ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

ಭಾರತದಲ್ಲಿ ಕಾರು ಖರೀದಿಸುವ ಗ್ರಾಹಕರು ಮೊದಲು ನೋಡುವುದು ಆ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂದು. ಇನ್ನು ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತವೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇಂಧನ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯ ಬಂದಾಗ ಸಿಎನ್‌ಜಿ ಕಾರುಗಳು ಆಯ್ಕೆ ಮಾಡಿಕೊಳ್ಳಬಹುದು. ಸಿಎನ್‌ಜಿ ಕಾರುಗಳನ್ನು ಬಳಿಸಿದರೆ ಇಂಧನಕ್ಕೆ ಖರ್ಚು ಮಾಡುವ ಹಣ ಸ್ವಲ್ಪ ಪ್ರಮಾಣದಲ್ಲಿ ಉಳಿತಾಯ ಮಾಡಿಕೊಳ್ಳಬಹುದು. ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Maruti Suzuki WagonR

WagonR ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ WagonR ಟಾಲ್ ಬಾಯ್ ಎಂದೇ ಪ್ರಸಿದ್ದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಕಾರು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. Maruti Suzuki WagonR ಸಿಎನ್‌ಜಿ ಮಾದರಿಯ ಮೂರು ಲಕ್ಷಕ್ಕೂ ಅಧಿಕ ಯುನಿಟ್ ಗಳು ಮಾರಾಟವಾಗಿವೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

ಇನ್ನು ಈ WagonR ಸಿಎನ್‌ಜಿ ಆವೃತ್ತಿಯಲ್ಲಿ ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಡ್ಯುಯಲ್ ಇಸಿಯುಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಿಎನ್‌ಜಿ ಆವೃತ್ತಿಗಳಲ್ಲಿ ವ್ಯಾಗನ್ಆರ್ ಸಿಎನ್‌ಜಿ ಕೂಡ ಒಂದಾಗಿದೆ. ಈ ಕಾರು 32.52 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Maruti Suzuki Alto

Maruti Suzuki Alto ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಮಧ್ಯಮವರ್ಗದ ಜನರ ಮೆಚ್ಚಿನ ಆಯ್ಕೆಯಾಗಿದೆ ಈ ಕಾರು. ಇದರ ಜನಪ್ರಿಯತೆಗೆ ಸಾಟಿಯಿಲ್ಲವೆಂದು ಹೇಳಬಹುದು. ಈ ಕಾರಿನಲ್ಲಿ ಮೈಲ್ಡ್ ಎಸ್-ಸಿಎನ್‌ಜಿ ತಂತ್ರಜ್ಞಾನವನ್ನು ಸಹ ಪಡೆಯುತ್ತದೆ, ಇದನ್ನು ನೀವು ಕಂಪನಿಯು ಅಳವಡಿಸಿದ ಸಿಎನ್‌ಜಿ ಎಂದು ಕರೆಯಬಹುದು.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

ಸಿಎನ್‌ಜಿ ಇಂಧನ ಆಯ್ಕೆಯು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ. ಈ Maruti Suzuki Alto ಸಿಎನ್‌ಜಿ ಕಾರು 31.59 ಕಿ.ಮೀ ಮೈಲೇಜ್ ಅನ್ನು ನಿರೀಕ್ಷಿಸಬಹುದು. ಸ್ಟ್ಯಾಂಡರ್ಡ್ ಆಲ್ಟೋ ಕಾರಿನಲ್ಲಿ 0.8-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 48 ಬಿಹೆಚ್‍ಪಿ ಪವರ್ ಮತ್ತು 69 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Maruti Suzuki S-Presso

ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳ ಪಟ್ಟಿಯಲ್ಲಿ ಬಹುಪಾಲು Maruti Suzuki ಕಾರುಗಳಿವೆ. Maruti Suzuki S-Presso ಸಿಎನ್‌ಜಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು, ನಂತರ ಇದನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ S-Presso ಸಿಎನ್‌ಜಿ ಕಾರು 31.2 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

ಇನ್ನು Maruti Suzuki ಕಂಪನಿಯು ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ Celerio ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಹೊಸ Maruti Celerio ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ನ್ಯೂ ಜನರೇಷನ್ Maruti Celerio ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ. ಈ Maruti Celerio ಹೊಸದಾಗಿ ವಿನ್ಯಾಸಗೊಳಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Maruti Suzuki Celerio

Celerio ಕಾರು 5 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ಬದಲಾವಣೆಗಳಿಲ್ಲದೇ ಇದೇ ಮಾದರಿ ಮಾರಾಟವಾಗುತ್ತಿದೆ. ಶೀಘ್ರದಲ್ಲೇ Celerio ಕಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ. ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಸೆಲೆರಿಯೊ ಎಸ್-ಸಿಎನ್‌ಜಿ ತಂತ್ರಜ್ಞಾನವನ್ನು ಸಹ ಪಡೆದುಕೊಂಡಿದೆ. ಇದು ಗ್ರಾಹಕರಿಗೆ ತಮ್ಮ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೆಲೆರಿಯೊ ಸಿಎನ್‌ಜಿ ಸುಮಾರು 31 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Hyundai Santro

ಮೊದಲ ಬಾರಿಗೆ ಹ್ಯುಂಡೈ ಕಂಪನಿಯು ಮಾರುತಿ ಸುಜುಕಿ ಕಾರುಗಳಿಗೆ ಪೈಪೋಟಿ ನೀಡಲು ನಿರ್ಧರಿಸಿದಾಗ Hyundai ಕಂಪನಿಯು ಸಿಎನ್ ಜಿ ತಂತ್ರಜ್ಞಾನದೊಂದಿಗೆ Santro ಕಾರನ್ನು ಪರಿಚಯಿಸಿದರು. ಮಾರುತಿಯ S-CNG ಕಾರುಗಳಲ್ಲಿ ವೈಶಿಷ್ಟ್ಯಗಳ ಕೊರತೆಯಿದೆ ಎನ್ನುವ ಗ್ರಾಹಕರು Hyundai Santro ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಈ ಸ್ಯಾಂಟ್ರೋ ಸ್ಪೋರ್ಟ್ಸ್ ಸಿಎನ್‌ಜಿಯನ್ನು ಹೊಂದಿದ್ದು, ಇದು 29 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Hyundai Aura

ಮಾರುತಿ ಡಿಜೈರ್‌ಗಾಗಿ ಸಿಎನ್‌ಜಿ ತಂತ್ರಜ್ಞಾನವನ್ನು ನಿಲ್ಲಿಸಿದೆ. ಅದೇ ವಿಭಾಗದಲ್ಲಿ ಹ್ಯುಂಡೈ ತನ್ನ Aura ಮಾದರಿಯನ್ನು ಪರಿಚಯಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕೈಕ ಕಾಂಪ್ಯಾಕ್ಟ್ ಸೆಡಾನ್ ಹ್ಯುಂಡೈ ಔರಾ ಕಂಪನಿಯು ಅಳವಡಿಸಿದ ಸಿಎನ್ ಜಿ ಕಿಟ್ ಅನ್ನು ಪಡೆಯುತ್ತದೆ. Hyundai Aura ಸಿಎನ್‌ಜಿ 28 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Maruti Suzuki Ertiga

S-CNG ತಂತ್ರಜ್ಞಾನದೊಂದಿಗೆ ಲಭ್ಯವಿರುವ ಏಕೈಕ MPV ಮಾರುಕಟ್ಟೆಯಲ್ಲಿ Maruti Suzuki Ertiga ಆಗಿದೆ. ಈ Maruti Suzuki Ertiga ಎಂಪಿವಿಯನ್ನು ಬಳಿಸಿ ನಿಮ್ಮ ಇಂಧನ ವೆಚ್ಚವನ್ನು ಉಳಿಸಬಹುದು. ಆದರೆ S-CNG ತಂತ್ರಜ್ಞಾನದಲ್ಲಿ ಪವರ್ ಡೆಲಿವೆರಿ ಸ್ವಲ್ಪ ಮಂದಗತಿಯಲ್ಲಿರುತ್ತದೆ. ಆದರೆ ಸಿಎನ್‌ಜಿ ಹೆಚ್ಚುವರಿ ಅನುಕೂಲಗಳನ್ನು ಹೊಂದಿದೆ. ಈ Maruti Suzuki Ertiga ಎಂಪಿವಿಯು 26 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳಿವು

Maruti Eeco

ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳ ಪಟ್ಟಿಯಲ್ಲಿ Maruti Eeco ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಈ Maruti Eeco ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. Eeco ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಮಾರಾಟವಾಗುತ್ತಿದೆ. Maruti Eeco ಸುಮಾರು 20.88 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Most Read Articles

Kannada
English summary
Best mileage cng cars available in india maruti wagonr alto santro and more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X