ಭಾರತದಲ್ಲಿ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ 7-ಸೀಟರ್ ಕಾರುಗಳಿವು
ದೇಶಿಯ ಮಾರುಕಟ್ತೆಯಲ್ಲಿ ದಿನದಂದ ದಿನಕ್ಕೆ 7-ಸೀಟರ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು 7-ಸೀಟರ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇದರಿಂದ ಭಾರತದಲ್ಲಿ 7-ಸೀಟರ್ ಮಾದರಿಗಳ ವಿಭಾಗದಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳಿವೆ.

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಎಸ್‍ಯುವಿಯ 7-ಸೀಟರ್ ಮಾದರಿಯಾಗಿ ಸಫಾರಿ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಇದೇ ಸಾಲಿಗೆ ಹೆಕ್ಟರ್ ಪ್ಲಸ್ ಎಸ್‍ಯುವಿಯು ಕೂಡ ಸೇರುತ್ತದೆ. ಭಾರತದಲ್ಲಿ ಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ದೊಡ್ಡ ಕುಟುಂಬಗಳು ಹೆಚ್ಚು ಇವೆ. ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡಲು 7-ಸೀಟರ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ 7-ಸೀಟರ್ ಕಾರು ಹೆಚ್ಚು ದುಬಾರಿ ಎಂದುಕೊಂಡು ಹೆಚ್ಚಿನ ಜನರು ಖರೀದಿಸಲು ಹಿಂದೇಟು ಹಾಕುತ್ತಾರೆ.

ಆದರೆ ಬಾರತೀಯ ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ಕಾರು ತಯಾರಕ ಕಂಪನಿಗಳ 7-ಸೀಟರ್ ಕಾರುಗಳನ್ನು ಕೈಗೆಡುಕುವ ದರದಲ್ಲಿ ಲಭ್ಯವಿದೆ. ಭಾರತದಲ್ಲಿ ಲಭ್ಯವಿರುವ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ 7-ಸೀಟರ್ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರೆನಾಲ್ಟ್ ಟ್ರೈಬರ್
ಫ್ರೆಂಚ್ ವಾಹನ ತಯಾರಕ ರೆನಾಲ್ಟ್ ಪ್ರಸ್ತುತ ಟ್ರೈಬರ್ ಮಲ್ಟಿ-ಯುಟಿಲಿಟಿ ವಾಹನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಈ ಮಾದರಿಯು 7 ಆಯ್ಕೆಯನ್ನು ಹೊಂದಿದೆ. ಈ ರೆನಾಲ್ಟ್ ಟ್ರೈಬರ್ ಕಾರಿನ ಆರಂಭಿಕ ಬೆಲೆಯು ರೂ.5.50 ಲಕ್ಷಗಳಾಗಿದೆ.

ಈ ಟ್ರೈಬರ್ ಎಂಪಿವಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 70 ಬಿಎಚ್‌ಪಿ ಪವರ್ ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ದಟ್ಸನ್ ಗೋ ಪ್ಲಸ್
ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಎಂಯುವಿಯಾದ ದಟ್ಸನ್ ಗೋ ಪ್ಲಸ್ ಕೈಗೆಟಿಕುದರ ದರದಲ್ಲಿ ಲಭ್ಯವಿರುವ 7-ಸೀಟರ್ ಮಾದರಿಯಾಗಿದೆ. ಈ ದಟ್ಸನ್ ಗೋ ಪ್ಲಸ್ ಕಾರಿನ ಆರಂಭಿಕ ಬೆಲೆಯು ರೂ.4.26 ಲಕ್ಷಗಳಾಗಿದೆ.

ಈ ದಟ್ಸನ್ ಗೋ ಪ್ಲಸ್ ಕಾರಿನಲ್ಲಿ 1.2-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 76 ಬಿಹೆಚ್ಪಿ ಪವರ್ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಹೀಂದ್ರಾ ಬೊಲೆರೊ
ರಗಡ್ ಲುಕ್ ಹೊಂದಿರುವ ಮಹೀಂದ್ರಾ ಬೊಲೆರೊ ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಭಾರತದ ಹೆಚ್ಚು ಮಾರಾಟವಾದ ಎಸ್‍ಯುವಿಯಾಗಿದೆ. 2000ರಲ್ಲಿ ಬಿಡುಗಡೆಯಾದಗಿನಿಂದ ಕಂಪನಿಯು 13 ಲಕ್ಷ ಯುನಿಟ್ ಗಳನ್ನು ಮಾರಾಟ ಮಾಡಿದೆ. ಈ ಬೊಲೆರೊ ಮಾದರಿಯ ಆರಂಭಿಕ ಬೆಲೆಯು ರೂ.8.62 ಲಕ್ಷಗಳಾಗಿದೆ.

ಈ ಬೊಲೆರೊ ಮಾದರಿಯಲ್ಲಿ .5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 75 ಬಿಹೆಚ್ಪಿ ಪವರ್ ಮತ್ತು 210 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ
ಮಹೀಂದ್ರಾ ಹೊಸ ಬೊಲೆರೊ ನಿಯೋ ಆಗಿ ಟಿಯುವಿ 300 ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮತ್ತೆ ಪರಿಚಯಿಸಿದೆ. ಇದರ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ ಮಾದರಿಯ ಆರಂಭಿಕ ಬೆಲೆಯು ರೂ.8.48 ಲಕ್ಷಗಳಾಗಿದೆ.

ಈ ಬೊಲೆರೊ ನಿಯೋ ಎಸ್‍ಯುವಿಯಲ್ಲಿ 1.5 ಎಲ್, 3-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 100 ಬಿಹೆಚ್ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರುತಿ ಸುಜುಕಿ ಎರ್ಟಿಗಾ
ಮಾರುತಿ ಸುಜುಕಿ ಎರ್ಟಿಗಾ ಪ್ರಸ್ತುತ ಭಾರತದ ಹೆಚ್ಚು ಮಾರಾಟವಾದ ಎಂಪಿವಿ ಆಗಿದೆ. ಈ ಎರ್ಟಿಗಾ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯ ಆರಂಭಿಕ ಬೆಲೆಯು ರೂ.7.78 ಲಕ್ಷಗಳಾಗಿದೆ.

ಈ ಎರ್ಟಿಗಾ ಮಾದರಿಯಲ್ಲಿ ಎಸ್‌ಎಚ್‌ವಿಎಸ್ ಮೈಲ್ಡ್ ಸಿಸ್ಟಂ ಹೊಂದಿರುವ 1.5 ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಬಿಹೆಚ್ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕರ್ನಾವಾಟರ್ ಅನ್ನು ಜೋಡಿಸಲಾಗಿದೆ.


Click it and Unblock the Notifications








