ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಖ್ಯಾತ ತ್ರಿ ಚಕ್ರ ವಾಹನ ತಯಾರಕ ಕಂಪನಿಯಾದ ಅತುಲ್ ಆಟೋ ಲಿಮಿಟೆಡ್ ತನ್ನ ವಾಹನಗಳ ಸರಣಿಯನ್ನು ವಿಸ್ತರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಕಂಪನಿಯು ತನ್ನ ಹೊಸ ತಲೆಮಾರಿನ ಆರ್‌ಐಕೆ ಆಟೋರಿಕ್ಷಾವನ್ನು ಗುಜರಾತ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಹೊಸ ಅತುಲ್ ಆರ್‌ಐಕೆ ರಿಕ್ಷಾವನ್ನು ಸಿಎನ್‌ಜಿ ಎಂಜಿನ್, ಎಲ್‌ಪಿಜಿ ಎಂಜಿನ್ ಹಾಗೂ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಆರ್‌ಐಕೆ ಆಟೋ ರಿಕ್ಷಾವನ್ನು ದೇಶಿಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅತುಲ್ ಆಟೋ ಹೇಳಿದೆ.

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಏಪ್ರಿಲ್‌ನಿಂದ ಭಾರತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆರ್‌ಐಕೆ ಆಟೋ ರಿಕ್ಷಾಗಳ ಪೂರೈಕೆಯನ್ನು ಆರಂಭಿಸುವುದು ಕಂಪನಿಯ ಗುರಿಯಾಗಿದೆ. ಗುಜರಾತ್ ಅತುಲ್ ಆಟೋದ ಪ್ರಮುಖ ಮಾರುಕಟ್ಟೆಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಕಂಪನಿಯು ಗುಜರಾತ್'ನಲ್ಲಿ 120ಕ್ಕೂ ಹೆಚ್ಚು ಟಚ್‌ಪಾಯಿಂಟ್ ನೆಟ್‌ವರ್ಕ್‌ಗಳನ್ನು ಹೊಂದಿದೆ. ಹೊಸ ಅತುಲ್ ಆರ್‌ಐಕೆ ಸಿಎನ್‌ಜಿ ಮಾದರಿಯು ವಿನ್ಯಾಸ ಹಾಗೂ ಮಿತವ್ಯಯದ ಮಿಶ್ರಣವಾಗಿದೆ.

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಕಂಪನಿಯು ಈ ಆಟೋ ರಿಕ್ಷಾದಲ್ಲಿ ಬೀಜ್ ಕಲರ್ ಡ್ಯಾಶ್‌ಬೋರ್ಡ್, ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಸ್ಟೆಪ್-ಲೇಸ್ ಎಂಟ್ರಿ ಹಾಗೂ ಇದೇ ಮೊದಲ ಬಾರಿಗೆ ಎಲ್ಇಡಿ ಟೇಲ್ ಲ್ಯಾಂಪ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ವಿಶೇಷವೆಂದರೆ ಅತುಲ್ ಆಟೋ ಕಂಪನಿಯು ಹೊಸ ಆರ್‌ಐಕೆ ಗ್ರಾಹಕರಿಗೆ ಹೂಡಿಕೆಯ ಮೇಲಿನ ಲಾಭಕ್ಕಾಗಿ ಇನ್‌ಕ್ರೆಡಿಬಲ್ ಕಾನ್ಫಿಡೆನ್ಸ್ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ.

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಈ ಯೋಜನೆಯ ಜೊತೆಗೆ ಆರ್‌ಐಕೆ ಸಿಎನ್‌ಜಿ ಹಾಗೂ ಎಲ್‌ಪಿಜಿ ಮಾದರಿಗಳು 36 ತಿಂಗಳ ಅನಿಯಮಿತ ಕಿ.ಮೀಗಳ ಸೂಪರ್ ವಾರಂಟಿಯೊಂದಿಗೆ ಬರುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಈ ಸಂದರ್ಭದಲ್ಲಿ ಮಾತನಾಡಿದ ಅತುಲ್ ಆಟೋ ಲಿಮಿಟೆಡ್‌ನ ನಿರ್ದೇಶಕ ನೀರಜ್ ಚಂದ್ರ, ಸಣ್ಣ ಸಿಎನ್‌ಜಿ ಆಟೋರಿಕ್ಷಾ ವಿಭಾಗವು ಹಲವು ವರ್ಷಗಳಿಂದ ಸೊಗಸಾದ ಶೈಲಿಯ ಉತ್ಪನ್ನಕ್ಕಾಗಿ ಕಾಯುತ್ತಿದೆ.

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಶೈಲಿಯ ಬಗ್ಗೆ ಆಸಕ್ತಿ ಹೊಂದಿರುವ ಗ್ರಾಹಕರು ಸಾಂಪ್ರದಾಯಿಕವಾದ ತಂತ್ರಜ್ಞಾನ ಹಾಗೂ ಶೈಲಿಯನ್ನು ಬಯಸುತ್ತಾರೆ. ನಾವು ಆರ್‌ಐಕೆ ಆಟೋ ರಿಕ್ಷಾವನ್ನು 360 ಡಿಗ್ರಿ ವಿಧಾನದೊಂದಿಗೆ ಪರಿಚಯಿಸಿದ್ದೇವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಇದು ಗ್ರಾಹಕರಿಗೆ ಹೆಚ್ಚು ಆಯ್ಕೆಯನ್ನು ನೀಡುತ್ತದೆ. ಆರ್‌ಐಕೆ ಆಟೋ ರಿಕ್ಷಾವನ್ನು ಪರಿಚಯಿಸುವ ಮೂಲಕ ನಾವು 0.35 ಟಿ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಒಳ್ಳೆಯ ಪಾಲನ್ನು ಪಡೆಯುವುದು ಖಚಿತ ಎಂದು ಹೇಳಿದರು.

ಆರ್‌ಐಕೆ ಆಟೋರಿಕ್ಷಾ ಬಿಡುಗಡೆಗೊಳಿಸಿದ ಅತುಲ್ ಆಟೋ

ಈ ಸಂದರ್ಭದಲ್ಲಿ ಕಂಪನಿಯ ಹಣಕಾಸು ಅಧ್ಯಕ್ಷ ಅಧಿಯಾರವರು ಸಹ ಉಪಸ್ಥಿತರಿದ್ದರು. ಅಧಿಯಾರವರು ಮಾತನಾಡಿ, ಅತುಲ್ ಆಟೋ ಲಿಮಿಟೆಡ್ (ಎಎಎಲ್) ಖುಷ್ಬೂ ಆಟೋ ಫೈನಾನ್ಸ್ (ಕೆಎಎಫ್ಎಲ್) ಮೂಲಕ ಆರ್‌ಐಕೆ ಸಿಎನ್‌ಜಿ / ಎಲ್‌ಪಿ‌ಜಿಯನ್ನು ಖರೀದಿಸಲು ನೆರವಾಗುತ್ತದೆ ಎಂದು ಹೇಳಿದರು.

Most Read Articles

Kannada
English summary
Atul Auto launches new RIK auto rickshaws for Gujarat market. Read in Kannada.
Story first published: Tuesday, March 9, 2021, 21:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X