ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಆಡಿ ಇಂಡಿಯಾ ಕಂಪನಿಯು ತನ್ನ ಐಷಾರಾಮಿ ಕಾರುಗಳ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಮುಂದಿನ ಒಂದು ತಿಂಗಳಿಗೆ ಹೆಚ್ಚಿಸಿದ್ದು, ಲಾಕ್‌ಡೌನ್‌ನಲ್ಲಿ ಮುಕ್ತಾಯಗೊಳ್ಳಲಿದ್ದ ಸ್ಟ್ಯಾಂಡರ್ಡ್ ವಾರಂಟಿ ಮತ್ತು ಉಚಿತ ಸೇವೆಗಳನ್ನು ಜೂನ್ 30ರ ತನಕ ಮುಂದೂಡಿಕೆ ಮಾಡಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಸರಿಯಾದ ಸಮಯಕ್ಕೆ ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ. ಇದರಿಂದ ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳಬೇಕಿದ್ದ ವಾಹನಗಳ ವಾರಂಟಿ ಅವಧಿಯು ಮುಗಿದುಹೋಗಲಿದ್ದು, ಹೊಸ ವಾಹನ ಖರೀದಿದಾರರಿಗೆ ಆಡಿ ಇಂಡಿಯಾ ಕಂಪನಿಯು ಸಿಹಿಸುದ್ದಿ ನೀಡಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ವಾರಂಟಿ ಮುಕ್ತಾಯವಾಗುವುದರಿಂದ ಗ್ರಾಹಕರ ಸೇವೆಗಳು ಕಡಿತವಾಗುವ ವಿಚಾರವಾಗಿ ಸ್ಪಷ್ಟನೆ ನೀಡಿರುವ ಆಡಿ ಇಂಡಿಯಾ ಕಂಪನಿಯು ಮೇ ತಿಂಗಳಿನಲ್ಲಿ ಮುಕ್ತಾಯಗೊಳ್ಳಬೇಕಿರುವ ಕಾರುಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಜೂನ್ 30ರ ತನಕ ಮುಂದೂಡಿಕೆ ಮಾಡಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ವಿಸ್ತರಿತ ವಾರಂಟಿಯಿಂದಾಗಿ ಗ್ರಾಹಕರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಗ್ರಾಹಕರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ವಾಹನಗಳ ಖರೀದಿ ಮತ್ತು ಗ್ರಾಹಕರ ಸೇವೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಇನ್ನು ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ ಕಂಪನಿಯು ಹೊಸ ಕಾರುಗಳ ಮಾರಾಟ ಹೆಚ್ಚಿದಂತೆ ಗ್ರಾಹಕ ಸೇವೆಗಳನ್ನು ತೀವ್ರಗೊಳಿಸುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಹೊಸ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ. ಹೊಸ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಆಡಿ ಇಂಡಿಯಾ ಕಂಪನಿಯು ಇತ್ತೀಚೆಗೆ ಗ್ರಾಹಕರ ಸೇವೆಗಳನ್ನು ನಿಗದಿತ ಅವಧಿಯಲ್ಲಿ ಪೂರೈಸುವ ಉದ್ದೇಶದೊಂದಿಗೆ ಆಧುನಿಕ ತಂತ್ರಜ್ಞಾನ ಪ್ರೇರಿತ ಸರ್ವಿಸ್ ಸೆಂಟರ್ ಅನ್ನು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ತೆರೆದಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಇಷ್ಟು ದಿನಗಳ ಕಾಲ ಇಂಧೋರ್‌ನಲ್ಲಿ ಗ್ರಾಹಕರ ಸೇವಾ ಕಾರ್ಯಾಚರಣೆ ಹೊಂದಿದ್ದ ಆಡಿ ಕಂಪನಿಯು ಮಧ್ಯಪ್ರದೇಶದಲ್ಲಿ ಇದೀಗ ಎರಡನೇ ಸರ್ವಿಸ್ ಸೆಂಟರ್ ಆರಂಭಿಸಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಒಂದೇ ಸೂರಿನಡಿ ವಿವಿಧ ಗ್ರಾಹಕ ಸೇವೆಗಳನ್ನು ಪೂರೈಸುವ ಹೊಸ ಸರ್ವಿಸ್ ಸೆಂಟರ್‌ನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಡಿಭಾಗಗಳ ಸೇವೆಗಳನ್ನು ಹೊಂದಿದ್ದು, ನುರಿತ ಉದ್ಯೋಗಿಗಳ ತಂಡವನ್ನು ನೇಮಕ ಮಾಡಲಾಗಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಕೇವಲ ಆಡಿ ಕಾರುಗಳಿಗೆ ಮಾತ್ರ ತೆರೆಯಲಾಗಿರುವ ಹೊಸ ಸರ್ವಿಸ್ ಸೆಂಟರ್‌ನಲ್ಲಿ ಒಂದು ದಿನಕ್ಕೆ ಐದು ಕಾರುಗಳನ್ನು ಸರ್ವಿಸ್ ಮಾಡಬಹುದಾಗಿದ್ದು, ಪ್ರತಿಯೊಂದು ಬಿಡಿಭಾಗಗಳ ಸೇವೆಯು ಕಂಪನಿಯೇ ನೇರವಾಗಿ ನಿರ್ವಹಿಸುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಿದ ಆಡಿ ಇಂಡಿಯಾ

ಈ ಮೂಲಕ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಮತ್ತು ವಿವಿಧ ನಗರಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಲು ಹೊಸ ಸರ್ವಿಸ್ ಸೆಂಟರ್‌ಗಳನ್ನು ಸಾಕಷ್ಟು ಸಹಕಾರಿಯಾಗುತ್ತಿದ್ದು, ಶೀಘ್ರದಲ್ಲೇ ಆಡಿ ಕಂಪನಿಯು ಮತ್ತಷ್ಟು ಸರ್ವಿಸ್ ಸೆಂಟರ್‌ಗಳನ್ನು ತೆರೆಯುವ ಸಿದ್ದತೆಯಲ್ಲಿದೆ.

More from DriveSpark

Article Published On: Thursday, May 20, 2021, 8:45 [IST]
English summary
Audi extended free service and warranty till 30th June. Read in Kannada.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+