ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿ ಮಾದರಿಯನ್ನು ಖರೀದಿಸಿದ್ದಾರೆ. ನಟ ವಿಕ್ಕಿ ಕೌಶಲ್ ತಮ್ಮ ಹೊಸ ಕಾರಿನ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ನಟ ವಿಕ್ಕಿ ಕೌಶಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ ನವನೀತ್ ಮೋಟಾರ್ಸ್ ಜಾಗ್ವಾರ್ ಲ್ಯಾಂಡ್ ರೋವರ್ ಮುಂಬೈಗೆ ಧನ್ಯವಾದಗಳನ್ನು ಹೇಳಿದ್ದಾರೆ. ಈ ಡೀಲರ್‌ಶಿಪ್‌ನಿಂದ ಅವರು ಈ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇವರು ಪೋಸ್ಟ್ ಮಾಡಿದ ಚಿತ್ರದ ಕೆಳಗೆ ಅಭಿಮಾನಿಗಳ ಜೊತೆಗೆ ಬಾಲಿವುಡ್ ಅನೇಕ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿ ಶುಭಕೋರಿದ್ದಾರೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ಇನ್ನು ಈ ಫೋಟೊಗೆ ಉರಿ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರು "ಶಾಟ್ ಗನ್! ಅಭಿನಂದನೆಗಳು ನನ್ನ ಸಹೋದರ, ಕಷ್ಟಪಟ್ಟು ಕೆಲಸ ಮಾಡಿ ಉತ್ತಮ ಸಕ್ಸಸ್ ಸಾಧಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ಸದ್ಯ ವಿಕ್ಕಿ ಕೌಶಲ್ ಅವರು ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ವಿಕ್ಕಿ ಕೌಶಲ್ ಅವರು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಇವರು ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಕ್ಕಿ ಕೌಶಲ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ನಟ ವಿಕ್ಕಿ ಕೌಶಲ್ ಅವರ ಬಳಿ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಮತ್ತು ಬಿಎಂಡಬ್ಲ್ಯು ಎಕ್ಸ್5 ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಟ ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಖರೀದಿಸಿದ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ಎಸ್‍ಯುವಿಯಾಗಿದೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

2021ರ ಲ್ಯಾಂಡ್ ರೋವರ್ ರೇಂಜ್ ರೋವರ್ ಲೈನ್-ಅಪ್ ಆರಂಭಿಕ ಬೆಲೆಯು ರೂ.2.01 ಕೋಟಿಯಾಗಿದೆ. ಈ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.64 ಕೋಟಿಯಾಗಿದೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ಈ ಐಷಾರಾಮಿ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಡೀಸೆಲ್ ಮಾದರಿಯಲ್ಲಿ 3.0-ಲೀಟರ್ ಇನ್-ಲೈನ್ ಆರು-ಸಿಲಿಂಡರ್ ಎಂಹೆಚ್‌ಇವಿ ಎಂಜಿನ್ ಅನ್ನು ಹೊಂದಿದೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ಈ ಎಂಜಿನ್ 4000 ಆರ್‌ಪಿಎಂನಲ್ಲಿ 296 ಬಿಹೆಚ್‌ಪಿ ಮತ್ತು 1500-2500 ಆರ್‌ಪಿಎಂ ನಡುವೆ 650 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಪೆಟ್ರೋಲ್ ಮಾದರಿಯಲ್ಲಿ 3.0-ಲೀಟರ್ ಆರು ಸಿಲಿಂಡರ್ ಎಂಹೆಚ್‌ಇವಿ ಎಂಜಿನ್ ಅನ್ನು ಹೊಂದಿದೆ.

ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ 'ಉರಿ' ನಟ ವಿಕ್ಕಿ ಕೌಶಲ್

ಈ ಎಂಜಿನ್ 5500-6000 ಆರ್‌ಪಿಎಂ ನಡುವೆ 394 ಬಿಹೆಚ್‌ಪಿ ಮತ್ತು 2000-5000 ಆರ್‌ಪಿಎಂ ನಡುವೆ ಲಭ್ಯವಿರುವ 550 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Bollywood Actor Vicky Kaushal Buys A Range Rover. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X