ಭಾರತದಲ್ಲಿ ನಾಳೆ ಬಿಡುಗಡೆಯಾಗಲಿದೆ ಆಡಿ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರು ಇ-ಟ್ರಾನ್
ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಆಡಿ ಕಂಪನಿಯು ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಮುಂಚೂಣಿ ಸಾಧಿಸುತ್ತಿದ್ದು, ತನ್ನ ಮೊದಲ ಇವಿ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿಯೊಂದಿಗೆ ಇದೀಗ ದೇಶಿಯ ಮಾರುಕಟ್ಟೆಯಲ್ಲೂ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಆಡಿ ಕಂಪನಿಯು ಭಾರತದಲ್ಲಿ ಇದೇ ತಿಂಗಳು 22ರಂದು ತನ್ನ ಇವಿ ಕಾರು ಮಾದರಿಯಾದ ಇ-ಟ್ರಾನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಹಲವಾರು ಹೊಸ ಮಾದರಿಯ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 50, 55 ಮತ್ತು 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳಲಿದೆ.

ಇ-ಟ್ರಾನ್ ಕಾರಿನಲ್ಲಿ 50 ಕ್ವಾಟ್ರೋ ಮಾದರಿಯು 71.2 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ 312 ಬಿಹೆಚ್‌ಪಿ ಪವರ್ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ 55 ಕ್ವಾಟ್ರೋ ಮಾದರಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ 435 ಬಿಹೆಚ್‌ಪಿ ಪವರ್ ಹಾಗೂ 808 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬೂಸ್ಟ್ ಮೋಡ್‌ನಲ್ಲಿ ಕಾರು 503 ಬಿಹೆಚ್‌ಪಿ ಪವರ್ ಹಾಗೂ 973 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಇ-ಟ್ರಾನ್ ಎಸ್‌ಯುವಿಯು 441 ಕಿ.ಮೀಗಳವರೆಗೆ ಚಲಿಸುತ್ತದೆ. ಬ್ಯಾಟರಿ ಪ್ಯಾಕ್ ಆಧಾರದ ಮೇಲೆ ಕಾರಿನ ಬೆಲೆ ನಿರ್ಧಾರವಾಗಲಿದ್ದು, ಹೊಸ ಕಾರು ಮರ್ಸಿಡಿಸ್ ಇಕ್ಯೂಸಿ ಮತ್ತು ಜಾಗ್ವಾರ್ ಐ-ಪೇಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹಾಗೆಯೇ ಬೂಸ್ಟ್ ಮೋಡ್‌ನಲ್ಲಿ 503 ಬಿಹೆಚ್‌ಪಿ ಪವರ್ ಹಾಗೂ 973 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಇ-ಟ್ರಾನ್ ಎಸ್‌ಯುವಿಯು 441 ಕಿ.ಮೀಗಳವರೆಗೆ ಚಲಿಸುತ್ತದೆ. ಬ್ಯಾಟರಿ ಪ್ಯಾಕ್ ಆಧಾರದ ಮೇಲೆ ಕಾರಿನ ಬೆಲೆ ನಿರ್ಧಾರವಾಗಲಿದ್ದು, ಹೊಸ ಕಾರು ಮರ್ಸಿಡಿಸ್ ಇಕ್ಯೂಸಿ ಮತ್ತು ಜಾಗ್ವಾರ್ ಐ-ಪೇಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಕಾರು ಗ್ರಾಹಕರು ಸೆಳೆಯಲು ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಹೊಸ ಕಾರಿನ ಕಂಪನಿಯು ಘೋಷಣೆ ಮಾಡಿರುವ ವಾರಂಟಿ, ಸರ್ವಿಸ್ ಮತ್ತು ಬೈಬ್ಯಾಕ್ ಆಯ್ಕೆಗಳು ಹೊಸ ಕಾರಿನ ಖರೀದಿ ಮೌಲ್ಯವನ್ನು ಹೆಚ್ಚಿಸುತ್ತವೆ.

ಇ-ಟ್ರಾನ್ ಕಾರಿನ ಮೇಲೆ ಆಡಿ ಕಂಪನಿಯು ಎರಡು ವರ್ಷಗಳ ಕಾಲ ಸ್ಟ್ಯಾಂಡರ್ಡ್ ವಾರಂಟಿ ಘೋಷಿಸಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧಾರದ ಮೇಲೆ ವಾರಂಟಿ ನೀಡುತ್ತಿದೆ.

ಬ್ಯಾಟರಿ ಪ್ಯಾಕ್ ಮೇಲೆ ಗ್ರಾಹಕರ ಹೆಚ್ಚುವರಿ ಮೊತ್ತ ಪಾವತಿಸಿದ್ದಲ್ಲಿ ವಾರಂಟಿ ಅವಧಿಯನ್ನು ಮತ್ತೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡುವ ಅವಕಾಶಗಳಿದ್ದು, ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿಗಾಗಿ 5 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಸೌಲಭ್ಯ ನೀಡಲಾಗಿದೆ.

ಇದರ ಜೊತೆಗೆ ಹೊಸ ಕಾರು ಖರೀದಿಸಿದ ನಂತರ ಮೂರು ವರ್ಷಗಳ ಅವಧಿಯೊಳಗೆ ಕಾರ ನಿರ್ವಹಣೆ ಮಾಡಲು ಸಾಧ್ಯವಾಗದೆ ಮರುಮಾರಾಟ ಮಾಡುವ ಇಚ್ಚೆಯಿದ್ದಲ್ಲಿ ಅತ್ಯುತ್ತಮ ದರಗಳಲ್ಲಿ ಕಂಪನಿಯೇ ಉತ್ತಮ ದರದೊಂದಿಗೆ ಬೈಬ್ಯಾಕ್ ಮಾಡಲಿದ್ದು, ಗ್ರಾಹಕರಿಗೆ ಇದು ಹೊಸ ಕಾರಿನಿಂದ ಆಗಬಹುದಾದ ಆರ್ಥಿಕ ಸಂಕಷ್ಟ ತಪ್ಪಿಸಲಿದೆ.

ಇನ್ನು ಹೊಸ ಇ-ಟ್ರಾನ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.95 ಲಕ್ಷದಿಂದ ರೂ. 1 ಕೋಟಿ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಇವಿ ಕಾರು ಮಾದರಿಗಾಗಿ ಕಂಪನಿಯು ಪ್ರತಿ ಕಾರು ಶೋರೂಂಗಳಲ್ಲೂ 50kW ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳನ್ನು ತೆರೆಯುತ್ತಿದೆ.


Click it and Unblock the Notifications








