2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯ ಪೆಟ್ರೋಲ್ ವರ್ಷನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ 2 ಸೀರಿಸ್ ಗ್ರ್ಯಾನ್ ಕೂಪೆ ಕಾರು ಮಾದರಿಯನ್ನು ಕಳೆದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸಿತ್ತು. ಮೊದಲ ಹಂತವಾಗಿ ಡೀಸೆಲ್ ಮಾದರಿಯಲ್ಲಿ ಮಾತ್ರ ಹೊಸ ಕಾರನ್ನು ಬಿಡುಗಡೆ ಮಾಡಿದ್ದ ಕಂಪನಿಯು ಇದೀಗ ಪೆಟ್ರೋಲ್ ಮಾದರಿಯಲ್ಲೂ ಮಾರಾಟಕ್ಕೆ ಚಾಲನೆ ನೀಡಿದೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಪೆಟ್ರೋಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.41.90 ಲಕ್ಷ ಬೆಲೆ ಹೊಂದಿದ್ದು, ಡೀಸೆಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 39.3 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 41.40 ಲಕ್ಷ ಬೆಲೆ ಹೊಂದಿದೆ.

ಹೊಸ 2 ಸೀರಿಸ್ ಗ್ರ್ಯಾನ್ ಕೂಪೆ ಕಾರು ಮಾದರಿಯಲ್ಲಿ ಪೆಟ್ರೋಲ್ ಆವೃತ್ತಿಯು 220ಐ ಎಂ ಸ್ಪೋರ್ಟ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದಲ್ಲಿ ಡೀಸೆಲ್ ಮಾದರಿಯು 220ಡಿ ಸ್ಪೋರ್ಟ್ ಮತ್ತು 220ಡಿ ಎಂ ಸ್ಪೋರ್ಟ್ ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಹೊಸ ಕಾರು ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆ ಮಾಡಲಾಗುತ್ತಿರುವ 11ನೇ ಕಾರು ಮಾದರಿಯಾಗಿದ್ದು, 2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯು ಬಿಎಂಡಬ್ಲ್ಯು ಉತ್ಪಾದನೆಯ ಎಂಟ್ರಿ ಲೆವಲ್ ಸೆಡಾನ್ ಮಾದರಿಯಾಗಿದೆ.

ಬಿಎಂಡಬ್ಲ್ಯು ಕಂಪನಿಯು ಹೊಸ ಕಾರನ್ನ ಎಫ್ಎಎಆರ್ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣ ಮಾಡುತ್ತಿದ್ದು, ಹೊಸ ಕಾರು 8 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಿಂದ ಹಲವಾರು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ. 2 ಸೀರಿಸ್ ಗ್ರ್ಯಾನ್ ಕೂಪೆ ಕಾರು ಮಾದರಿಯಲ್ಲಿ ಆಕರ್ಷಕವಾದ ಗ್ರಿಲ್, ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಸ್, ಸ್ಟೈಲಿಷ್ ಆಗಿರುವ ಅಲಾಯ್ ವೀಲ್ಹ್, ವಿಸ್ತರಿತ ಎಲ್ಇಡಿ ಟೈಲ್‌ಲೈಟ್ಸ್, 8 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯ ಇಳಿಜಾರಿನಂತಿರುವ ರೂಫ್ ಲೈನ್ ಸೌಲಭ್ಯವು ಕೂಪೆ ವೈಶಿಷ್ಟ್ಯತೆಗೆ ಪೂರಕವಾಗಿವೆ.

ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಬಳಕೆ ಮಾಡಲಾಗಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ರಿಯರ್ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ಸ್ ಸೌಲಭ್ಯಗಳಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಜಿನ್ ಮತ್ತು ಪರ್ಫಾಮೆನ್ಸ್
2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ ಪೆಟ್ರೋಲ್ ಮಾದರಿಯು 2.0-ಲೀಟರ್ ಟ್ವಿನ್ ಟರ್ಬೋ ಎಂಜಿನ್‌ನೊಂದಿಗೆ 190-ಬಿಎಚ್‌ಪಿ, 280-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಮಾದರಿಯು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 190-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬಿಎಂಡಬ್ಲ್ಯು ಕಂಪನಿಯು ಹೊಸ ಎಂಜಿನ್ ಮೂಲಕ ಐಷಾರಾಮಿ ಕಾರು ಖರೀದಿದಾರರನ್ನು ಸೆಳೆಯಲಿದ್ದು, ಹೊಸ ಎಂಜಿನ್ ಮಾದರಿಯು 7.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಸಾಧಿಸುತ್ತದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಈ ಮೂಲಕ ಮಾರುಕಟ್ಟೆಯಲ್ಲಿರುವ ಜನಪ್ರಿಯವಾಗಿರುವ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಸೆಡಾನ್ ಮಾದರಿಗೆ ಭರ್ಜರಿ ಪೈಟೋಟಿ ನೀಡಲಿದ್ದು, ಹೊಸ ಕಾರು ಚೆನ್ನೈನಲ್ಲಿರುವ ಘಟಕದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಮೇಡ್ ಇನ್ ಇಂಡಿಯಾ ಕಾರು ಮಾದರಿಯಾಗಿ ಹೊರಹೊಮ್ಮಿದೆ.


Click it and Unblock the Notifications








