ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ವಾಹನ ತಯಾರಕ ಕಂಪನಿಗಳು ಕಳೆದ ಕೆಲವು ತಿಂಗಳುಗಳಿಂದ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಜನವರಿ ತಿಂಗಳಿನಲ್ಲಿ ಕೆಲವು ಕಂಪನಿಗಳು ಬೆಲೆಯನ್ನು ಹೆಚ್ಚಿಸಿದ್ದವು. ಇನ್ನು ಕೆಲವು ಕಂಪನಿಗಳು ಏಪ್ರಿಲ್ ತಿಂಗಳಿನಲ್ಲಿ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಮಾಧ್ಯಮ ವರದಿಗಳ ಪ್ರಕಾರ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ಎರಡನೇ ತ್ರೈಮಾಸಿಕದಲ್ಲಿ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಜನವರಿ, ಏಪ್ರಿಲ್ ನಂತರ ಮುಂದಿನ ತ್ರೈಮಾಸಿಕದಲ್ಲಿ ಬೆಲೆ ಏರಿಸುವ ಸಾಧ್ಯತೆಗಳಿವೆ.

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಆಟೋ ಮೊಬೈಲ್ ಉದ್ಯಮದ ಅಧಿಕಾರಿಗಳ ಪ್ರಕಾರ, ಎರಡು ಬಾರಿ ಬೆಲೆ ಏರಿಕೆ ಮಾಡಿದ್ದರೂ ಸಹ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ವಾಹನ ತಯಾರಕ ಕಂಪನಿಗಳು ಮತ್ತೆ ಬೆಲೆ ಹೆಚ್ಚಿಸಲಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಏಪ್ರಿಲ್ ತಿಂಗಳಿನಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮುಂತಾದ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈ ಕಾರಣದಿಂದಾಗಿ ಮಾರುತಿ ಸುಜುಕಿ, ರೆನಾಲ್ಟ್, ಹೀರೋ, ನಿಸ್ಸಾನ್'ನಂತಹ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಆದರೆ ವಾಹನಗಳ ಬೆಲೆ ಹೆಚ್ಚಳವು ಮಾರಾಟದ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಜುಲೈ ತಿಂಗಳಿನಲ್ಲಿ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಬೆಲೆಯನ್ನು ಹೆಚ್ಚಿಸಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಇದು ವಾಹನ ಉತ್ಪಾದನೆಯ ವೆಚ್ಚದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಬಿಎಸ್ 6 ಮಾಲಿನ್ಯ ನಿಯಮಗಳನ್ನು ಪರಿಚಯಿಸಿದಾಗಿನಿಂದ ಉಕ್ಕು, ಪ್ಲಾಸ್ಟಿಕ್ ಹಾಗೂ ರೋಡಿಯಂನಂತಹ ವಸ್ತುಗಳ ಬೆಲೆ ಹೆಚ್ಚಾಗಿದೆ.

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಹೊಸ ಮಾಲಿನ್ಯ ನಿಯಮಗಳಿಂದಾಗಿ ವಾಹನಗಳ ಕ್ಯಾಟಲಿಟಿಕ್ ಕನ್ವರ್ಟರ್'ಗಳಲ್ಲಿ ರೋಡಿಯಂ ಬಳಕೆಯು ಹೆಚ್ಚಾಗಬಹುದು. ಇದರಿಂದಾಗಿ ವಾಹನ ಉತ್ಪಾದನಾ ವೆಚ್ಚವೂ ಹೆಚ್ಚಾಗಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಕಳೆದ 8 - 9 ತಿಂಗಳುಗಳಲ್ಲಿ ಉಕ್ಕಿನ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ವಾಹನ ಕಂಪನಿಗಳಿಗೆ ಈ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಾಹನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಇದೇ ವೇಳೆ ಇಂಧನಗಳ ಬೆಲೆ ಹೆಚ್ಚಳವು ಸಹ ಜನರು ಹೊಸ ಕಾರುಗಳನ್ನು ಖರೀದಿಸುವುದರಿಂದ ಹಿಂದೆ ಸರಿಯುವಂತೆ ಮಾಡಿದೆ. ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸೆಮಿಕಂಡಕ್ಟರ್'ಗಳ ಕೊರತೆಯು ಸಹ ವಾಹನದ ಉತ್ಪಾದನೆ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ವಾಹನ ತಯಾರಕ ಕಂಪನಿಗಳು ಈ ಸವಾಲುಗಳನ್ನು ಹೇಗೆ ನಿವಾರಿಸುತ್ತವೆ, ವಾಹನ ಮಾರಾಟವನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತೆ ವಾಹನಗಳ ಬೆಲೆ ಹೆಚ್ಚಿಸಲಿವೆ ವಾಹನ ತಯಾರಕ ಕಂಪನಿಗಳು

ಹಬ್ಬದ ವೇಳೆ ವಾಹನಗಳ ಮಾರಾಟವು ಸುಧಾರಿಸಿದ್ದರೂ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ವಾಹನಗಳ ಮಾರಾಟವು ಕುಸಿದಿತ್ತು. ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಹಾಗೂ ವಾಹನಗಳ ಬೆಲೆ ಹೆಚ್ಚಳವು ಗ್ರಾಹಕರ ವಾಹನ ಖರೀದಿ ನಿರ್ಧಾರವನ್ನು ಬದಲಿಸಲಿದೆ.

ಮೂಲ: ಇಟಿಆಟೊ

Most Read Articles

Kannada
English summary
Automobile companies to increase vehicle price again. Read in Kannada.
Story first published: Saturday, April 17, 2021, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X