ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಬಹು ನಿರೀಕ್ಷಿತ ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ. ಈ ಹೊಸ ನೀತಿಯಡಿಯಲ್ಲಿ ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡುವವರು ಹೊಸ ಕಾರುಗಳನ್ನು ಖರೀದಿಸುವಾಗ ರಸ್ತೆ ತೆರಿಗೆಯಿಂದ ರಿಯಾಯಿತಿ ಪಡೆಯಬಹುದು.

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಪ್ರಯಾಣಿಕರ ವಾಹನಗಳ ಮಾಲೀಕರು 25%ವರೆಗೆ ರಿಯಾಯಿತಿ. ವಾಣಿಜ್ಯ ವಾಹನಗಳ ಮಾಲೀಕರು 15%ವರೆಗೆ ರಿಯಾಯಿತಿ ಪಡೆಯಬಹುದು. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಪ್ರಮಾಣಪತ್ರವನ್ನು ಹೊಂದಿರುವುದರ ಜೊತೆಗೆ, ಹೊಸ ವಾಹನಗಳನ್ನು ಖರೀದಿಸುವಾಗ ನೋಂದಣಿ ಶುಲ್ಕದಿಂದ ವಿನಾಯಿತಿ ಪಡೆಯಬಹುದು.

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಪ್ರಮಾಣಪತ್ರವನ್ನು ಹೊಂದಿರುವ ಗ್ರಾಹಕರಿಗೆ ಆಟೋಮೊಬೈಲ್ ಕಂಪೆನಿಗಳು 5% ರಿಯಾಯಿತಿ ನೀಡುವಂತೆ ಸೂಚಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಇದೇ ವೇಳೆ ನೋಂದಣಿ ಪ್ರಮಾಣಪತ್ರ ನವೀಕರಣ ಹಾಗೂ ಹಳೆಯ ವಾಹನಗಳ ಎಫ್‌ಸಿ ಶುಲ್ಕವನ್ನು ಹೆಚ್ಚಿಸಿ ಸಾರಿಗೆ ಇಲಾಖೆಯು ಆದೇಶ ಹೊರಡಿಸಿದೆ. ಇದರಿಂದ ಜನರು ಹಳೆಯ ವಾಹನಗಳನ್ನು ಬಳಸುವುದು ತಪ್ಪುತ್ತದೆ ಎಂಬುದು ಸರ್ಕಾರದ ಅಭಿಪ್ರಾಯ.

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಯಾವುದೇ ಖಾಸಗಿ ವಾಹನ ಅಥವಾ ವಾಣಿಜ್ಯ ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅಥವಾ ಆ ವಾಹನಗಳ ಮಾಲೀಕರು ಸಮಯಕ್ಕೆ ಸರಿಯಾಗಿ ದಾಖಲೆಯನ್ನು ನವೀಕರಿಸಲು ವಿಫಲವಾದರೆ ವಾಹನಗಳ ಅವಧಿ ಮೀರಿದೆ ಎಂದು ಘೋಷಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಇದರ ಜೊತೆಗೆ ಹಳೆಯ ವಾಹನಗಳಿಗೆ ರಾಜ್ಯ ಸರ್ಕಾರಗಳು ಹಸಿರು ತೆರಿಗೆಯನ್ನು ವಿಧಿಸಲಿವೆ. ಸ್ಕ್ರ್ಯಾಪಿಂಗ್ ಕೇಂದ್ರಗಳು ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಬಗ್ಗೆ ಎಲ್ಲಾ ಮಾಹಿತಿಯನ್ನು ನಿರ್ವಹಣೆ ಮಾಡಲಿವೆ.

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಮೊದಲು ವಾಹನದ ಮಾಲೀಕರ ಬಗೆಗಿನ ಮಾಹಿತಿಯನ್ನು ಡೇಟಾಬೇಸ್'ನಿಂದ ಪರಿಶೀಲಿಸಲಾಗುತ್ತದೆ. ಕದ್ದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮತಿ ನೀಡಲಾಗುವುದಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ವಾಹನ ಮಾಲೀಕರು ತಮ್ಮ ವಾಹನವನ್ನು ಭಾರತದ ಯಾವುದೇ ಭಾಗದಲ್ಲಿರುವ ಯಾವುದೇ ಸ್ಕ್ರ್ಯಾಪಿಂಗ್ ಕೇಂದ್ರದಲ್ಲಿ ಸ್ಕ್ರ್ಯಾಪ್ ಮಾಡಬಹುದು. ಬೆಂಕಿ, ಗಲಭೆ ಹಾಗೂ ಇನ್ನಿತರ ದುರಂತಗಳಲ್ಲಿ ಹಾನಿಗೊಳಗಾದ ವಾಹನಗಳನ್ನು ಸಹ ಸ್ಕ್ರ್ಯಾಪ್ ಮಾಡಬಹುದು.

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ವಾಯುಮಾಲಿನ್ಯ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ಅಭಿಪ್ರಾಯ. ಇದರ ಜೊತೆಗೆ ರಸ್ತೆ ಅಪಘಾತ ಪ್ರಮಾಣವು ಸಹ ಕಡಿಮೆಯಾಗುವ ನಿರೀಕ್ಷೆಗಳಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ಈ ಹೊಸ ವಾಹನ ಸ್ಕ್ರ್ಯಾಪಿಂಗ್ ನೀತಿಯಿಂದ ಹಳೆಯ ವಾಹನಗಳಿಂದ ಇಂಧನವು ವಿನಾಕಾರಣ ವ್ಯರ್ಥವಾಗುವುದು ತಪ್ಪಲಿದೆ. ಇದರಿಂದ ಸರ್ಕಾರವು ಇಂಧನದ ಮೇಲೆ ವ್ಯಯಿಸುವ ಕೋಟ್ಯಾಂತರ ರೂಪಾಯಿ ಉಳಿತಾಯವಾಗಲಿದೆ.

ವಾಹನ ಸ್ಕ್ರ್ಯಾಪೇಜ್ ನೀತಿಯಿಂದ ಹಳೆ ವಾಹನ ಮಾಲೀಕರಿಗಾಗುವ ಪ್ರಯೋಜನಗಳಿವು

ವಾಯುಮಾಲಿನ್ಯ, ರಸ್ತೆ ಅಪಘಾತ ಹಾಗೂ ಕಚ್ಚಾ ತೈಲ ಆಮದು ಹೆಚ್ಚಳ ಭಾರತದ ಪ್ರಮುಖ ಸಮಸ್ಯೆಗಳಾಗಿವೆ ಎಂಬುದು ಗಮನಾರ್ಹ. ಹಳೆಯ ವಾಹನಗಳಿಗೆ ಸ್ಕ್ರ್ಯಾಪೇಜ್ ನೀತಿ ಜಾರಿಗೊಳಿಸಿರುವುದರಿಂದ ಹೊಸ ವಾಹನಗಳ ಮಾರಾಟವು ಹೆಚ್ಚಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Benefits to old vehicle owners from vehicle scrappage policy. Read in Kannada.
Story first published: Friday, March 19, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X