Just In
- 1 hr ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 14 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 17 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 17 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
Don't Miss!
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- News Gold Rates Today: ನಿನ್ನೆಗಿಂತ ಕೊಂಚ ಇಳಿಕೆಯಾದ ಚಿನ್ನದ ಬೆಲೆ, ಯಾವ ನಗರದಲ್ಲಿ ಎಷ್ಟು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಬಿಡುಗಡೆ
ಜರ್ಮನ್ ಮೂಲದ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರಿನ ಬೆಲೆಯು ರೂ.1.04 ಕೋಟಿಯಾಗಿದೆ.
ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರು ಇಂಗೋಲ್ಸ್ಟಾಟ್ ಆಧಾರಿತ ಕಂಪನಿಯ ವಿಸ್ತರಿಸುವ ಐಷಾರಾಮಿ ಪೋರ್ಟ್ಫೋಲಿಯೊದ ಭಾಗವಾಗಿದೆ. ಈ ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರು ನಾರ್ಡೊ ಗ್ರೇ, ಟರ್ಬೊ ಬ್ಲೂ, ಟ್ಯಾಂಗೋ ರೆಡ್, ಮಿಥೋಸ್ ಬ್ಲ್ಯಾಕ್, ಗ್ಲೇಸಿಯರ್ ವೈಟ್, ನವರಾ ಬ್ಲೂ, ಸೊನೊಮಾ ಗ್ರೀನ್ ಮತ್ತು ಡೇಟೋನಾ ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಈ ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರಿನಲ್ಲಿ ವಿ6 2.9-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬ್ರಾಂಡ್ನ ಕ್ವಾಟ್ರೊ ಪರ್ಮನೆಂಟ್ ಆಲ್-ವೀಲ್ ಡ್ರೈವ್ ಮೂಲಕ ಸೆಲ್ಫ್-ಲಾಕಿಂಗ್ ಸೆಂಟರ್ ಡಿಫರೆನ್ಷಿಯಲ್ನೊಂದಿಗೆ ಎಲ್ಲಾ ನಾಲ್ಕು ವ್ಭೀಲ್ ಗಳೊಂದಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ 6,700 ಆರ್ಪಿಎಂನಲ್ಲಿ 443 ಬಿಹೆಪಿ ಪವರ್ ಮತ್ತು 5,000 ಆರ್ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇನ್ನು ಈ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 3.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು ಸ್ಪೋರ್ಟ್ಸ್ ಸಸ್ಪೆಂಕ್ಷನ್ ಮತ್ತು ವರ್ಧಿತ ಕಾರ್ಯಕ್ಷಮತೆಗಾಗಿ ಆರ್ಎಸ್ ಸ್ಟೀಲ್ ಬ್ರೇಕ್ ಅನ್ನು ಒಳಗೊಂಡಿದೆ.
ಈ ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹನಿಕಾಬ್ ಗ್ರಿಲ್ನೊಂದಿಗೆ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದು ಸೆಡಾನ್ನ ಅಗ್ರೇಸಿವ್ ಲುಕ್ ಅನ್ನು ಹೆಚ್ಚಿಸಲು ಆಕ್ಟಿವ್ ಏರೋ ಮತ್ತು ಅಗ್ರೇಸಿವ್ ಬಂಪರ್ ಅನ್ನು ಒಳಗೊಂಡಿದೆ.
ಈ ಸ್ಪೋರ್ಟ್ಬ್ಯಾಕ್ ಕಾರಿನಲ್ಲಿ ಡಿಆರ್ಎಲ್ಗಳೊಂದಿಗೆ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೈಲ್ಲ್ಯಾಂಪ್ಗಳು, 19 ಇಂಚಿನ ಅಲಾಯ್ ವ್ಹೀಲ್ ಗಳು ಹಿಂಭಾಗದ ಸ್ಪಾಯ್ಲರ್ ಫ್ರೇಮ್ಲೆಸ್ ಮತ್ತು ಎಲ್ಇಡಿ ಪ್ರೊಜೆಕ್ಷನ್ ಲ್ಯಾಂಪ್ ಗಳನ್ನು ಹೊಂದಿವೆ.
ಈ ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರಿನ ಒಳಭಾಗದಲ್ಲಿ ಪರ್ಫಾರ್ಮೆನ್ಸ್ ಸಲೂನ್ ಅನ್ನು ಅಲ್ಕಾಂಟರಾ ಮತ್ತು ಲೆದರ್ ನಲ್ಲಿ ಡ್ಯಾಶ್ ಬೋರ್ಡ್ ಮೇಲೆ ಮತ್ತು ಕ್ಯಾಬಿನ್ ಅಡ್ಡಲಾಗಿ ಅಲ್ಯೂಮಿನಿಯಂ ಹೊದಿಕೆಯನ್ನು ಹಾಕಲಾಗಿದೆ.
ಇನ್ನು ಈ ಕಾರಿನಲ್ಲಿ ಸ್ಪೋರ್ಟ್ ಸೀಟುಗಳು, ಮೂರು-ಸ್ಪೋಕ್ ಲೆದರ್ ಸ್ಟೀರಿಂಗ್ ವೀಲ್, ಪ್ಯಾಡಲ್ ಶಿಫ್ಟರ್ಗಳು, ಸ್ಟೇನ್ಲೆಸ್ ಸ್ಟೀಲ್ ಪೆಡಲ್ಗಳು ಮತ್ತು ಫುಟ್ರೆಸ್ಟ್ ಆರ್ಎಸ್ ಸ್ಕಫ್ ಪ್ಲೇಟ್ಗಳನ್ನು ಹೊಂದಿವೆ. ಈ ಕಾರಿನ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸುಧಾರಿಸಲು, ಸ್ಫೋರ್ಟ್ಸ್ ಸೀಟುಗಳು ಮಸಾಜ್ ಕಾರ್ಯದೊಂದಿಗೆ ನ್ಯೂಮ್ಯಾಟಿಕ್ ಹೊಂದಾಣಿಕೆ ಮತ್ತು ಡ್ರೈವರ್ ಸೀಟ್ ಹೊಂದಾಣಿಕೆ ಸೆಟ್ಟಿಂಗ್ಗಳಿಗೆ ಮೆಮೊರಿಯನ್ನು ಹೊಂದಿದೆ.
ಈ ಕಾರಿನಲ್ಲಿರುವ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 10.1-ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇ ಅನ್ನು ಹೊಂದಿದ್ದು, ಇದು ಆಫಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು --ಜೋನ್ ಏರ್ ಕಂಡೀಷನಿಂಗ್ ಆಂಬಿಯೆಂಟ್, ಲೈಟಿಂಗ್ (ಸಿಂಗಲ್ ಕಲರ್) ಕ್ರೂಸ್ ಕಂಟ್ರೋಲ್ ಸಿಸ್ಟಮ್, ಪವರ್ಡ್ ಟೈಲ್ಗೇಟ್, ಪನೋರಮಿಕ್ ಸನ್ ರೂಓ, 10-ಸ್ಪೀಕರ್ ಆಡಿಯೋ ಸಿಸ್ಟಂ ಮತ್ತು ಎಂಎಂಐ ನ್ಯಾವಿಗೇಷನ್ ಪ್ಲಸ್ ಅನ್ನು ಹೊಂದಿದೆ.
ಇನ್ನು ಈ ಕಾರಿನ ಸುರಕ್ಷತಾ ಪೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 6 ಏರ್ಬ್ಯಾಗ್ಗಳು, ISOFIX ಚೈಲ್ಡ್ ಸೀಟ್ ಆಂಕರ್ಗಳು, ಆಂಟಿ ಥೀಫ್ಟ್ ಬೋಲ್ಟ್ಗಳು, ಹೋಲ್ಡ್ ಅಸಿಸ್ಟ್, ಟೋ-ಡಿಮ್ಮಿಂಗ್ ರಿಯರ್-ವ್ಯೂ ಮಿರರ್, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಬಿಎಸ್ ಜೊತೆ ಇಬಿಡಿಯನ್ನು ಹೊಂದಿರುತ್ತದೆ.
ಹೊಸ ಆಡಿ ಆರ್ಎಸ್5 ಸ್ಪೋರ್ಟ್ಬ್ಯಾಕ್ ಕಾರು ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಪೀಚರ್ಸ್ ಗಳನ್ನು ಹೊಂದಿದೆ. ಈ ಹೊಸ ಆಡಿ ಆರ್ಎಸ್5 ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ 63 ಎಎಂಜಿ ಮತ್ತು ಬಿಎಂಡಬ್ಲ್ಯು ಎಂ3 ಕಾರುಗಳಿಗೆ ಪೈಪೋಟಿ ನೀಡುತ್ತದೆ