Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಮ್‌ಸಂಗ್ ಕಂಪನಿಯ ಡಿಜಿಟಲ್ ಫೀಚರ್'ನೊಂದಿಗೆ ಮತ್ತಷ್ಟು ಸ್ಮಾರ್ಟ್ ಆಗಲಿವೆ ಈ ಕಂಪನಿಯ ಕಾರುಗಳು
ಆಡಿ, ಬಿಎಂಡಬ್ಲ್ಯು, ಫೋರ್ಡ್ ಕಂಪನಿಗಳು ತಮ್ಮ ಕಾರುಗಳಲ್ಲಿ ಡಿಜಿಟಲ್ ಫೀಚರ್'ಗಳನ್ನು ಹೊಂದಲು ಸ್ಯಾಮ್‌ಸಂಗ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಡಿಜಿಟಲ್ ಫೀಚರ್'ನಿಂದಾಗಿ ಸ್ಮಾರ್ಟ್ ಫೋನ್ ಮೂಲಕ ಕಾರುಗಳನ್ನು ಅನ್ ಲಾಕ್ ಮಾಡಬಹುದು.

2021ರ ಆಗಸ್ಟ್ ತಿಂಗಳಿನಿಂದ ಈ ತಂತ್ರಜ್ಞಾನವನ್ನು ಕಾರುಗಳಲ್ಲಿ ಅಳವಡಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ. ಸ್ಯಾಮ್‌ಸಂಗ್ ತಯಾರಿಸಿರುವ ಡಿಜಿಟಲ್ ಕೀಗಳನ್ನು ಯಾವುದೇ ಮೊಬೈಲ್ ಪ್ಲಾಟ್‌ಫಾರಂನಲ್ಲಿ ಶೇರ್ ಮಾಡಿಕೊಳ್ಳಬಹುದು. ಈ ಡಿಜಿಟಲ್ ಕೀಯನ್ನು ಕೋಡ್ ಆಗಿ ಸಹ ಬಳಸಬಹುದು. ಮೊಬೈಲ್ ಅಪ್ಲಿಕೇಶನ್'ನಲ್ಲಿ ನಮೂದಿಸಿದ ನಂತರ ಅನ್ ಲಾಕ್ ಮಾಡಬಹುದು.

ಈ ಕೋಡ್ ಅನ್ನು ಕುಟುಂಬದ ಸದಸ್ಯರ ಜೊತೆಗೂ ಶೇರ್ ಮಾಡಿಕೊಳ್ಳಬಹುದು. ಕಾರನ್ನು ಬಳಸುವ ವ್ಯಕ್ತಿ ಈ ಕೋಡ್ ಇದ್ದಾಗ ಅವನು ಕಾರಿನ ಬಳಿ ಹೋಗಿ ಕಾರ್ ಅನ್ನು ಕೈಗಳಿಂದ ಮುಟ್ಟದೆ ಕಾರಿನ ಡೋರುಗಳನ್ನು ತೆರೆಯಬಹುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎನ್‌ಎಫ್‌ಸಿ ಅಂದರೆ, ನಿಯರ್ ಫೀಲ್ಡ್ ಕಮ್ಯುನಿಕೇಷನ್ ತಂತ್ರಜ್ಞಾನವನ್ನು ಡಿಜಿಟಲ್ ಕಾರಿನ ಫೀಚರ್ ಅಗಿಯೂ ಬಳಸಬಹುದು. ಕಾರಿನೊಳಗೆ ಎನ್‌ಎಫ್‌ಸಿ ಸಾಧನವನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಕಾರು ಚಾಲಕ ಕಾರಿನ ಮುಂದೆ ಬಂದ ಕೂಡಲೇ ಕಾರಿನ ಬಾಗಿಲು ಆಟೋಮ್ಯಾಟಿಕ್ ಆಗಿ ತೆರೆದು ಕೊಳ್ಳುತ್ತದೆ.

ಸ್ಯಾಮ್‌ಸಂಗ್ ಕಂಪನಿಯು ತನ್ನ ಸ್ಮಾರ್ಟ್ ಫೀಚರ್ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕಂಪನಿಯು ವಿನ್ಯಾಸಗೊಳಿಸುತ್ತಿರುವ ಸ್ಮಾರ್ಟ್ ಫೀಚರ್'ಗಳು ಕೇವಲ ಕಾರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇವುಗಳನ್ನು ಮನೆಗಳಲ್ಲಿರುವ ಸ್ಮಾರ್ಟ್ ಸಾಧನಗಳಲ್ಲಿಯೂ ಬಳಸಬಹುದು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸ್ಮಾರ್ಟ್ ಎಸಿ, ಲೈಟ್, ಫ್ರಿಡ್ಜ್ ಅಥವಾ ವಾಷಿಂಗ್ ಮಿಷಿನ್'ನಂತಹ ಅನೇಕ ಸ್ಮಾರ್ಟ್ ಸಾಧನಗಳನ್ನು ಕಾರಿನಲ್ಲಿರುವ ಡಿಸ್ ಪ್ಲೇ ಮೂಲಕ ನಿಯಂತ್ರಿಸುವ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸುತ್ತಿದೆ.

ಸ್ಯಾಮ್‌ಸಂಗ್, ಗೂಗಲ್‌ನಂತಹ ಕಂಪನಿಗಳು ಕಾರುಗಳ ಸ್ಮಾರ್ಟ್ ಸಾಧನಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಕಾರುಗಳಲ್ಲಿ ಆಂಡ್ರಾಯ್ಡ್ ಆಟೋ ಸಿಸ್ಟಂ ಅಭಿವೃದ್ಧಿಗೆ ಸ್ಯಾಮ್‌ಸಂಗ್ ಹಾಗೂ ಗೂಗಲ್ ಕಂಪನಿಗಳು ಹೆಚ್ಚಿನ ಕೊಡುಗೆ ನೀಡಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

5 ಜಿ ಆಧಾರಿತ ಡಿಜಿಟಲ್ ಕಾಕ್‌ಪಿಟ್ ಅನ್ನು ಸ್ಯಾಮ್‌ಸಂಗ್ ಕಂಪನಿಯು 2020ರ ಜನವರಿಯಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲಿ ಪ್ರದರ್ಶಿಸಿತ್ತು. ಡಿಜಿಟಲ್ ಕಾಕ್‌ಪಿಟ್ ಸಹಾಯದಿಂದ ಕಾರು ಚಾಲಕನು ತನ್ನ ಕಾರಿನ ಒಳಗಿನಿಂದಲೇ ಮನೆ ಹಾಗೂ ಕಚೇರಿಯಲ್ಲಿರುವ ಸ್ಮಾರ್ಟ್ ಸಾಧನಗಳನ್ನು ನಿಯಂತ್ರಿಸಬಹುದು.

ಡಿಜಿಟಲ್ ಕಾಕ್‌ಪಿಟ್ ಒಂದು ರೀತಿಯ ಕನೆಕ್ಟೆಡ್ ಟೆಕ್ನಾಲಜಿಯನ್ನು ಆಧರಿಸಿದೆ. ಈ ಟೆಕ್ನಾಲಜಿಯು ಒಂದು ವ್ಯವಸ್ಥೆಯಿಂದ ಅನೇಕ ಸಾಧನಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲಿ ಸ್ಯಾಮ್‌ಸಂಗ್ ಕಂಪನಿಯು 8 ಡಿಸ್ ಪ್ಲೇ ಹಾಗೂ 8 ಕ್ಯಾಮೆರಾಗಳನ್ನು ಹೊಂದಿರುವ ಕಾರಿನ ಮೂಲಮಾದರಿಯನ್ನು ಪ್ರದರ್ಶಿಸಿತ್ತು. ಡಿಜಿಟಲ್ ಕಾಕ್‌ಪಿಟ್‌ನ ಆಂಡ್ರಾಯ್ಡ್ ಆವೃತ್ತಿಯು ಆಂಡ್ರಾಯ್ಡ್ 10ನಲ್ಲಿ ಕಾರ್ಯನಿರ್ವಹಿಸುತ್ತದೆ.