ಫ್ರೀಯಾನ್ ಅನ್ನು ತಂಪಾಗಿಡಲು ಕಂಡೆನ್ಸರ್ ಫ್ಯಾನ್ ಅವಶ್ಯಕವಾಗಿದೆ.

ಕಾರುಗಳಲ್ಲಿರುವ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಫ್ರೀಯಾನ್ ಪ್ರಮಾಣವು ಕಡಿಮೆಯಾಗಿದ್ದರೂ ಸಹ, ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ. ಕಾರು ವೇಗವಾಗಿ ಸಾಗುವಾಗ ಕಂಪ್ರೆಸರ್ ಫ್ರೀಯಾನ್ ಅನ್ನು ಸುಲಭವಾಗಿ ಪಂಪ್ ಮಾಡುತ್ತದೆ. ಆದರೆ ಕಾರು ಐಡ್ಲಿಂಗ್'ನಲ್ಲಿದ್ದಾಗ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.ಈ ಕಾರಣದಿಂದಲೂ ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸಲು ವಿಫಲವಾಗುತ್ತದೆ. ಈ ಕಾರ್ಯವಿಧಾನವನ್ನು ತಿಳಿದರೆ ಕಾರಿನಲ್ಲಿರುವ ಎಸಿ ಕಾರ್ಯನಿರ್ವಹಿಸದೇ ಇದ್ದಾಗ ನೀವೇ ಸರಿಪಡಿಸಿಕೊಳ್ಳಬಹುದು.

Most Read Articles

Kannada
English summary
Advantages and disadvantages of plastic claddings in cars details
Story first published: Sunday, October 31, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X