ಲಾಕ್‌ಡೌನ್ ವಿಸ್ತರಣೆ ಹಿನ್ನಲೆ ಜೂನ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್
ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ಪರಿಣಾಮ ಹೊಸ ವಾಹನಗಳ ಬಿಡುಗಡೆ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಸಹ ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಮಾದರಿಯು ಜೂನ್ ಅಂತ್ಯಕ್ಕೆ ಬಿಡುಗಡೆ ಮಾಡುವ ನೀರಿಕ್ಷೆಯಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಸ್ತರಿಸುತ್ತಿರುವುದು ಆರ್ಥಿಕ ಚಟುವಟಿಕೆಗಳ ಭಾರೀ ಹೊಡೆತ ಬೀಳುತ್ತಿದ್ದು, ಹೊಸ ವಾಹನ ಮಾರಾಟದಲ್ಲೂ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ವಾಹನ ಮಾದರಿಗಳ ಮಾರಾಟವನ್ನು ಸುಧಾರಿಸುವತ್ತ ಗಮನಹರಿಸಿರುವ ಆಟೋ ಕಂಪನಿಗಳು ಹೊಸ ವಾಹನಗಳ ಬಿಡುಗಡೆಯ ಯೋಜನೆಯಿಂದಾಗಬಹುದಾದ ನಷ್ಟದ ಬಗ್ಗೆ ಎಚ್ಚರವಹಿಸುತ್ತಿವೆ.

ಹ್ಯುಂಡೈ ಮೋಟಾರ್ಸ್ ಕಂಪನಿಯು ಕೂಡಾ ಇದೇ ತಿಂಗಳು 6ರಂದು ಬಿಡುಗಡೆಗೊಳಿಸಬೇಕಿದ್ದ ಅಲ್ಕಾಜರ್ ಕಾರು ಮಾದರಿಯ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದು, ಜೂನ್ ಕೊನೆಯಲ್ಲಿ ಹೊಸ ಕಾರು ಗ್ರಾಹಕರ ಕೈಸೇರುವ ನೀರಿಕ್ಷೆಯಿದೆ.

ಕೋವಿಡ್ ಪರಿಣಾಮ ಸದ್ಯಕ್ಕೆ ಬಿಡುಗಡೆ ಮುಂದೂಡಿಕೆ ಮಾಡಲಾಗಿದ್ದರೂ ಕಂಪನಿಯು ಹೊಸ ಕಾರಿನ ಕಾರ್ಯಕ್ಷಮತೆಯ ಕುರಿತು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಂದುವರಿಸಿದ್ದು, ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ನಿರ್ಮಾಣವಾಗಿರುವ ಹೊಸ ಅಲ್ಕಾಜರ್ ಕಾರು ಮಾದರಿಯು ಸೆಗ್ಮೆಂಟ್ ಫಸ್ಟ್ ಫೀಚರ್ಸ್ ಹೊಂದಿವೆ.

ಅಲ್ಕಾಜರ್ ಕಾರು ಕ್ರೆಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರಾಟಗೊಳ್ಳಲಿದ್ದು, ವಿಸ್ತರಿತ ಕ್ಯಾಬಿನ್ ಮೂಲಕ ಮೂರು ಸಾಲಿನ ಆಸನಗಳೊಂದಿಗೆ 7 ಸೀಟರ್ ಸೌಲಭ್ಯವನ್ನು ಅಚ್ಚುಕಟ್ಟಾದ ಜೋಡಣೆ ಹೊಂದಿದೆ.

ಹೈ ಎಂಡ್ ಮಾದರಿಯಾಗಿ 6 ಸೀಟರ್ ಆವೃತ್ತಿಯು ಮಾರಾಟಗೊಳ್ಳಲಿದ್ದು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ನೊಂದಿಗೆ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಅಲ್ಕಾಜರ್ ಕಾರಿನ 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿದ್ದು, ಹಿಂಬದಿಯ ಸವಾರರಿಗೂ ಆರಾಮದಾಯಕ ಪ್ರಯಾಣಕ್ಕಾಗಿ ಹೆಡ್‌ರೆಸ್ಟ್, ಸೈಡ್ ಬಾಟಲ್ ಹೋಲ್ಡರ್ ಸೌಲಭ್ಯಗಳನ್ನು ನೀಡಲಾಗಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಅಲ್ಕಾಜರ್ ಕಾರು ಕ್ರೆಟಾ 5 ಸೀಟರ್ ಕಾರು ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಇತ್ತೀಚೆಗೆ ಪ್ರಮುಖ ಕಾರು ಕಂಪನಿಗಳು 5 ಸೀಟರ್ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ 5 ಸೀಟರ್ ಜೊತೆಗೆ 7 ಸೀಟರ್ ಮಾದರಿಯನ್ನು ಪರಿಚಯಿಸುತ್ತಿರುವ ಅಲ್ಕಾಜರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.

ಹ್ಯುಂಡೈ ಕಂಪನಿಯು ಹೊಸ ಅಲ್ಕಾಜರ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೈ ಎಂಡ್ ಮಾದರಿಗಳಲ್ಲಿ 2.0-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಎಂಜಿನ್ ಜೋಡಣೆ ಮಾಡಲಾಗಿದ್ದು, 2.0-ಲೀಟರ್ ಎಂಜಿನ್ ಮಾದರಿಯನ್ನು ಟ್ಯುಸಾನ್ ಮತ್ತು ಎಲಾಂಟ್ರಾ ಮಾದರಿಗಳಲ್ಲಿ ಬಳಕೆ ಮಾಡಲಾಗುತ್ತಿದೆ.
MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೊಸ ಅಲ್ಕಾಜರ್ ಕಾರು ಕ್ರೆಟಾ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಆಯ್ಕೆಯೊಂದಿಗೆ ಫುಲ್ ಸೈಜ್ ಕಾರು ಖರೀದಿದಾರರನ್ನು ಸೆಳೆಯಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14 ಲಕ್ಷದಿಂದ ರೂ.19 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.


Click it and Unblock the Notifications








