ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಅಮೆಜಾನ್ ಕಂಪನಿಯು ಕಳೆದ ವರ್ಷ 2025ರ ವೇಳೆಗೆ 10,000 ಎಲೆಕ್ಟ್ರಿಕ್ ವಾಹನಗಳನ್ನು ತನ್ನ ಡೆಲಿವರಿ ಫ್ಲೀಟ್‌ಗೆ ಸೇರಿಸಿಕೊಳ್ಳುವುದಾಗಿ ತಿಳಿಸಿತ್ತು. ಈಗ ಕಂಪನಿಯು ಮಹೀಂದ್ರಾ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದೆ.

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಅಮೆಜಾನ್ ತನ್ನ ಡೆಲಿವರಿ ಫ್ಲೀಟ್‌ಗೆ ಸುಮಾರು 100 ಮಹೀಂದ್ರಾ ಟ್ರಿಯೋ ಜೋರ್ ಇವಿಗಳನ್ನು ಸೇರ್ಪಡೆಗೊಳಿಸಿದ್ದು 7 ನಗರಗಳಲ್ಲಿ ಬಳಸುತ್ತಿದೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸಿಕೊಳ್ಳುವುದರ ಮೂಲಕ 2030ರಲ್ಲಿ ವಿಶ್ವಾದ್ಯಂತ 100,000 ಎಲೆಕ್ಟ್ರಿಕ್ ವಾಹನಗಳನ್ನು ತನ್ನ ಡೆಲಿವರಿ ಫ್ಲೀಟ್‌ಗೆ ಸೇರಿಸಿಕೊಳ್ಳುವುದಾಗಿ ಅಮೆಜಾನ್ ಹವಾಮಾನ ಸಂಬಂಧಿತ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದಲ್ಲಿ ಇ-ಮೊಬಿಲಿಟಿ ಉದ್ಯಮದ ಯಶಸ್ಸಿಗೆ ಮಹೀಂದ್ರಾ ಎಲೆಕ್ಟ್ರಿಕ್ ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿದೆ.

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಮಹೀಂದ್ರಾ ಟ್ರಿಯೊ ಜೋರ್ ಇವಿಗಳನ್ನು ಸದ್ಯಕ್ಕೆ ಬೆಂಗಳೂರು, ನವದೆಹಲಿ, ಹೈದರಾಬಾದ್, ಅಹಮದಾಬಾದ್, ಭೋಪಾಲ್, ಲಕ್ನೋ ಹಾಗೂ ಇಂದೋರ್ ನಗರಗಳಲ್ಲಿ ವಿತರಣೆಗಾಗಿ ಬಳಸಲಾಗುತ್ತಿದೆ. ದೇಶದ ಎಲೆಕ್ಟ್ರಿಕ್ ವಾಹನ ಉದ್ಯಮವು ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಮೋಟಾರ್ ಹಾಗೂ ಬ್ಯಾಟರಿ ಉಪಕರಣ ಸೇರಿದಂತೆ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಗೋ ಎಲೆಕ್ಟ್ರಿಕ್'ನಂತಹ ಅಭಿಯಾನಗಳ ಜೊತೆಗೆ ಫೇಮ್ -2 ಯೋಜನೆಯಡಿ ಚಾರ್ಜಿಂಗ್ ಸ್ಟೇಷನ್'ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಮೆಜಾನ್ ತನ್ನ ಡೆಲಿವರಿ ಫ್ಲೀಟ್‌ನಲ್ಲಿ ಈ ಎಲೆಕ್ಟ್ರಿಕ್ ವಾಹನವನ್ನು ಸೇರಿಸುವುದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಹುರುಪು ಸಿಗಲಿದೆ.

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ನಿತಿನ್ ಗಡ್ಕರಿ, ಅಮೆಜಾನ್ ಇಂಡಿಯಾ ಹಾಗೂ ಮಹೀಂದ್ರಾ ಎಲೆಕ್ಟ್ರಿಕ್ ನಡುವಿನ ಸಹಭಾಗಿತ್ವವು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಇ-ಮೊಬಿಲಿಟಿ ಉದ್ಯಮ ಹಾಗೂ ವಾಹನ ತಯಾರಕ ಕಂಪನಿಗಳು ಪರಿಸರ ಸ್ನೇಹಿಯಾಗುವ ನಿಟ್ಟಿನಲ್ಲಿ ಬೆಳವಣಿಗೆ ಸಾಧಿಸುತ್ತಿವೆ ಎಂದು ಹೇಳಿದರು. ಮಹೀಂದ್ರಾ ಟ್ರಿಯೊ ಜೋರ್ ಇವಿಯನ್ನು 2020ರ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಈ ಇವಿಯ ಬೆಲೆ ರೂ.2.73 ಲಕ್ಷಗಳಾಗಿದೆ. ಮಹೀಂದ್ರಾ ಟ್ರಿಯೊ ಜೋರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 125 ಕಿ.ಮೀಗಳವರೆಗೆ ಚಲಿಸುತ್ತದೆ. ಈ ವಾಹನದಲ್ಲಿರುವ ಎಲೆಕ್ಟ್ರಿಕ್ ಮೋಟರ್ 8 ಕಿ.ವ್ಯಾ ಪವರ್ ಹಾಗೂ 42 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ವಾಹನವು 550 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ, ಟರ್ನ್‌ರೌಂಡ್ ಸಮಯವನ್ನು ವೇಗಗೊಳಿಸಲು ಬೂಸ್ಟ್ ಮೋಡ್ ನೀಡಲಾಗಿರುವುದರಿಂದ ಟರ್ನ್‌ರೌಂಡ್ ಸಮಯವು ಇನ್ನಷ್ಟು ಉತ್ತಮವಾಗುತ್ತದೆ.

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಸಮತೋಲಿತ ಸವಾರಿಯನ್ನು ಒದಗಿಸಲು ಸುರಕ್ಷತೆಗಾಗಿ ಮಹೀಂದ್ರಾ ಟ್ರಿಯೋದಲ್ಲಿ 2216 ಎಂಎಂ ವ್ಹೀಲ್‌ಬೇಸ್ ಅಳವಡಿಸಲಾಗಿದೆ. ಭಾರತದ ರಸ್ತೆಗಳಿಗೆ ಹೊಂದಿಕೊಳ್ಳಲು ಈ ವಾಹನದಲ್ಲಿ ಸೆಗ್'ಮೆಂಟಿನಲ್ಲಿಯೇ ದೊಡ್ಡದಾದ 30.48 ಸೆಂ.ಮೀ ಟಯರ್‌ಗಳನ್ನು ಅಳವಡಿಸಲಾಗಿದೆ. ಮಹೀಂದ್ರಾ ಟ್ರಿಯೊ ಸುಧಾರಿತ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ.ಈ ಬ್ಯಾಟರಿ ಬಾಳಿಕೆ 1.50 ಲಕ್ಷ ಕಿ.ಮೀಗಳೆಂದು ಕಂಪನಿ ಹೇಳಿಕೊಂಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಡೆಲಿವರಿ ಸೇವೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಿದೆ ಅಮೆಜಾನ್

ಮಹೀಂದ್ರಾ ಟ್ರಿಯೊ ಇವಿಯನ್ನು 15 ಆಂಪಿಯರ್ ಸಾಕೆಟ್‌ನೊಂದಿಗೆ ಚಾರ್ಜ್ ಮಾಡಬಹುದು. ಮಹೀಂದ್ರಾ ಟ್ರಿಯೊ ಸ್ವಯಂಚಾಲಿತ ಗೇರ್‌ಬಾಕ್ಸ್ ಹೊಂದಿದೆ.ಮಹೀಂದ್ರಾ ಟ್ರಿಯೊ ಟೆಲಿಮ್ಯಾಟಿಕ್ ಯುನಿಟ್, ಜಿಪಿಎಸ್, ಡ್ರೈವಿಂಗ್ ಮೋಡ್, ಎಕಾನಮಿ ಹಾಗೂ ಬೂಸ್ಟ್ ಮೋಡ್, 12 ವೋಲ್ಟ್ ಸಾಕೆಟ್, ರಿವರ್ಸ್ ಬಝರ್ ಹಾಗೂ ಹಜಾರ್ಡ್ ಇಂಡಿಕೇಟರ್'ಗಳನ್ನು ಹೊಂದಿದೆ.

Most Read Articles

Kannada
English summary
Amazon added around hundred Mahindra Treo Zor EVs to its delivery fleet. Read in Kannada.
Story first published: Tuesday, February 23, 2021, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X