Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಎಂಜಿ ಮೋಟಾರ್(MG Motor) ಕಂಪನಿಯು ಮುಂಬರುವ ದಸರಾ-ದೀಪಾವಳಿ ವೇಳೆಗೆ ತನ್ನ ಹೊಸ ಆಸ್ಟರ್(Astor) ಎಸ್‌ಯುವಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಹೊಸ ಆಸ್ಟರ್ ಕಾರಿನಲ್ಲಿರುವ ಫೀಚರ್ಸ್‌ಗಳ ಕುರಿತಾಗಿ ಎಂಜಿ ಮೋಟಾರ್ ಕಂಪನಿಯು ಹೊಸ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರಿನಲ್ಲಿ ಮ್ಯೂಸಿಕ್ ಸೌಲಭ್ಯಕ್ಕಾಗಿ ಇನ್‌ಬಿಲ್ಟ್ ಜಿಯೋ ಸಾವ್ನ್ ಆ್ಯಪ್ ಜೋಡಣೆ ಮಾಡಿದೆ. ಲೈವ್ ಸ್ಟಿಮ್ ಸೌಲಭ್ಯ ಹೊಂದಿರುವ ಜಿಯೋ ಸಾವ್ನ್ ಆ್ಯಪ್ ಮೂಲಕ ಕಾರು ಚಾಲನೆ ವೇಳೆ ಮ್ಯೂಸಿಕ್ ಕೇಳುವುದಲ್ಲದೆ ಸಹ ಪ್ರಯಾಣಿಕರುವ ವಿಡಿಯೋ ಕೂಡಾ ವೀಕ್ಷಿಸಬಹುದಾಗಿದ್ದು, ಆನ್ ಲೈನ್ ಮತ್ತು ಆಪ್ ಲೈನ್ ಎರಡರಲ್ಲೂ ಕೂಡಾ ಲೈವ್ ಮ್ಯೂಸಿಕ್ ಆಲಿಸಬಹುದಾಗಿದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಜೊತೆಗೆ ಹೊಸ ಕಾರಿನಲ್ಲಿ ಎಂಜಿ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಆಸ್ಟರ್ ಕಾರಿನಲ್ಲಿರುವ ಹೊಸ ಬಗೆಯ ತಾಂತ್ರಿಕ ಮಾಹಿತಿಗಳು ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಹೊಸ ಕಾರು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಕ್ರೆಟಾ(Hyundai Creta) ಕಿಯಾ ಸೆಲ್ಟೊಸ್(Kia Seltos) ಸ್ಕೋಡಾ ಕುಶಾಕ್(Skoda Kushaq) ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ಪ್ರತಿ ಸ್ಪರ್ಧಿ ಕಾರು ಮಾದರಿಗಳ ಬೆಲೆಯಲ್ಲಿಯೇ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯನ್ನು ಪಡೆದುಕೊಂಡಿರಲಿದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಸಾಮಾನ್ಯವಾಗಿ ಯಾವುದೇ ಒಂದು ಕಾರಿನ ಮಧ್ಯಮ ಕ್ರಮಾಂಕದ ಕಾರಿನ ಆರಂಭಿಕ ಬೆಲೆಯು ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯು ಆರಂಭಿಕ ಮಾದರಿಯ ಬೆಲೆಗಿಂತಲೂ ಹೆಚ್ಚು ದುಬಾರಿಯಾಗಿರುವುದಲ್ಲದೆ ಬೆಲೆ ಕಾರಣಕ್ಕಾಗಿ ಆರಂಭಿಕ ಮಾದರಿಯಲ್ಲಿ ಹಲವಾರು ಫೀಚರ್ಸ್‌ಗಳನ್ನು ಕೈಬಿಡಲಾಗುತ್ತದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಕೆಲವೇ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಆರಂಭಿಕ ಆವೃತ್ತಿಗೂ ಟಾಪ್ ಎಂಡ್ ಆವೃತ್ತಿಯಲ್ಲಿನ ತಾಂತ್ರಿಕ ಅಂಶಗಳಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಆದರೆ ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಕಾರಿನ ಆರಂಭಿಕ ಆವೃತ್ತಿಗಳಲ್ಲಿಯೇ ಪ್ರತಿಸ್ಪರ್ಧಿ ಕಾರುಗಳ ಮಧ್ಯಮ ಕ್ರಮಾಂಕದಲ್ಲಿನ ಆವೃತ್ತಿಗಳ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಇತ್ತೀಚೆಗೆ ಕಂಪನಿಯು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಕಂಪನಿಯು ಆರಂಭಿಕ ಮಾದರಿಯಲ್ಲೂ ಕೂಡಾ ಸ್ಟ್ಯಾಂಡರ್ಡ್ ಆಗಿ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಸೌಲಭ್ಯವನ್ನು ಜೋಡಣೆ ಮಾಡಿರುವ ಬಗೆಗೆ ಮಾಹಿತಿ ನೀಡಿತ್ತು.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಇದರೊಂದಿಗೆ ಹೊಸ ಕಾರಿನಲ್ಲಿ ಕಂಪನಿಯು ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಅಳವಡಿಸಿದ್ದು, ಆಸ್ಟರ್ ಕಾರು ಕೃತಕ ಬುದ್ಧಿಮತ್ತೆ ಹೊಂದಿರುವ ಭಾರತದ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಹಾಗೆಯೇ ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್, ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದ್ದು, 4ಜಿ ಇಂಟರ್‌ನೆಟ್ ಸೌಲಭ್ಯದೊಂದಿಗೆ ಹಲವಾರು ಆಟೋಮೋಟಿವ್ ಸಂಬಂಧಿತ ಗ್ರಾಹಕರ ಸೇವೆಗಳನ್ನು ಸುಲಭವಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಳ್ಳಬಹುದಾಗಿದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ತಾಂತ್ರಿಕ ಅಂಶಗಳ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವುದರ ಜೊತೆ ವಾಯ್ಸ್ ಅಸಿಸ್ಟ್ ಮೂಲಕ ಕಾರು ಚಾಲನೆಯನ್ನು ಸರಳಗೊಳಿಸುತ್ತದೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಕಾರು ಚಾಲನೆ ವೇಳೆ ರಸ್ತೆಗುಂಡಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಎಡಿಎಎಸ್ ತಂತ್ರಜ್ಞಾನದಲ್ಲಿ ರಡಾರ್ ಸೌಲಭ್ಯವಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಸ್ತೆಗುಂಡಿಯಿಂದಾಗುವ ಅಪಾಯವನ್ನು ತಡೆಯಬಲ್ಲದು.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಅಪಾಯದ ಮುನ್ಸೂಚನೆಯನ್ನು ಅರಿಯಲು ಚಾಲಕನಿಗೆ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡುವ ಎಡಿಎಎಸ್ ಸೌಲಭ್ಯವು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದ್ದು, ಜೊತೆಗೆ 10-ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪ್ಲ್ಯಾಟ್-ಬಾಟಮ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಹಿಂಬದಿಯ ಪ್ರಯಾಣಿಕರಿಗೆ ಅರಾಮದಾಯಕವಾದ ಆಸನ ಸೌಲಭ್ಯಗಳಿವೆ.

Astor ಎಸ್‌ಯುವಿಯಲ್ಲಿ ಜಿಯೋ ಸಾವ್ನ್ ಲೈವ್ ಮ್ಯೂಜಿಕ್ ಆ್ಯಪ್ ಅಳವಡಿಸಿಕೊಂಡ MG Motor

ಇನ್ನು ಹೊಸ ಆಸ್ಟರ್ ಕಾರಿನಲ್ಲಿ ಕಂಪನಿಯು 1.5-ಲೀಟರ್ ಪೆಟ್ರೋಲ್ ಆವೃತ್ತಿಯನ್ನು ಮತ್ತು ಪರ್ಫಾಮೆನ್ಸ್ ಮಾದರಿಯಾಗಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

Article Published On: Monday, September 13, 2021, 13:57 [IST]
English summary
All new mg astor suv to get jiosaavn app for music streaming
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+