ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಅಕಿರಾ ಯೋಶಿನೋ ನೊಬೆಲ್ ಪ್ರಶಸ್ತಿ ವಿಜೇತರು. ಇವರು ಈಗ ಎಲೆಕ್ಟ್ರಿಕ್ ಕಾರುಗಳಲ್ಲಿ ಅಳವಡಿಸಲಾಗಿರುವ ಲಿಥಿಯಂ ಐಯಾನ್ ಬ್ಯಾಟರಿಗಳ ಪ್ರವರ್ತಕರು ಹೌದು. ಅಕಿರಾ ಯೋಶಿನೋ, 2021 ರ ಅಂತ್ಯದ ವೇಳೆಗೆ Apple ಕಂಪನಿಯು ಆಟೋ ಮೊಬೈಲ್ ಉದ್ಯಮಕ್ಕೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಅಕಿರಾ ಯೋಶಿನೋ 2019 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಅವರು ಜಪಾನಿನ ರಾಸಾಯನಿಕ ಕಂಪನಿ ಅಸೋಹಿ ಕೇಸಿಯ ಗೌರವ ಸದಸ್ಯರಾಗಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಕುರಿತು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಕಿರಾ ಯೋಶಿನೋ ಹಲವು ಐಟಿ ಕಂಪನಿಗಳು ಆಟೋ ಮೊಬೈಲ್ ಉದ್ಯಮವನ್ನು ಪ್ರವೇಶಿಸಲು ತಯಾರಿ ನಡೆಸುತ್ತಿವೆ ಎಂದು ಹೇಳಿದರು.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಅಂತಹ ಕಂಪನಿಗಳಲ್ಲಿ Apple ಕಂಪನಿಯು ಸಹ ಒಂದು ಎಂದು ಅಕಿರಾ ಯೋಶಿನೋ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು Apple ಕಂಪನಿ ಏನು ಮಾಡಲಿದೆ ಎಂಬುದರ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆಗಳಿವೆ. ಕಂಪನಿಯು ಯಾವ ರೀತಿಯ ಕಾರ್ ಅನ್ನು ಬಿಡುಗಡೆಗೊಳಿಸಲಿದೆ, ಎಲೆಕ್ಟ್ರಿಕ್ ಕಾರ್ ಆದರೆ ಯಾವ ರೀತಿಯ ಬ್ಯಾಟರಿ ಅಳವಡಿಸಲಿದೆ ಎಂಬ ಮಾಹಿತಿಗಳು ಶೀಘ್ರದಲ್ಲಿಯೇ ಲಭ್ಯವಾಗಲಿವೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಒಂದು ವೇಳೆ Apple ಕಂಪನಿಯು ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡುವುದಾದರೆ ಆ ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ ಯಾವುದಾದರೂ ಮಾಹಿತಿ ನೀಡಲಿದೆ ಎಂದು ಅಕಿರಾ ಯೋಶಿನೋ ಹೇಳಿದರು. 2014 ರಿಂದ Apple ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. Apple ಕಂಪನಿಯು ಟೈಟಾನ್ ಯೋಜನೆಯ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

Apple ಕಂಪನಿಯು ಹೊಸ ಕಾರಿಗೆ ಸಂಬಂಧಿಸಿದ ಕೆಲಸಗಳನ್ನು ಕೈಗೊಂಡಿದೆ. Apple ಕಂಪನಿಯು ಹೆಚ್ಚು ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳಾಗಿದೆ. Apple ಕಂಪನಿಯು ಕಾರನ್ನು ತಯಾರಿಸಲು ಕೆಲವು ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

Apple ಕಂಪನಿಯು Hyundai ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿರುವ ಸಾಧ್ಯತೆಗಳಿವೆ. Apple ಕಂಪನಿಯು Hyundai ಕಂಪನಿಯ ಇ ಜಿಎಂಪಿ ಪ್ಲಾಟ್‌ಫಾರಂ ಅನ್ನು ಇಷ್ಟ ಪಟ್ಟಿದೆ. Hyundai ಕಂಪನಿಯು ಈ ಪ್ಲಾಟ್ ಫಾರಂ ಅನ್ನು ಕ್ಯಾಲಿಫೋರ್ನಿಯಾದ ಎಲೆಕ್ಟ್ರಿಕ್ ಕಾರ್ ಸ್ಟಾರ್ಟ್ ಅಪ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಕ್ಯಾನೂ ಎಂಬ ಹೆಸರಿನ ಈ ಸ್ಟಾರ್ಟ್ ಅಪ್ ಕಂಪನಿಯನ್ನು Apple ಕಂಪನಿಯು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಆದರೆ Apple ಕಂಪನಿಯು BMW ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ಯಾನೂ ಕಂಪನಿಯ ಸಹ ಸಂಸ್ಥಾಪಕರನ್ನು ನೇಮಿಸಿ ಕೊಂಡಿತು. ಇದರ ಜೊತೆಗೆ Porsche ಹಾಗೂ Tesla ಕಂಪನಿಯ ಮಾಜಿ ಉದ್ಯೋಗಿಗಳು Apple ಕಂಪನಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದಾರೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಇದರ ಜೊತೆಗೆ Apple ಕಂಪನಿಯು ತನ್ನ ಕಾರು ಉತ್ಪಾದನಾ ವ್ಯವಹಾರಕ್ಕೆ Apple ವಾಚ್ ನ ಅಧ್ಯಕ್ಷರಾದ ಕೆವಿನ್ ಲಿಂಚ್ ರವರನ್ನು ಸೇರಿಸಿಕೊಂಡಿದೆ. ಕೆವಿನ್ ಲಿಂಚ್ ಈ ಹಿಂದೆ Apple ಕಾರು ಉತ್ಪಾದನಾ ಯೋಜನೆಗಾಗಿ ಅಡೋಬ್ ನಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದರು. ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ ಪ್ರಕಾರ, Apple ಕಾರು 2024 - 2025 ರಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

Apple ಕಂಪನಿಯ ಮೊದಲ ಕಾರು ಎಲೆಕ್ಟ್ರಿಕ್ ಆಗಿರಲಿದೆ. ಇದರಿಂದ ಭವಿಷ್ಯದಲ್ಲಿ Apple ಕಂಪನಿಯ ಕಾರುಗಳು Tesla ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಇದರ ಜೊತೆಗೆ ಅಕಿರಾ ಯೋಶಿನೋ ರವರು ವೈರ್‌ಲೆಸ್ ಚಾರ್ಜಿಂಗ್‌ಗಳ ನಾವೀನ್ಯತೆ ಹಾಗೂ ಕಾರು ಬ್ಯಾಟರಿ ತಂತ್ರಜ್ಞಾನಗಳ ಬಗ್ಗೆಯೂ ಮಾತನಾಡಿದ್ದಾರೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ವೈರ್‌ಲೆಸ್ ಚಾರ್ಜಿಂಗ್ ಸಾಧ್ಯ ಎಂದು ಅವರು ಹೇಳಿದ್ದಾರೆ. ಇವುಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಹಾಗೂ ರಸ್ತೆಯಲ್ಲಿಯೂ ಕಾಣಬಹುದು ಎಂಬುದು ಅವರ ಅಭಿಪ್ರಾಯ. ಅಕಿರಾ ಯೋಶಿನೋ ಆಟೋಮ್ಯಾಟಿಕ್ ಕಾರುಗಳ ಮೇಲೆ ಹೆಚ್ಚಿನ ನಂಬಿಕೆಯನ್ನು ಹೊಂದಿದ್ದಾರೆ. ಆಟೋಮ್ಯಾಟಿಕ್ ಕಾರುಗಳನ್ನು ಪರಿಚಯಿಸಿದರೆ, ಅವು ಜನಸಾಮಾನ್ಯರ ವಾಹನ ಬಳಕೆಯಲ್ಲಿ ಭಾರೀ ಬದಲಾವಣೆಯನ್ನು ತರುತ್ತವೆ ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

2030 - 2050 ರ ನಡುವೆ, ಆಟೋಮ್ಯಾಟಿಕ್ ಕಾರುಗಳ ಮೂಲಕ ಇಂಧನ ಮರುಬಳಕೆ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ದುಂದು ವೆಚ್ಚ ಹಾಗೂ ತಂತ್ರಜ್ಞಾನದಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಆಟೋ ಮೊಬೈಲ್ ಉದ್ಯಮಕ್ಕೆ ಕಾಲಿಡಲಿದೆ ಖ್ಯಾತ ಮೊಬೈಲ್ ತಯಾರಕ ಕಂಪನಿ

ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ಕಂಪನಿಗಳು ಮಾತ್ರವಲ್ಲದೇ ಖ್ಯಾತ ಎಲೆಕ್ಟ್ರಾನಿಕ್ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾಗುತ್ತಿವೆ. ಚೀನಾ ಮೂಲದ ಖ್ಯಾತ ಮೊಬೈಲ್ ತಯಾರಕ ಕಂಪನಿಯಾದ ಶಿಯೋಮಿ ಸಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿದೆ. ಭಾರತದಲ್ಲಿಯೂ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

Most Read Articles

Kannada
English summary
Apple company to introduce electric car soon says akira yoshino details
Story first published: Saturday, August 28, 2021, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X