ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಬಹುನೀರಿಕ್ಷಿತ ಕಿಯಾ ಕೆರೆನ್ಸ್(Kia Carens) ಎಂಪಿವಿ ಕಾರು ಮಾದರಿಯು ಭಾರತದಲ್ಲಿ ಇದೇ ತಿಂಗಳು 16ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳಿಸುತ್ತಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ವಿವಿಧ ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಕಿಯಾ ಇಂಡಿಯಾ ಕಂಪನಿಯು ಹೊಸ ಕೆರೆನ್ಸ್(Carens) ಎಂಪಿವಿ ಆವೃತ್ತಿಯ ಉತ್ಪಾದನಾ ಮಾದರಿಯ ರೇಖಾಚಿತ್ರಗಳನ್ನು ಈಗಾಗಲೇ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಹೊಸ ಕಾರಿನ ಉತ್ಪಾದನಾ ಮಾದರಿಯು ಅನಾವರಣಗೊಂಡ ನಂತರ ಮುಂಬರುವ ಜನವರಿ ಮಧ್ಯಂತರದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಹೊಸ ಕೆರೆನ್ಸ್ ಕಾರು ಮಾದರಿಯನ್ನು ಕಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಕೈಪಿಡಿಯಲ್ಲಿ L, LX, EX, EX +, TX ಮತ್ತು TX + ವೆರಿಯೆಂಟ್‌ಗಳ ಮಾಹಿತಿಯು ಸೋರಿಕೆಯಾಗಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಹೊಸ ಕಾರಿನ ಎಲ್ ರೂಪಾಂತರದಲ್ಲಿ ಮತ್ತು HTP / HTM ಮಾದರಿಗಳನ್ನು ಹೊಂದಿರಲಿದ್ದರೆ ಎಲ್ಎಕ್ಸ್ ನಲ್ಲಿ ಪ್ರೀಮಿಯಂ ಮಾದರಿಯನ್ನ ಮತ್ತು ಇಎಕ್ಸ್ ಮಾದರಿಯಲ್ಲಿ ಪ್ರೆಸ್ಟೀಜ್ ಅನ್ನು ಹೊಂದಿರುತ್ತದೆ. ಇಎಕ್ಸ್ ಪ್ಲಸ್ ಮಾದರಿಯಲ್ಲಿ ಪ್ರೆಸ್ಟೀಜ್ + ಅನ್ನು ಹೊಂದಿರಲಿದ್ದು, ಟಿಎಕ್ಸ್ ಮಾದರಿಯು ಲಗ್ಷುರಿ ಮತ್ತು ಟಾಪ್-ಎಂಡ್ ಟಿಎಕ್ಸ್ ಪ್ಲಸ್ ರೂಪಾಂತರವು ಲಗ್ಷುರಿ ಪ್ಲಸ್ ಅನ್ನು ಹೊಂದಿರುತ್ತದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಐಷಾರಾಮಿ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿರಲಿದೆ ಎಂದಿರುವ ಕಿಯಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರನ್ನು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳವ ನೀರಿಕ್ಷೆಯಲ್ಲಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಬೆಲೆಯಲ್ಲಿ ಎರ್ಟಿಗಾ ಕಾರಿಗಿಂತಲೂ ತುಸು ದುಬಾರಿಯಾದರೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳಲಿದ್ದು, ಹೊಸ ಕಾರು ಸೆಲ್ಟೊಸ್ ಮಾದರಿಯಲ್ಲಿ ಎಂಜಿನ್ ಆಯ್ಕೆ ಹೊಂದಿರಲಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಮಾಹಿತಿಗಳ ಪ್ರಕಾರ ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದ್ದು, ಮ್ಯಾನುವಲ್, ಆಟೋಮ್ಯಾಟಿಕ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಬಿಡುಗಡೆಯಾಗಬಹುದಾಗಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಕಿಯಾ ಕಂಪನಿಯು ಹೊಸ ಕಾರನ್ನು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಸದ್ಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ಕಾರಿನ ಬೆಲೆ ಇಳಿಕೆಗಾಗಿ ಸೆಲ್ಟೊಸ್ ಪ್ಲ್ಯಾಟ್‌ಫಾರ್ಮ್ ಮಾದರಿಯನ್ನು ಆಧರಿಸಿ ಹೊಸ ಎಂಪಿವಿ ಕಾರನ್ನು ಉತ್ಪಾದಿಸಲಾಗುತ್ತಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಮಧ್ಯಮ ಗಾತ್ರದ ಎಂಪಿವಿ ಕಾರು ಮಾದರಿಯ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಅಧಿಕ ಬೇಡಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎರ್ಟಿಗಾ ಮಾದರಿಯಷ್ಟೇ ಬೇಡಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಆದರೆ ಎರ್ಟಿಗಾ ಕಾರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಬೆಲೆ ಅಂತರವು ಸಾಕಷ್ಟಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಹೀಗಾಗಿ ಈ ಎರಡು ಕಾರುಗಳ ನಡುವಿನ ಸ್ಥಾನದಲ್ಲಿದ್ದ ಮಹೀಂದ್ರಾ ಮರಾಜೋ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವಲ್ಲಿ ವಿಫಲವಾಗುತ್ತಿದ್ದು, ಇನೋವಾ ಮತ್ತು ಎರ್ಟಿಗಾ ನಡುವಿನ ಸ್ಥಾನವನ್ನು ತುಂಬಲು ಕಿಯಾ ಕಂಪನಿಯು ಹೊಸ ಎಂಪಿವಿ ಕಾರು ಉತ್ಪನ್ನವನ್ನು ಸಿದ್ದಪಡಿಸುತ್ತಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಯೋಜನೆಯೆಂತೆ ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಬೇಕಿದ್ದ ಹೊಸ ಕಾರನ್ನು ಕೋವಿಡ್ ಕಾರಣಕ್ಕೆ 2022ಕ್ಕೆ ಮುಂದೂಡಿಕೆ ಮಾಡಿರುವ ಕಿಯಾ ಕಂಪನಿಯು ಹೊಸ ಕಾರಿನ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಮಾರುತಿ ಎರ್ಟಿಗಾ ಕಾರಿಗೆ ಉತ್ತಮ ಪೈಪೋಟಿ ನೀಡಲಿದೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಸದ್ಯ ಆಟೋ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಉಳಿದ ಕಾರು ಮಾದರಿಗಳಿಂತಲೂ ಹೆಚ್ಚು ಬೇಡಿಕೆಯಲ್ಲಿದ್ದು, ತದನಂತರ ಎಸ್‌ಯುವಿ ಮತ್ತು ಎಂಪಿವಿ ಕಾರುಗಳು ಸಹ ಹೆಚ್ಚಿನ ಮಟ್ಟದ ಬೇಡಿಕೆಯಲ್ಲಿರುವ ಕಾರು ಮಾದರಿಗಳಾಗಿವೆ.

ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕೆರೆನ್ಸ್ ಎಂಪಿವಿ

ಆದರೆ ಎಂಪಿವಿ ಮಾದರಿಗಳಲ್ಲಿ ಕೆಲವು ಮಾದರಿಗಳಿರುವುದರಿಂದ ಪ್ರತಿಸ್ಪರ್ಧಿ ಕಡಿಮೆಯಿದ್ದು, ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ. ಇದೇ ಕಾರಣಕ್ಕೆ ಮಧ್ಯಮ ಗಾತ್ರದ ಎಂಪಿವಿ ವಿಭಾಗಕ್ಕೆ ಪ್ರವೇಶಿಸಲು ಸಿದ್ದವಾಗಿರುವ ಕಿಯಾ ಕಂಪನಿಯು ಹೊಸ ಮಾದರಿಯ ಎಂಪಿವಿ ಮಾದರಿಯೊಂದನ್ನು ಅಭಿವೃದ್ದಿಗೊಳಿಸಿದೆ.

More from DriveSpark

Article Published On: Tuesday, December 14, 2021, 20:14 [IST]
English summary
All new kia carens mpv variant details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+