ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಈಗ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗುತ್ತಿದೆ. ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಚಾಲಕ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಉತ್ತಮ ಫೀಚರ್ ಗಳನ್ನು ನೀಡುತ್ತವೆ. ಈ ಫೀಚರ್ ಗಳಲ್ಲಿ ರೇರ್ ವಿಂಡ್‌ಶೀಲ್ಡ್ ವೈಪರ್ ಸಹ ಸೇರಿದೆ. ಈ ಫೀಚರ್ ಈಗ ಬಿಡುಗಡೆಯಾಗುವ ಬಹುತೇಕ ಕಾರುಗಳಲ್ಲಿ ಕಂಡು ಬರುತ್ತದೆ. ಆದರೆ ಎಲ್ಲಾ ಕಾರುಗಳಲ್ಲಿ ಈ ಫೀಚರ್ ಲಭ್ಯವಿಲ್ಲ ಎಂಬುದು ಗಮನಾರ್ಹ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಕಾರು ತಯಾರಕ ಕಂಪನಿಗಳು ಈ ಫೀಚರ್ ಅನ್ನು ತಮ್ಮ ಹೈ ಎಂಡ್ ಕಾರುಗಳನ್ನು ನೀಡುತ್ತವೆ. ಈ ಫೀಚರ್ ಪಡೆಯಲು ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಕಾರುಗಳಲ್ಲಿ ರೇರ್ ವಿಂಡ್ ಶೀಲ್ಡ್ ವೈಪರ್ ಅಗತ್ಯವೇ? ಕಾರುಗಳಲ್ಲಿ ರೇರ್ ವಿಂಡ್‌ಶೀಲ್ಡ್ ವೈಪರ್ ಎಷ್ಟು ಉಪಯುಕ್ತವಾಗಿದೆ? ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ರೇರ್ ವಿಂಡ್ ಶೀಲ್ಡ್ ವೈಪರ್ ಉದ್ದೇಶ

ಹಿಂಭಾಗದ ವಿಂಡ್ ಷೀಲ್ಡ್ ಅನ್ನು ಸ್ವಚ್ಛಗೊಳಿಸುವುದು ರೇರ್ ವಿಂಡ್ ಶೀಲ್ಡ್ ವೈಪರ್'ಗಳ ಪ್ರಮುಖ ಕಾರ್ಯವಾಗಿದೆ. ಆದರೆ ವಿಶೇಷವೆಂದರೆ ರೇರ್ ವಿಂಡ್‌ಶೀಲ್ಡ್ ವೈಪರ್‌ಗಳು ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳಂತಹ ಫ್ಲಾಟ್ ರೇರ್ ವಿಂಡ್‌ಶೀಲ್ಡ್ ಹೊಂದಿರುವ ಕಾರುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳ ಟೇಲ್‌ಗೇಟ್‌ಗಳು ಸಮ ತಟ್ಟಾಗಿರುವುದರಿಂದ ಈ ಕಾರುಗಳ ಹಿಂಭಾಗದ ವಿಂಡ್‌ಶೀಲ್ಡ್‌ಗಳಿಗೆ ಗಾಳಿಯಾಡುವುದಿಲ್ಲ. ಇದರಿಂದ ಕಾರುಗಳ ರೇರ್ ವಿಂಡ್‌ಶೀಲ್ಡ್‌ನಲ್ಲಿ ಕೊಳಕು ಹಾಗೂ ಧೂಳು ಸಂಗ್ರಹವಾಗುತ್ತದೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಇದರ ಜೊತೆಗೆ ಮಳೆ ಬೀಳುವಾಗ ಕಾರಿನ ಹಿಂಭಾಗದ ವಿಂಡ್‌ಶೀಲ್ಡ್‌ನಲ್ಲಿ ನೀರಿನ ಹನಿಗಳು ಸಂಗ್ರಹವಾಗುತ್ತವೆ. ಈ ಕಾರುಗಳ ಏರೋ ಡೈನಾಮಿಕ್ಸ್ ಸೆಡಾನ್‌ ಕಾರುಗಳಂತೆ ನೀರು ಹರಿಯಲು ಬಿಡುವುದಿಲ್ಲ. ಕಾರಿನಲ್ಲಿ ರೇರ್ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಅಳವಡಿಸಲು ಇದು ಪ್ರಮುಖ ಕಾರಣವಾಗಿದೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ರೇರ್ ವಿಂಡ್‌ಶೀಲ್ಡ್ ವೈಪರ್‌ಗಳ ಉಪಯುಕ್ತತೆ

ರೇರ್ ವೈಪರ್‌ಗಳು ಮಳೆ ಮಾತ್ರವಲ್ಲದೆ ಅನೇಕ ಸಂದರ್ಭಗಳಲ್ಲಿ ಉಪಯುಕ್ತವಾಗಿವೆ. ಉದಾಹರಣೆಗೆ ಎಸ್‌ಯುವಿಗಳಲ್ಲಿ ಆಫ್ ರೋಡಿಂಗ್ ನಲ್ಲಿ ಸಾಗುವಾಗ ಒರಟಾದ ರಸ್ತೆಯಲ್ಲಿ ವೇಗವಾಗಿ ಚಲಿಸಿದಾಗ ಆ ರಸ್ತೆಯಲ್ಲಿರುವ ಧೂಳು ಕಾರುಗಳ ವಿಂಡ್ ಶೀಲ್ಡ್ ಮೇಲೆ ಕೂರುತ್ತದೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಇದು ಕಾರಿನ ಹಿಂಬದಿಯ ವಿಂಡ್ ಶೀಲ್ಡ್ ಅನ್ನು ಕೆಡಿಸಬಹುದು. ಅಲ್ಲದೆ ಕೆಸರುಮಯವಾಗಿರುವ ಜಾಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರೆ ಹಿಂತಿರುಗಿ ನೋಡಿದಾಗ ಕಾರಿನ ಹಿಂಬದಿಯ ಗಾಜು ಸಂಪೂರ್ಣ ಕೆಸರು, ಕೊಳೆಯಿಂದ ಆವೃತವಾಗಿರುತ್ತದೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಆಗ ಕಾರಿನ ರೇರ್ ವೈಪರ್ ಉಪಯೋಗಕ್ಕೆ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾರಿನ ರೇರ್ ವಿಂಡ್ ಷೀಲ್ಡ್ ವೈಪರ್'ನ ಉಪಯುಕ್ತತೆಯ ಬಗ್ಗೆ ಅರಿವಾಗುತ್ತದೆ.ರೇರ್ ವಿಂಡ್‌ಶೀಲ್ಡ್ ವೈಪರ್‌ಗಳು ಕಾರಿನಲ್ಲಿರುವ ಸಂಪೂರ್ಣ ಉಪಯುಕ್ತ ಫೀಚರ್ ಗಳಲ್ಲಿ ಒಂದಾಗಿವೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಭಾರತದ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಈ ವಾತಾವರಣದಲ್ಲಿ ಹಲವಾರು ಜನರು ದೂರದ ಊರುಗಳಿಗೆ ಪ್ರಯಾಣ ಮಾಡಲು ಬಯಸುತ್ತಾರೆ. ಮಳೆಗಾಲದಲ್ಲಿ ಪ್ರಯಾಣ ಬೆಳೆಸುವುದು ಮನಸ್ಸಿಗೆ ಮುದ ನೀಡುತ್ತದೆ. ಆದರೆ ವಾಸ್ತವವಾಗಿ ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವುದು ಸಾಮಾನ್ಯ ದಿನಗಳಲ್ಲಿ ವಾಹನ ಚಾಲನೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಮಳೆಗಾಲದಲ್ಲಿ ತೇವ ಹಾಗೂ ಜಾರುವ ರಸ್ತೆಯಲ್ಲಿ ವಾಹನಗಳು ಚಲಿಸ ಬೇಕಾಗುತ್ತದೆ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ಹಲವು ಸಂಗತಿಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಮೊದಲನೆಯದಾಗಿ ಒದ್ದೆಯಾದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ನಿಧಾನವಾಗಿ ಚಲಿಸುವುದು ತಪ್ಪಲ್ಲ. ಈ ಲೇಖನದಲ್ಲಿ ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳು ಯಾವುವು ಎಂಬುದನ್ನು ನೋಡುವುದಾದರೆ...

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಮಳೆಗಾಲದಲ್ಲಿ ರಸ್ತೆಗಳು ಜಾರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ಸಂದರ್ಭಗಳಲ್ಲಿ ಹಾಳಾಗಿರುವ ಟಯರ್‌ಗಳನ್ನು ಹೊಂದಿರುವ ವಾಹನಗಳನ್ನು ಚಾಲನೆ ಮಾಡಿದರೆ ಅಪಾಯಕ್ಕೆ ಸಿಲುಕುವುದು ಖಚಿತ. ಕೆಲವೊಮ್ಮೆ ಅಪಘಾತಗಳ ಸಾಧ್ಯತೆ ಕೂಡ ಇರುತ್ತದೆ. ಈ ಕಾರಣಕ್ಕೆ ಟಯರ್‌ಗಳು ಹಾಳಾಗಿದ್ದರೆ ಅಥವಾ ಹಳೆಯದಾಗಿದ್ದರೆ ತಕ್ಷಣವೇ ಅವುಗಳನ್ನು ಬದಲಾಯಿಸಿ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ಮಳೆಗಾಲ ಆರಂಭವಾಗಿದ್ದರೆ ವಾಹನದ ಟಯರ್‌ಗಳು ಹಾಳಾಗಿವೆಯೇ ಅಥವಾ ಹಳೆಯದಾಗಿವೆಯೇ ಎಂಬುದನ್ನು ಪರಿಶೀಲಿಸಿ ತಕ್ಷಣವೇ ಅವುಗಳನ್ನು ಬದಲಿಸಿ, ಅಪಾಯ ಸಂಭವಿಸುವುದನ್ನು ತಪ್ಪಿಸಿ.

ರೇರ್ ವಿಂಡ್‌ಶೀಲ್ಡ್ ವೈಪರ್'ಗಳಿಂದಾಗುವ ಪ್ರಯೋಜನಗಳಿವು

ಕೆಲವೊಮ್ಮೆ ಮಳೆಗಾಲದಲ್ಲಿ ಬ್ರೇಕ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಈ ಕಾರಣಕ್ಕಾಗಿಯೇ ಮಳೆಗಾಲದಲ್ಲಿ ವಾಹನಗಳನ್ನು ವೇಗವಾಗಿ ಚಾಲನೆ ಮಾಡಬೇಡಿ ಎಂದು ಸಲಹೆ ನೀಡಲಾಗುತ್ತದೆ. ಮಳೆ ಬೀಳುವಾಗ ವೇಗವಾಗಿ ವಾಹನ ಚಾಲನೆ ಮಾಡಿದರೆ ವಾಹನದ ಬ್ರೇಕ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರಬಹುದು. ಹೊಸ ಬ್ರೇಕ್ ಸಿಸ್ಟಂ ಅಳವಡಿಸಿದ್ದರೂ ಸಹ ಹಠಾತ್ ಆಗಿ ಬ್ರೇಕ್ ಹಾಕುವ ಸಂದರ್ಭ ಎದುರಾಗುವುದನ್ನು ತಪ್ಪಿಸಿ.

ಚಕ್ರ ವಾಹನ ಚಾಲನೆ ಮಾಡುವಾಗ ಇದ್ದಕ್ಕಿದ್ದಂತೆ ಮಳೆ ಬಂದರೆ ಹತ್ತಿರದಲ್ಲಿರುವ ಯಾವುದಾದರೂ ಅಂಗಡಿ ಅಥವಾ ತಂಗುದಾಣಗಳಿದ್ದರೆ ಅಲ್ಲಿ ನಿಲ್ಲಿ. ಮಳೆ ಬೀಳುವಾಗ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ರಸ್ತೆಗಳು ಸ್ಪಷ್ಟವಾಗಿ ಕಾಣುವುದಿಲ್ಲ. ರಸ್ತೆಗಳು ಸ್ಪಷ್ಟವಾಗಿ ಕಾಣದೇ ಇದ್ದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಕಾರುಗಳು ಮಳೆಯಲ್ಲಿ ಸಂಪೂರ್ಣವಾಗಿ ತೇವವಾದರೆ ವೈಪರ್'ಗಳನ್ನು ಆನ್ ಮಾಡಿ ವಿಂಡ್ ಶೀಲ್ಡ್ ಸ್ಪಷ್ಟವಾಗಿ ಕಾಣಿಸಿದ ನಂತರವೇ ಮುಂದೆ ಚಲಿಸಿ.

ಒಂದು ವೇಳೆ ನೀವು ಮಳೆಯಲ್ಲಿ ಸಂಪೂರ್ಣವಾಗಿ ನೆನೆದಿದ್ದರೆ ತಕ್ಷಣವೇ ಕಾರಿನಲ್ಲಿ ಕುಳಿತು ಕೊಳ್ಳದಿರಿ. ಮಳೆಯಲ್ಲಿ ನೆನೆದು ಕಾರಿನಲ್ಲಿ ಕುಳಿತು ಕೊಳ್ಳುವುದರಿಂದ ಕಾರಿನ ಕ್ಯಾಬಿನ್ ಒದ್ದೆಯಾಗಿ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಈ ಕೆಟ್ಟ ವಾಸನೆಯನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ.

Most Read Articles

Kannada
English summary
Benefits of rear windshield wipers in car details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X