ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ (ಡಿಐಸಿವಿ) ಇಂದು ಆರು ಹೊಸ ಟ್ರಕ್, ಎರಡು ಹೊಸ ಬಸ್ ಸೇರಿದಂತೆ ಒಟ್ಟು ಎಂಟು ಹೊಸ ವಾಹನಗಳನ್ನು ಪರಿಚಯಿಸಿದೆ. 2020ರ ಏಪ್ರಿಲ್'ನಲ್ಲಿ ಜಾರಿಗೆ ಬಂದ ಬಿಎಸ್ -6 ನಿಯಮಗಳ ನಂತರ ಭಾರತ್ ಬೆಂಝ್ ತನ್ನ ಮಾರುಕಟ್ಟೆ ಪಾಲನ್ನು ದ್ವಿಗುಣಗೊಳಿಸಿದೆ.

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

ಭಾರತದಲ್ಲಿನ ತನ್ನ ಮಾರಾಟ ಜಾಲವನ್ನು 250 ಪಟ್ಟು ಹೆಚ್ಚಿಸಿದೆ. ಕಂಪನಿಯು ಇಂದು ಆರು ಹೊಸ ಟ್ರಕ್‌ಗಳನ್ನು ಅನಾವರಣಗೊಳಿಸಿದೆ. ಇವುಗಳಲ್ಲಿ ಬೈಸೆಫ್ ಎಕ್ಸ್‌ಪ್ರೆಸ್ (ಲಸಿಕೆ ಸಾಗಣೆ ರೆಫರ್‌ ಟ್ರಕ್), 1917 ಆರ್, 4228 ಆರ್ ಟ್ಯಾಂಕರ್, 1015 ಆರ್ ಪ್ಲಸ್, 42 ಟಿಎಂ-ಕ್ಯಾಬ್ ಹಾಗೂ 2828 ಕನ್'ಸ್ಟ್ರಕ್ಷನ್ ವಾಹನಗಳು ಸೇರಿವೆ. ಈ ವಾಹನಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ.

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

ಇನ್ನು ಕಂಪನಿಯು ಅಭಿವೃದ್ಧಿಪಡಿಸಿರುವ ಬಸ್‌ಗಳಲ್ಲಿ 50 ಸೀಟುಗಳಿವೆ. ಈ ಬಸ್‌ಗಳನ್ನು 1017 ವಿನ್ಯಾಸಗಳಲ್ಲಿ ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ. ಬಸ್ಸುಗಳು ಪ್ಯಾರಾಬೋಲಿಕ್ ಸಸ್ಪೆಂಷನ್'ನೊಂದಿಗೆ 1624 ಚಾಸಿಸ್ ಅನ್ನು ಬಳಸುತ್ತವೆ. ಕಂಪನಿಯು ಈ ವಾಹನಗಳಲ್ಲಿ ಬೈಸ್ಫ್ ಪ್ಯಾಕ್ ಅನ್ನು ಪರಿಚಯಿಸಿದೆ. ಇದರಲ್ಲಿ ಹಲವು ರೀತಿಯ ಸುರಕ್ಷತಾ ಫೀಚರ್'ಗಳನ್ನು ನೀಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

ವೇಗವಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಮಾಜದ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವಿದೆ ಎಂದು ಡೈಮ್ಲರ್ ಕಂಪನಿ ಹೇಳಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕೋವಿಡ್ -19 ಕಂಟೈನ್ ಮೆಂಟ್ ಫೀಚರ್'ಗಳೊಂದಿಗೆ ವಿಶಾಲವಾದ ಟ್ರಕ್‌ಗಳನ್ನು ನೀಡಲಿದೆ.

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

1917 ಆರ್ ಟ್ರಕ್ 20, 22, 24 ಹಾಗೂ 31 ಅಡಿಯ ಲೋಡ್ ಸ್ಪ್ಯಾನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಟ್ರಕ್ ಹೆದ್ದಾರಿಗಳ ಬಳಕೆಗೆ ಸೂಕ್ತವಾಗಿದೆ. ಎಫ್‌ಎಂಸಿಜಿ ಹಾಗೂ ಇ-ಕಾಮರ್ಸ್‌ಗಳ ಸರಕು ಸಾಗಣೆಗೆ ಈ ಟ್ರಕ್ ಉತ್ತಮವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

4228 ಆರ್ ಟ್ರಕ್ ಎಂ ಕ್ಯಾಬ್ ಅನ್ನು ಹೊಂದಿದೆ. ಈ ಟ್ರಕ್‌ನಲ್ಲಿ ಅತಿ ಉದ್ದದ ಲೋಡಿಂಗ್ ಸ್ಪ್ಯಾನ್ ಬಳಸಲಾಗಿದೆ. ಈ ಟ್ರಕ್ ಒಟ್ಟು 31 ಅಡಿ ಲೋಡಿಂಗ್ ಅವಧಿಯನ್ನು ಹೊಂದಿದೆ. ಈ ಟ್ರಕ್ ಪಾರ್ಸೆಲ್‌ ಹಾಗೂ ಕಂಟೇನರ್'ಗಳ ಬಳಕೆಗೆ ಸೂಕ್ತವಾಗಿದೆ.

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

34 ಕಿ.ಲೀ ಟ್ಯಾಂಕರ್ ಹೊಂದಿರುವ 4228 ಆರ್ ನ ವಿಶೇಷ ಆವೃತ್ತಿಯನ್ನು ವ್ಯಾಪಕ ಶ್ರೇಣಿಯ ಸುರಕ್ಷತಾ ಫೀಚರ್'ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಟ್ರಕ್ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಣಿಕೆಗೆ ಸೂಕ್ತವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

ಇನ್ನು ಭಾರತ್‌ಬೆಂಝ್‌ನ 2828 ಸಿ ಟ್ರಕ್ 22 ಘನ ಮೀಟರ್ ಲೋಡಿಂಗ್ ಸಾಮರ್ಥ್ಯದೊಂದಿಗೆ ಕಲ್ಲಿದ್ದಲು ಸಾಗಿಸಲು ಕೋವಿಡ್-ಪ್ರೊಟೆಕ್ಷನ್ ಸೌಲಭ್ಯಗಳನ್ನು ಹೊಂದಿದೆ. ಇದು ಈ ಸೆಗ್'ಮೆಂಟಿನಲ್ಲಿಯೇ ಅತಿ ಉದ್ದದ ವ್ಹೀಲ್‌ಬೇಸ್‌ ಅನ್ನು ಹೊಂದಿದೆ.

ಎಂಟು ಹೊಸ ವಾಹನಗಳನ್ನು ಪರಿಚಯಿಸಿದ ಭಾರತ್ ಬೆಂಝ್

ಕಂಪನಿಯು ಹೊಸದಾಗಿ ಪರಿಚಯಿಸಿರುವ 1017 ಬಸ್ಸಿನಲ್ಲಿ 50 ಜನರು ಕುಳಿತುಕೊಳ್ಳಬಹುದು. ಈ ಬಸ್ ಉದ್ಯೋಗಿಗಳಿಗೆ, ಶಾಲಾ, ಕಾಲೇಜು ಬಳಕೆಗೆ ಸೂಕ್ತವಾಗಿದೆ. ಈ ಬಸ್ಸಿನಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಕಂಪನಿಯು 1624 ಚಾಸಿಸ್ ಬಸ್ ಅನ್ನು ಇಂಟರ್ ಸಿಟಿ ಸಾರಿಗೆಗಾಗಿ ಪರಿಚಯಿಸಿದೆ.

Most Read Articles

Kannada
English summary
Bharat Benz introduces eight new vehicles including special vaccine carrier. Read in Kannada.
Story first published: Wednesday, January 27, 2021, 19:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X