ಶೀಘ್ರದಲ್ಲಿಯೇ ಶುರುವಾಗಲಿದೆ ಏಷ್ಯಾದ ಅತಿ ಉದ್ದದ ವೈಲ್ಡ್ ಲೈಫ್ ಕಾರಿಡಾರ್ ಕಾಮಗಾರಿ
ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಕಾಮಗಾರಿಯು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಎರಡೂ ನಗರಗಳ ಅಂತರವು 235 ಕಿ.ಮೀಗಳಿಂದ 210 ಕಿ.ಮೀಗಳಿಗೆ ಇಳಿಕೆಯಾಗುತ್ತದೆ.

ಈ ಅಂತರವನ್ನು 6.5 ಗಂಟೆಗಳ ಬದಲು 2.5 ಗಂಟೆಗಳಲ್ಲಿ ಕ್ರಮಿಸಬಹುದು. ವನ್ಯಜೀವಿ ಸಂರಕ್ಷಣೆಗಾಗಿ 12 ಕಿ.ಮೀ ಉದ್ದದ ಎತ್ತರದ ಕಾರಿಡಾರ್ ನಿರ್ಮಿಸುವ ದೇಶದ ಮೊದಲ ಹೆದ್ದಾರಿ ಇದಾಗಿದೆ. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯ ಅಂದಾಜು ವೆಚ್ಚ ರೂ.13,000 ಕೋಟಿಗಳಾಗಿದೆ. ಈ ಎಕ್ಸ್‌ಪ್ರೆಸ್‌ವೇ ಈಶಾನ್ಯ ದೆಹಲಿ, ಗಾಜಿಯಾಬಾದ್, ಬಾಗಪತ್, ಶಾಮ್ಲಿ, ಮುಜಫರ್ ನಗರ,ಸಹರಾನ್‌ಪುರ ಮತ್ತು ಡೆಹ್ರಾಡೂನ್ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

ಈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವು ಅಕ್ಷರ್ ಧಾಮ್ ದೇವಾಲಯದ ಬಳಿಯ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಿಂದ ಆರಂಭವಾಗಲಿದ್ದು, ಪಾಸ್ ಬಾಗಪತ್ ಬಳಿಯ ಇಪಿಇ ಜಂಕ್ಷನ್‌ನಿಂದ ಕೊನೆಗೊಳ್ಳುತ್ತದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೊದಲ ಹಂತದಲ್ಲಿ 32 ಕಿ.ಮೀ ದೂರದಲ್ಲಿ 18 ಕಿ.ಮೀ ಎತ್ತರದ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಎಕ್ಸ್‌ಪ್ರೆಸ್‌ವೇಯಲ್ಲಿ 6 ಲೇನ್‌ಗಳ ಕ್ಯಾರೇಜ್ ವೇ ಹಾಗೂ 6 ಲೇನ್ ಸರ್ವಿಸ್ ರಸ್ತೆಗಳು ಇರಲಿವೆ.

ಈ ಎಕ್ಸ್‌ಪ್ರೆಸ್‌ವೇಯಿಂದ ಈಶಾನ್ಯ ದೆಹಲಿಯು ಟ್ರಾಫಿಕ್ ಜಾಮ್‌ನಿಂದ ಮುಕ್ತವಾಗಲಿದೆ. ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶ ಸರ್ಕಾರಕ್ಕೆ ಎಲೆಕ್ಟ್ರಾನಿಕ್ ಸಿಟಿ ಹಾಗೂ ಮಂಡೋಲಾ ವಿಹಾರ್'ನ ಲೈಫ್ ಲೈನ್ ಆಗಲಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಎಕ್ಸ್‌ಪ್ರೆಸ್‌ವೇಯ ಎರಡನೇ ಹಂತದಲ್ಲಿ ಇಪಿಇ ದಾಟಿದ ನಂತರ 118 ಕಿ.ಮೀ ಗ್ರೀನ್‌ಫೀಲ್ಡ್ ಮಾರ್ಗವನ್ನು ನಿರ್ಮಿಸಲಾಗುವುದು. ಈ ಮಾರ್ಗವನ್ನು ಸಹರಾನ್‌ಪುರ ಬೈಪಾಸ್‌ಗೆ ಸಂಪರ್ಕಿಸಲಾಗುವುದು.

ಹೆದ್ದಾರಿಯಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕಾಗಿ ಒಟ್ಟು 7 ಇಂಟರ್ ಚೇಂಜ್ ಹಾಗೂ 60 ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುವುದು. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಅಳವಡಿಸಲಾಗುವುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಕ್ಸ್‌ಪ್ರೆಸ್‌ವೇಯನ್ನು ಮೇಲ್ವಿಚಾರಣೆ ಮಾಡಲು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಮುಚ್ಚಿದ ಟೋಲ್ ವ್ಯವಸ್ಥೆ, ಸಿಸಿಟಿವಿಕ್ಯಾಮೆರಾಗಳೊಂದಿಗೆ ಇಡೀ ಹೆದ್ದಾರಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ 25 ಕಿ.ಮೀ ಮಧ್ಯಂತರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ನಾಲ್ಕನೇ ಹಂತದಲ್ಲಿ ಸಹರಾನ್‌ಪುರ ಬೈಪಾಸ್‌ನಿಂದ ಗಣೇಶಪುರಕ್ಕೆ 40 ಕಿ.ಮೀ ಪ್ರವೇಶ ನಿಯಂತ್ರಣ ಭದ್ರತೆ ಅಥವಾ 100 ಕಿ.ಮೀ ವೇಗದಲ್ಲಿ ಸಾಗುವುದನ್ನು ಖಾತ್ರಿ ಪಡಿಸಲಾಗುವುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಹಂತದಲ್ಲಿ ಹೆಚ್ಚುವರಿ ಅಂಡರ್‌ಪಾಸ್ ಹಾಗೂ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುವುದು. ನಾಲ್ಕನೇ ಹಾಗೂ ಕೊನೆಯ ಹಂತವು ಗಣೇಶಪುರದಿಂದ ಡೆಹ್ರಾಡೂನ್‌ವರೆಗೆ ಇರಲಿದೆ.

ಈ ಹಂತದಲ್ಲಿ ಬಹುಭಾಗ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತವೆ, ಜೊತೆಗೆ ಅಪಘಾತ ಸೂಕ್ಷ್ಮ ಪ್ರದೇಶವಾಗಿದೆ. ಈ ಪ್ರದೇಶದ ರಸ್ತೆಗಳು ಕಿರಿದಾಗಿರುವುದರಿಂದ ಜನರು ಸಂಚಾರ ದಟ್ಟಣೆಯನ್ನು ಎದುರಿಸುವಂತಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಹಂತದಲ್ಲಿ ರಸ್ತೆಗಳನ್ನು ಅಗಲೀಕರಣಗೊಳಿಸಲು 12 ಕಿ.ಮೀ ಎಲಿವೇಟೆಡ್ ರಸ್ತೆ ಹಾಗೂ ಅಂಡರ್‌ಪಾಸ್'ಗಳನ್ನು ನಿರ್ಮಿಸಲಾಗುವುದು. ಎಲಿವೇಟೆಡ್ ಹಾಗೂಅಂಡರ್‌ಪಾಸ್ ರಸ್ತೆಗಳು ಪ್ರಾಣಿಗಳು ಯಾವುದೇ ತೊಂದರೆಯಾಗದಂತೆ ಚಲಿಸುವುದನ್ನು ಖಾತ್ರಿ ಪಡಿಸುತ್ತವೆ.
6 ಲೇನ್'ನ 12 ಕಿ.ಮೀ ಉದ್ದದ ವೈಲ್ಡ್ ಲೈಫ್ ಕಾರಿಡಾರ್ ಭಾರತ ಮಾತ್ರವಲ್ಲದೇ ಏಷ್ಯಾದ ಅತಿ ಉದ್ದದ ವೈಲ್ಡ್ ಲೈಫ್ ಕಾರಿಡಾರ್ ಆಗಿದೆ. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಭೂಸ್ವಾಧೀನ ಹಾಗೂ ಇನ್ನಿತರ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯವು 2021ರ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿದ್ದು 2 ವರ್ಷಗಳಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.


Click it and Unblock the Notifications