ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಎಂಟ್ರಿ ಲೆವೆಲ್ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಎಲ್ಲಾ ವಾಹನ ತಯಾರಕರಿಗೆ ಮಾರಾಟದಲ್ಲಿ ಎಂಟ್ರಿ ಲೆವೆಲ್ ಕಾರುಗಳು ಗಮನಾರ್ಹ ಕೊಡುಗೆಗಳನ್ನು ನೀಡುತ್ತದೆ. ಇದರಿಂದ ವಾಹನ ತಯಾರಕ ಕಂಪನಿಗಳು ಕೂಡ ಎಂಟ್ರಿ ಲೆವೆಲ್ ಕಾರುಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಎಲ್ಲಾ ವಾಹನ ತಯಾರಕರಿಗೆ ಯುಟಿಲಿಟಿ ವೆಹಿಕಲ್ ಸೆಗ್ಮೆಂಟ್ ಮತ್ತು ಬಿ-ಸೆಗ್ಮೆಂಟ್ ವಾಹನಗಳು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಎಂಟ್ರಿ ಲೆವೆಲ್ ಕಾರುಗಳ ಮಾರಾಟವು ಕುಸಿದಿದ್ದರೂ, ಇದು ಪ್ರತಿ ತಿಂಗಳು ಗಮನಾರ್ಹ ಕೊಡುಗೆಯನ್ನು ನೀಡುತ್ತಿದೆ. ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಾರುಗಳ ಮಾಹಿತಿ ಇಲ್ಲಿದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ

ಎಂಟ್ರಿ ಲೆವೆಲ್ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಆಲ್ಟೋ ತನ್ನ ಪ್ರಬಲ್ಯವನ್ನು ಸಾಧಿಸಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಎಂಟ್ರಿ ಲೆವೆಲ್ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಳೆದ ತಿಂಗಳು ದೇಶದಲ್ಲಿ ಆಲ್ಟೊ ಮಾದರಿಯ 12,513 ಯುನಿಟ್‌ಗಳು ಮಾರಾಟವಾಗಿವೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 7,298 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಆ ಮೂಲಕ ಕಳೆದ ತಿಂಗಳು ಮಾರಾಟಕ್ಕೆ ಹೋಲಿಸಿದರೆ ಶೇ 71 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಈ ಮಾರುತಿ ಆಲ್ಟೋ ಕಾರಿನಲ್ಲಿ 0.8-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 47 ಬಿಹೆಚ್‍ಪಿ ಪವರ್ ಮತ್ತು 69 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು . ಸಿಎನ್‌ಜಿ ಆವೃತ್ತಿಯು 6,000 ಆರ್‌ಪಿಎಂನಲ್ಲಿ 40 ಬಿಹೆಚ್‌ಪಿ ಮತ್ತು 3,500 ಆರ್‌ಪಿಎಂನಲ್ಲಿ 60 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಟಾಟಾ ಟಿಯಾಗೋ

ಈ ವಿಭಾಗದ ಮತ್ತೊಂದು ಜನಪ್ರಿಯ ಮಾದರಿ ಟಾಟಾ ಟಿಯಾಗೋ ಆಗಿದೆ. ಎಂಟ್ರಿ ಲೆವೆಲ್ ಕಾರುಗಳ ವಿಭಾಗದಲ್ಲಿ ರಡನೇ ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದೆ. ಕಳೆದ ತಿಂಗಳು ಟಾಟಾ ಟಿಯಾಗೋ ಮಾದರಿಯ 4,881 ಯುನಿಟ್‌ಗಳು ಮಾರಾಟವಾಗಿವೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಇನ್ನು ಕಳೆದ ವರ್ಷದ ಟಾಟಾ ಟಿಯಗೋ ಮಾದರಿಯ 4,069 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಟಾಟಾ ಟಿಯಾಗೋ ಶೇ.20 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಈ ಟಿಯಾಗೋ ಮಾದರಿಯಲ್ಲಿ 1.2-ಲೀಟರ್ ರೆವೊಟ್ರಾನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 84 ಬಿಹೆಚ್ಪಿ ಮತ್ತು 3,300 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ರೆನಾಲ್ಟ್ ಕ್ವಿಡ್

ರೆನಾಲ್ಟ್ ಇಂಡಿಯಾ ಕಂಪನಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಒಂದು ದಶಕದಿಂದಲೂ ಮಾರಾಟವಾಗುತ್ತಿದೆ. ಈ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಎಂಟಿ ಲೆವೆಲ್ ವಿಭಾಗದ ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ಕಳೆದ ತಿಂಗಳಿನಲ್ಲಿ ರೆನಾಲ್ಟ್ ಕ್ವಿಡ್ ಮಾದರಿಯ 2,161 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಇದೇ ತಿಂಗಳಿನಲ್ಲಿ 2,441 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.11 ರಷ್ಟು ಕುಸಿತವಾಗಿದೆ.

ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಎಂಟ್ರಿ ಲೆವೆಲ್ ಕಾರುಗಳಿವು

ರೆನಾಲ್ಟ್ ಕ್ವಿಡ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ 800-ಸಿಸಿ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, ಇದು 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Top-three Entry-level Cars Sold In India In June 2021. Read In Kannada.
Story first published: Saturday, July 17, 2021, 20:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X