ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಕಾರುಗಳು ಬಂದು ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಇದರಲ್ಲಿ ಕೆಲವು ವಾಹನಗಳು ಮಾತ್ರ ಗ್ರಾಹಕರ ಗಮನಸೆಳೆಯುತ್ತದೆ. ಕೆಲವು ಕಾರುಗಳು ಗ್ರಾಹಕರ ಗಮನಸೆಳೆಯಲು ಸಾಧ್ಯವಾಗದೇ ಇತಿಹಾಸದ ಪುಟ ಸೇರುತ್ತದೆ.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಭಾರತದಲ್ಲಿ ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ಇರುವ ಹಾಗೇ ಭಾರತದಲ್ಲಿ ಹಲವು ಜನಪ್ರಿಯ ವಾಹನಗಳಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ಕೆಲವರು ವಾಹನಗಳ ಜೊತೆ ಭಾವನಾತ್ಮಕ ಸಂಬಂಧವಿರುತ್ತದೆ ಮತ್ತು ಹಲವು ನೆನಪುಗಳಿರುತ್ತದೆ. ತಮ್ಮ ಪ್ರೀತಿ ಪಾತ್ರದವರ ಜೊತೆ ಕಾರಿನ ಕಳೆದ ನೆನಪುಗಳಿರುತ್ತದೆ. ಇದರಿಂದ ಹಲವಾರು ಹೊಸ ಕಾರುಗಳನ್ನು ಖರೀದಿಸಿದರು ತಮ್ಮ ಹಳೆಯ ಕಾರನ್ನು ಮಾರಾಟಗೊಳಿಸುವುದಿಲ್ಲ.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಹೀಗೆ ಭಾರತದಲ್ಲಿ ಹಲವು ಕಾರುಗಳು ಗ್ರಾಹಕರ ಗಮನವನ್ನು ಸೆಳೆದಿದೆ. ಇಂತಹ ಜನಪ್ರಿಯ ಕಾರುಗಳು ಇತಿಹಾಸದ ಪುಟಗಳನ್ನು ಸೇರಿದೆ. ಕಳೆದ ಐದು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳ ಮಾಹಿತಿ ಇಲ್ಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಮಾರುತಿ ಜಿಪ್ಸಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜಿಪ್ಸಿಯನ್ನು 1985ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿತು. ಈ ವಾಹನವು ಹಲವು ಗ್ರಾಹಕರ ಗಮನಸೆಳೆಯಿತು. ಅದರಲ್ಲಿ ಆಫ್-ರೋಡ್ ಪ್ರಿಯರ ಮೆಚ್ಚಿನ ವಾಹನಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಆದರೆ ಹೊಸ ಸುರಕ್ಷತಾ ನಿಯಮ ಜಾರಿಯಾದ ಸಮಯದಲ್ಲಿ ಜಿಪ್ಸಿಯು ಈ ನಿಯಮಕ್ಕೆ ಅನುಗುಣವಾಗಿರಲಿಲ್ಲ. ಕೊನೆಗೆ ಮಾರುತಿ ಸುಜುಕಿ ಕಂಪನಿಯು 2019ರ ಮಾರ್ಚ್ ತಿಂಗಳಿನಲ್ಲಿ ಜಿಪ್ಸಿಯನ್ನು ಭಾರತದಲ್ಲಿ ಸ್ಥಗಿತಗೊಳಿಸಿದರು. 2020ರಲ್ಲಿ ಭಾರತೀಯ ಸೇನೆಯು ನೀಡಿದ ವಿಶೇಷ ಆದೇಶವನ್ನು ಅನುಸರಿಸಿ ಮಾರುತಿ ಸುಜುಕಿ ಕಂಪನಿಯು ಸೇನೆಗೆ ಸೀಮಿತವಾಗಿ ಇದನ್ನು ಉತ್ಪಾದಿಸಿ ನೀಡಲಾಗುತ್ತಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಮಾರುತಿ ಆಲ್ಟೋ ಕೆ10

ಈ ಮಾರುತಿ ಆಲ್ಟೊ ಕೆ10 ಭಾರತದ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ, ಕಡಿಮೆ ಬೆಲೆಯ ಈ ಮಾರುತಿ ಆಲ್ಟೊ ಕೆ10 ಕಾರು ಭಾರತೀಯ ಮಾರುಕಟ್ತೆಯಲ್ಲಿ ಉತ್ತಮ ಮಾರಾಟವನ್ನು ಕಂಡಿದೆ. ಮಧ್ಯಮವರ್ಗದ ಜನರ ಮೆಚ್ಚಿನ ಆಯ್ಕೆಯಾಗಿತ್ತು.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಈ ಕಾರನ್ನು 2010ರ ಆಗಸ್ಟ್ ತಿಂಗಳಿನ ಮೊದಲ ಬಾರಿಗೆ ಬಿಡುಗಡೆಗೊಳಿಸಿದರು. ಬಳಿಕ ಈ ಕಾರನ್ನು ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸ್ಥಗಿತಗೊಳಿಸಿದರು. ಮಾರುತಿ ಸುಜುಕಿ ಕಂಪನಿಯು ನಂತರ ಎಸ್-ಪ್ರೆಸ್ಸೊ ಕಾರನ್ನು ಬಿಡುಗಡೆಗೊಳಿಸಿದ್ದರು. ಇದರ ಮಾರಾಟವನ್ನು ಹೆಚ್ಚಿಸಲು ಆಲ್ಟೊ ಕೆ10 ಕಾರನ್ನು ಸ್ಥಗಿತಗೊಳಿಸಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಮಾರುತಿ ರಿಟ್ಜ್

ಮಾರುತಿ ಸುಜುಕಿ ಕಂಪನಿಯ ರಿಟ್ಜ್ ಕಾರು ದೊಡ್ಡ ಯಶಸ್ಸನ್ನು ಗಳಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಈ ಕಾರು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿತ್ತು. ಆದರೆ ತಯಾರಕರು ನಿರೀಕ್ಷಿಸಿದ ಮಾರಾಟ ಸಂಖ್ಯೆಯನ್ನು ಸಾಧಿಸಲು ಇದು ಎಂದಿಗೂ ಸಾಧ್ಯವಾಗಲಿಲ್ಲ.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಇದರಿಂದ ಮಾರುತಿ ಸುಜುಕಿ ಕಂಪನಿಯು 2017ರ ಫೆಬ್ರವರಿ ತಿಂಗಳಿನಲ್ಲಿ ಮಾರುತಿ ರಿಟ್ಜ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದರು. ಇದರ ಉತ್ತರಾಧಿಕಾರಿಯಾಗಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಕಾರನ್ನು ಭಾರತದಲ್ಲಿ ಪರಿಚಯಿಸಿದ್ದರು.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಟೊಯೊಟಾ ಕೊರೊಲ್ಲಾ ಆಲ್ಟಿಸ್

ಈ ಕಾರು ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ಆದರೆ ಟೊಯೊಟಾ ಕೊರೊಲ್ಲಾ ಭಾರತದಲ್ಲಿ ದೊಡ್ಡ ಯಶಸ್ಸನ್ನು ಗಳಿಸಲು ಸಾಧ್ಯವಾಗಿಲ್ಲ. ಈ ಕಾರನ್ನು ಭಾರತದಲ್ಲಿ 2003ರ ಫೆಬ್ರವರಿ ತಿಂಗಳಿನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

2008ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರು ಕೊರೊಲ್ಲಾ ಆಲ್ಟಿಸ್ ಆಗಿ ಮಾರ್ಪಟ್ಟಿತು. ದುಃಖಕರವೆಂದರೆ ಈ ಕಾರನ್ನು ಮಾರಾಟದಲ್ಲಿ ಗಣನೀಯವಾಗಿ ಕುಸಿತ ಕಾರಣ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸ್ಥಗಿತಗೊಳಿಸಿದರು.

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಹೋಂಡಾ ಸಿವಿಕ್

ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸಿವಿಕ್ ಕಾರನ್ನು 2006ರ ಜುಲೈ ತಿಂಗಳಿನಲ್ಲಿ ಪರಿಚಯಿಸಿತು. ಆದರೆ ಈ ಕಾರನ್ನು 2012ರ ಆಗಸ್ಟ್ ತಿಂಗಳಿನಲ್ಲಿ ಸ್ಥಗಿತಗೊಳಿಸಿದರು. ನಂತರ ಹೋಂಡಾ ಕಂಪನಿಯು 2019ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪುನಃ ಪರಿಚಯಿಸಿದರು,

ಭಾರತದಲ್ಲಿ ಕಳೆದ 5 ವರ್ಷದಲ್ಲಿ ಸ್ಥಗಿತಕೊಂಡ ಜನಪ್ರಿಯ ಕಾರುಗಳಿವು

ಆದರೆ ಇದು ಭಾರತೀಯ ಮಾರುಕಟ್ಟೆಯಲ್ಲಿ ನಂತರ ಅಷ್ಟು ಜನಪ್ರಿಯತೆಯನ್ನು ಗಳಿಸಿಲ್ಲ. ಹೋಂಡಾ ತನ್ನ ಗ್ರೇಟರ್ ನೋಯ್ಡಾ ಸ್ಥಾವರವನ್ನು ಮುಚ್ಚಿದ ನಂತರ 2020ರ ಡಿಸೆಂಬರ್ ತಿಂಗಳಿನಲ್ಲಿ ಸಿವಿಕ್ ಅನ್ನು ಮತ್ತೊಮ್ಮೆ ಸ್ಥಗಿತಗೊಳಿಸಿದರು..

Most Read Articles

Kannada
English summary
Top Cars That Were Discontinued In India In Last 5 Years. Read In Kananda.
Story first published: Thursday, May 6, 2021, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X